ಸಂಬಂಧ ಕಣ್ಣು ಬೆರಳಿನ ನಡುವೆ ಇದ್ದ ಹಾಗೆ ಬೆರಳಿಗೆ ನೋವಾದ್ರೆ ಕಣ್ಣಲ್ಲಿ ನೀರು ಬರುತ್ತೆ ಕಣ್ಣಲ್ಲಿ ನೀರು ಬಂದ್ರೆ ಬೆರಳು ಅದನ್ನು ವರಿದುತ್ತದೆ ಇದು ಸ್ನೇಹ ಅಂದರೆ .ಸ್ನೇಹ ಎಂಬ ಏರೆಡಕ್ಷರ ಸಣ್ಣದಿರಬಹುದು ಆದರೆ ಅದರ ಅರ್ಥ ಬಹಳ ದೊಡ್ಡದು .ಸ್ನೇಹ ಎಂದರೆ ನಮ್ಮ ಜೀವನದ ಒಂದು ಪ್ರಮುಖ ಬಾಗ ಎಂದರು ಆಶ್ಚರ್ಯವಲ್ಲ,ಸ್ನೇಹಿತನು ನಮ್ಮ ಜೀವನದಲ್ಲಿ ಒಳ್ಳೆಯ ಮಾರ್ಗದರ್ಶಕನಾಗಿ ಒಬ್ಬ ಒಳ್ಳೆಯ ಅಣ್ಣನಾಗಿ ನಮ್ಮ ಜೊತೆಯಲ್ಲಿಯೇ ಇರಬಲ್ಲನು ಸ್ನೇಹ ನಮಗೆ ಹಿತ ಸ್ನೇಹಿತ ನಮಗೆ ಸ್ವಂತ ನಮ್ಮತನದಲ್ಲಿ ಸಂತ ಆದರೆ ನನ್ನ ಗೆಳೆಯ ನಂಗೆ ಮಾತ್ರ ಆಪ್ತ ಸ್ನೇಹಿತ ನಮ್ಮ ಅತ್ಮೀಯ ಅವನು ನಮ್ಮ ಓಡಹುಟ್ಟಿದವನು ಆಗದೆ ಇದ್ಧರು ಅವನು ಸಹ ನಮ್ಮ ಕುಟುಂಬದವರೇ ಕಷ್ಟ ಕಾಲ ಬಂದಾಗ ಸಹಾಯ ಮಾಡುವ ಮನಸನ್ನು ಉಳ್ಳವನು ಸ್ನೇಹಿತನು ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳುವ ಶಿಕ್ಷಕನಾಗಿ ,ನೋವಲ್ಲಿ ಇದ್ದಾಗ ನಮ್ಮನ್ನು ನಗಿಸಿ ಹಾಸ್ಯಗಾರ ನಾಗಿ ,ಜೀವನಕ್ಕೆ ಒಂದು ಸುಲಬದ ದಾರಿ ಕಟ್ಟಿಕೊ ಎಂದು ಹೇಳುವ ನಿಸ್ವಾರ್ಥ ಮನಸ್ಸು ಸ್ನೇಹಿತರದ್ದು ಜೀವನದಲ್ಲಿ ಒಡೆಯನಾದ ನಮ್ಮ ರಕ್ತ ಸಂಬಂಧಿಯಾದ ಜೀವಕ್ಕೆ ಜೀವ ಕೊಡೋ ಸ್ನೇಹಿತನಾದ . ನೀವು ತೊಂಧ್ರೆಯಲ್ಲಿ ಇದ್ದಾಗ ನಿಮ್ಮ ಕಷ್ಟವನ್ನು ಹೇಳಿ ಮನಸನ್ನು ಹಗುರ ಮಾಡಿಕೊಳ್ಳುವುದಕ್ಕಾಗಿ ಇರುವ ಏಕೈಕ ಜೀವ ಎಂದರೆ ಸ್ನೇಹಿತ ಎಂದರೆ ತಪ್ಪಾಗಲಿಕ್ಕಿಲ್ಲ ಆ ಕಷ್ಟವನ್ನು ತನ್ನ ಕಷ್ಟವೆಂದು ಪರಿಗಣಿಸಿ ಸಹಾಯ ಮಾಡುವ ಜೀವ ಎಂದರೆ ಸ್ನೇಹಿತ ಸ್ನೇಹಕ್ಕೆ ಕೃಷ್ಣ ಕುಚೆಲನಂತಹ ದುರ್ಯೋಧನ ಕರ್ಣ ನಂತಹ ಒಳ್ಳೆಯ ಸ್ನೇಹಿತರು ನಮ್ಮಲ್ಲಿ ಕೂಡ ಬರಬೇಕು .ಸ್ನೇಹಿತ ನಮ್ಮ ಬದುಕಿನಲ್ಲಿ ಕನ್ನಡಿ ಮತ್ತು ನೆರಳಿನಂತೆ ಇರಬೇಕು ಯಾಕೆಂದರೆ ಕನ್ನಡಿ ಯಾವತ್ತೂ ಸುಳ್ಳು ಹೇಳುವುದಿಲ್ಲ ಮತ್ತು ನೆರಳು ಯಾವತ್ತೂ ನಮ್ಮನ್ನು ಬಿಟ್ಟು ಇರುವುದಿಲ್ಲ ಮತ್ತೆ ನಮಗೆ ಆಗಿರುವ ನೋವನ್ನು ಮರೆಯಲು ಸ್ನೇಹಿತನೇ ಔಷಧ ಆದರೆ ಸ್ನೇಹಿತ ಮಾಡಿದ ನೋವನ್ನು ವಾಸಿ ಮಾಡಲು ಯಾವ ಔಷಧ
ಕೂಡ ಇಲ್ಲ .ಸಮುದ್ರದಲ್ಲಿ ಹೊರಟಿರುವಾಗ ನಿನ್ನ ನೆನಪಾಯಿತು ಕಣ್ಣ ನಿರ ಹನಿಯೊಂದು ಸಾಗರಕ್ಕೆ ಬಿತ್ಹು ಆಗಲೇ ತೀರ್ಮಾನಿಸಿದೆ ಕಣ್ಣ ನೀರ ಹನಿ ಸಿಗುವ ತನಕ ಮರೆಯೋಲ್ಲ ಅಂತ ಕೇವಲ ಹಣಕ್ಕಾಗಿ ಸ್ನೇಹಿತರಾಗದೆ ಒಳ್ಳೆಯ ಗುಣಗಳನ್ನು ಗಳಿಸುವ ಸ್ನೇಹಿತರಾಗಿ ನಿಮ್ಮ ಬಾಳಲ್ಲಿ ಕೂಡ ಸದಾ ಖುಷಿಯಿಂದ ನಿಮ್ಮ ಕನಸು ನೆರವೇರಲಿ
- ರಾಜು ಭೈರೆಡ್ಡಿ ಗೋಗಿ (ಕೆ)
ತಾ/ಶಹಾಪುರ ಜಿ /ಯಾದಗಿರಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ