ಅವನೆಂದರೆ ಎದೆ ಬಡಿತವೆಚ್ಚು
ಸಿಂಗಾರದ ಉತ್ಸವ,
ತನ್ನ ಸ್ನೇಹಿತೆಯರೆಲ್ಲಾ ಒಟ್ಟು ಗೂಡಿ ಆಕೆಯನ್ನು ಅಲಂಕರಿಸುವ ಸಮಯ.
ಒಳಗೊಳಗೆ ಲಜ್ಜೆ!
ಕೆಲವೇ ಕ್ಷಣದಲ್ಲಿ ಪತಿಪಟ್ಟಕ್ಕೇರುವ ಅವನದರ ಕಾಣುವಾಸೆ.
ದೃಷ್ಟಿಯಬೊಟ್ಟು ಕೂಡ ಅವಳ ಗಲ್ಲದೊಳು ನಾಚಿ ನೀರಾಗಿತ್ತು.
ಓಲೆ ಜುಮುಕಿಯು ಅವಳ ಸೌಂದರ್ಯವ ಹೇಳುತ್ತಿತ್ತು.
ಹಾಕಿದ ಮುತ್ತಿನ ಸರ ಮುಗ್ಧತೆಯ ಸಾರುತ್ತಿತ್ತು.
ಡಾಬು ತುಂಟ ಮನದ ಭಾವನೆಗಳೆಲ್ಲವನ್ನು ಬಿಗಿ ಹಿಡಿದಿತ್ತು.
ಬೈತಲೆ ಬೊಟ್ಟು ಹೇಳದ ಸಾವಿರ ಗುಟ್ಟುಗಳ ಕನವರಿಸುತ್ತಿತ್ತು.
ಬಳೆಗಳು ಝಲ್ ಎಂದು ಅವಳ ಮನವ ಸಂತೈಸುವಂತಿತ್ತು.
ಕಣ್ಣುಗಳಿಗೆ ಕಾಣುವ ಕಾತುರ!
ಕಿವಿಗಳಿಗೆ ಧನಿ ಕೇಳುವ ಕುತೂಹಲ!!
ಕೈಗಳಿಗೆ ಸ್ಪರ್ಶಿಸುವ ತವಕ!
ಹೆಜ್ಜೆಗಳು ಬೆಸೆಯುವ ಕ್ಷಣ!!
ಎಲ್ಲೋ ಮನದಲ್ಲೊಂಡೆಗೆ ತವರುಮನೆಗೆ ಅಗಲಿಕೆಯ ಭಾರ
ನೆನೆದು ಕಣ್ಣಲ್ಲಿ ಕಾವೇರಿ ನದಿಯ ಮಹಾಪೂರ
ತನ್ನದಲ್ಲದ ಮನೆಗೆ ತನ್ನದೇ ಎಂಬಂತೆ ಬಾಳಬೇಕಾದ ಪರಿಸ್ಥಿತಿ
ತನ್ನದೇ ಮನೆಯ ತನ್ನದಲ್ಲ ಎಂಬಂತೆ ತೊರೆವ ಆಕೆಯ ಅನುಪಸ್ಥಿತಿ
ಅವಳ ಮನೆಗೀಗ ಅವಳೇ ನೆಂಟಳು!
- ಅಪ್ಸರ.ಎನ್. ಆಯುರ್ವೇದ ವಿದ್ಯಾರ್ಥಿನಿ, ಕೆ ಆರ್ ಪೇಟೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ