ಭಾನುವಾರ, ನವೆಂಬರ್ 7, 2021

ಜೇನು ಜೀವನ (ಕಿರು ಕವಿತೆ) - ಸವಿತಾ ಆರ್ ಅಂಗಡಿ ಮುಧೋಳ.

ಒಂದು ಹೂವಿನ ಬೀಜವು ತಿಪ್ಪೆಯಲ್ಲಿ ಬಿದ್ದರೂ ಅದು ಹೂವನ್ನೇ ಕೊಡುತ್ತದೆ.
 
ಹೀಗೆಯೇ

ಪ್ರಪಂಚವೆಂಬ ದೇವರ ಕೈತೋಟದಲ್ಲಿ ನಾವು ಎಲ್ಲಿದ್ದರೂ ಸುಂದರ ಹೂವಾಗಿ ಅರಳಬೇಕು. 

ಸಂತಸದ ಸುಗಂಧವನ್ನು ನಿತ್ಯನಿರಂತರ ಸೂಸಬೇಕು. 

ಹೀಗೆ

 ಜೀವನದ ಪ್ರತಿ ಕ್ಷಣವೂ ಮಧುರ ವಾಗಿರಬೇಕು ಇದು ಜೇನು ಜೀವನ.

 ಬೆಳೆದುನಿಂತ ಹೋಬಳಿಯಲ್ಲಿ ಎಲೆಗಳಂತೆ ಪುರುಷನಾದರೆ ಹೂ ವಂತೆ ಸ್ತ್ರೀಯು.

 ಬಳ್ಳಿಗೆ ಎಲೆ ಹೂವು ಎರಡೂ ಸಮಾನ. ಬದುಕುವ ಕಲೆ ಗೊತ್ತಿದ್ದರೆ ಸ್ತ್ರೀ ಆದರೇನು ಪುರುಷ ಆದರೇನು ಸುಂದರವಾಗಿ ಬದುಕಬಹುದು.

 ಹರಿಯುವ ನದಿಯಲ್ಲಿ ತೆರೆಗಳನ್ನು ನಿಂತಮೇಲೆ ನಾನು ಈಜುತ್ತೇನೆ  ದಡ ಸೇರುತ್ತೇನೆ ಎಂದರೆ ಆಗದು. 

ಜೀವನದ ನದಿಯಲ್ಲಿ ಸುಖದುಃಖಗಳ  ತೆರೆಗಳ ಮಧ್ಯದಲ್ಲಿಯೇ ಆತ್ಮವಿಶ್ವಾಸದಿಂದ ಈಜಿ ಪರಮ ಶಾಂತಿಯ ಜೀವನ್ಮುಕ್ತಿಯ ದಡ ಸೇರಬೇಕು. 

ಇದೇ ಜೇನು ಜೀವನ.
✍️ ಸವಿತಾ ಆರ್ ಅಂಗಡಿ ಮುಧೋಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...