ತಾಯಿ ಭಾರತಾಂಬೆಯ ಸೇವೆಗೆ ಸದಾ ಸಿದ್ಧರು ಹೆಮ್ಮೆಯ ವೀರ ಸೈನಿಕರು,
ತಾಯ್ನೆಲದ ಸೇವೆಗೆಂದು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟವರು,
ತನ್ನೂರು ಹೆತ್ತವರ ಬಿಟ್ಟು ಬಂದಿಹರು,
ಸೈನಿಕರಿಗೂ ಪ್ರೀತಿಯ ತಾಯ್ತಂದೆ, ಬಂಧು-ಬಳಗ ಮಡದಿ -ಮಕ್ಕಳಿಹರು,
ಅವರೇ ಸೈನಿಕರಿಗೆ ಉಸಿರಾಗಿಹರೂ,
ಆದರೂ ದೇಶಸೇವೆಗೆ ಸದಾ ಸಿದ್ಧರು,
ಸೈನಿಕರ ತಾಯ್ತಂದೆ-ಮಡದಿ-ಮಕ್ಕಳಿಗೆ ಗೌರವದ ಸೆಲ್ಯೂಟು ಸಲ್ಲಿಸುತಾ ಜೊತೆಯಲ್ಲಿ ಸಾಗುತಿರು...
ದಿನವಿಡಿ ದಣಿವರಿಯದೇ ದೇಶಕ್ಕಾಗಿ ದುಡಿಯುವ ಜೀವ,
ಸೈನಿಕನನ್ನೇ ನೆನೆದು ದೂರದಲ್ಲಿ ಕಾಯುತಿರುವ ಬಾಂಧವ್ಯದ ಬೆಸುಗೆಯನು ಹೊತ್ತ ಅವೆಷ್ಟೋ ಜೀವ,
ಕೆಲವೊಮ್ಮೆ ಮನಸಿಗೆ ತರುವುದು ನೋವ,
ಆದರೂ ಕುಂಟುಂಬಸ್ತರ ಮನದಲ್ಲಿ ನಮ್ಮ ಮಗ ದೇಶದ ಸೈನಿಕನೆಂಬ ಹೆಮ್ಮೆಯ ಭಾವ,
ಸೈನಿಕರ ತಾಯ್ತಂದೆ-ಮಡದಿ-ಮಕ್ಕಳಿಗೆ ಗೌರವದ ಸೆಲ್ಯೂಟುಗಳ ಸಲ್ಲಿಸಿ ಜೊತೆಯಲ್ಲಿ ಸಾಗುತಿರುವ,
ದೇಶದ ರಕ್ಷಣೆಗೆಂದು ತನ್ನ ಪ್ರಾಣವ ಮುಡಿಪಾಗಿಟ್ಟು,
ತನ್ನೂರನ್ನು ಬಿಟ್ಟೂ -ತಾಯಿ ಭಾರತಮಾತೆಯ ಕರೆಗೆ ಓಗೊಟ್ಟು,
ತನ್ನ ಮಡದಿ-ಮಕ್ಕಳ ಆಸೆ-ಆಕಾಂಕ್ಷೆಗಳ ಪಕ್ಕಕ್ಕಿಟ್ಟು- ಕುಟುಂಬದ ಚಿಂತೆಯ ಬಿಟ್ಟು, ದೇಶಕ್ಕಾಗಿ ಎದೆಯುಬ್ಬಿಸಿ ತೊಡೆಯ ತಟ್ಟು- ವಚನವ ಕೊಟ್ಟು,
ಸೈನಿಕರ ತ್ಯಾಗ ಬಲಿದಾನಗಳು ಗಣಿತದ ಎಣಿಕೆಗೂ ನಿಲುಕದಷ್ಟು,
ಸೈನಿಕರನ್ನು ಮೀರಿಸುವವರ್ಯಾರುಂಟು,
ಸೈನಿಕನಂತೆ ಶಿಖರವೇರಿ ಭಾರತದ ತಿರಂಗಧ್ವಜವ ಹೆಮ್ಮೆಯಿಂದ ಹಾರಿಸುವಂತೆ ಗುರಿಯ ಮುಟ್ಟು,
ದೇಶಕ್ಕೆ-ದೇಶವೇ ಎದ್ದು ನಿಂತು ಸಲ್ಲಿಸುವುದು ಗೌರವದ ಸೈಲ್ಯೂಟು,
"ಜೈ ಹಿಂದ್ " ಸ್ವರಕ್ಕೆ ಆಸೆಪಟ್ಟು- ಆಲಿಸಿದಾಗ ಗರಿಯು ಸಿಕ್ಕಷ್ಟು ಖುಷಿಯಪಟ್ಟು- ಶಕ್ತಿಯಾಗುವುದು ದುಪ್ಪಟ್ಟು,
ಸೈನಿಕರ ತಾಯ್ತಂದೆ-ಮಡದಿ-ಮಕ್ಕಳಿಗೆ ಗೌರವದ ಸೆಲ್ಯೂಟು ಸಲ್ಲಿಸಲೂ ನನಗಂತೂ ಹೆಮ್ಮೆಯುಂಟು,
"ಜೈ ಹಿಂದ್"...
- ಶಾಂತಾರಾಮ ಶಿರಸಿ, ಉತ್ತರ ಕನ್ನಡ.
8762110543
7676106237.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ