ಗಗನದಲ್ಲಿ ಪ್ರಜ್ವಲಿಸುತಿದೆ ತಾರೆ
ಮಿಣುಕುತಿದೆ ಚುಕ್ಕಿ ಧ್ರುವತಾರೆ.
ಬಾನಂಗಳದಲಿ ಮಿಂಚುತಿದೆ ನಕ್ಷತ್ರ
ಬಾಳ ಬೆಳಗಲು ರಂಗು ರಂಗಿನ ಚೈತ್ರ..!!೧!!
ಬೆಳಕಿನ ನಭ ಚೆಲುವಿನ ಹಬ್ಬ
ಪ್ರೇರಣೆ ನೀಡುವ ಕಮನೀಯ ಕಬ್ಬ..
ಎಲ್ಲೆಡೆ ಕಾಂತಿ ತೇಜಸ್ಸು ಶಕ್ತಿಯ ರೂಪ
ಪ್ರಭಾಸದಿಂದ ಕತ್ತಲ ಸರಿಸುವ ದೀಪ..!!೨!!
ಮನದ ಗವಿದ ಕತ್ತಲೆಯ ಸರಿಸಿ
ಬುದ್ಧನಂತೆ ಜ್ಞಾನದ ಕಡೆಗೆ ಮುಖ ಮಾಡಿ..
ಒಳಗಿನ ಕಲ್ಮಶಗಳ ತೊಳೆದು ಕಳೆದು
ಯಶಸ್ಸಿನ ಕಮ್ಮು ಚೆಲ್ಲುತ ನಡಿ..!!೩!!
ಮನದ ನುಡಿ ಅರ್ತಿ ಬಾಂಧವ್ಯ ಶುದ್ದಿ
ಕನಕದಾರ ಸ್ತೋತ್ರ ಪಠಿಸಿದ್ದಾರೆ ಲಕ್ಷ್ಮಿ ವೃದ್ಧಿ.
ನಾಡು ದೇಶಕ್ಕೆ ನಡೆವಳಿ ಅಭಿವೃದ್ಧಿಯೇ ಚಾಪ
ಹೃದಯದ ಸ್ನೇಹಕೆ ಪ್ರಜ್ವಲಿಸುವ ನಂದಾದೀಪ..!!೪!!
ಕಾರ್ತಿಕ ಮಾಸವೆಂದರೆ ಜಪಿಸಿ ನೆನವ
ಅಭಯ ನಿರ್ಭಯ ಅಭವಹಸ್ತ ಅಭವ.
ಶಾಂತಿ ನೆಮ್ಮದಿಗೆ ಬಾರದಿರಲಿ ಅಭಾವ
ಕೂಡಿ ಬಾಳುವ ಬದುಕಿಗೆ ಹರಸಿ ಬರಲಿ ಪವ..!!೫!!
- ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ, ಅಂಚೆ ಜೀವ ವಿಮೆ ಮಂಡ್ಯ .
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ