ಗುರುವಾರ, ಡಿಸೆಂಬರ್ 2, 2021

ಕರಾಳ ಮುಖ (ಕವಿತೆ) - ಶ್ರೀ ತುಳಸಿದಾಸ ಬಿ ಎಸ್.

ಫಲ ಹೊತ್ತು ನಿಂತಿತ್ತು ನಿಂತಿದ್ದು ಬಾಗಿತ್ತು
ಕೊಯ್ದದ್ದು ಮುಳುಗಿತ್ತು ರಾಶಿ ಕೊಚ್ಚೇ ಹೋಯ್ತು
ಬೇಡವಾದಾಗ ಬಂದು ಕಸಿದೋಯ್ತು ಎಲ್ಲವನು
ಇನ್ನೂ ನಿಲ್ಲಲೇ ಇಲ್ಲ ಮಳೆ

ಕಟ್ಟಿಗೆಯು ತೊಯ್ದಿತ್ತು ಒಳಗೆಲ್ಲ ನೀರಿತ್ತು
ಗೋಡೆ ಮೆಲ್ಲಗೆ ಬಾಗಿ ಮನೆಯಿಂದು ಬಿದ್ದೋಯ್ತು
ಕನಸು ಸಣ್ಣಗೆ ಜಾರಿ ಕಣ್ಣೆಲ್ಲ ನೀರಾಯ್ತು
ಇನ್ನೂ ನಿಲ್ಲಲೇ ಇಲ್ಲ ಮಳೆ

ವಾಹನಗಳನೇ ಸೆಳೆದು ತಾ ದೂರ ಸಾಗಿತ್ತು
ಜೀವರಾಶಿಯ  ನುಂಗಿ ನೋವ ತಾನುಳಿಸಿತ್ತು
ಊರಿಗೂರೇ ನೀರು ಸುತ್ತಲೆತ್ತಲೂ ನೀರು!
ಇನ್ನೂ ನಿಲ್ಲಲೇ ಇಲ್ಲ ಮಳೆ

ಕರೆದಾಗ ಬರಲಿಲ್ಲ ಬಂದಾಗ ನಗುವಿಲ್ಲ
ಋತು ಚಕ್ರವನೆ ಮೀರಿ ಸುರಿಯುತಲಿದೆ ತಾನು
ಎಲ್ಲದನು ನಿಲ್ಲಿಸುತ ತಣ್ಣಗೊಮ್ಮೆಗೆ ನಿಂತು
ತನ್ನ ಲೋಪದ ಕುರಿತು ಮರುಗೀತೆ ಮಳೆಯು?
- ಶ್ರೀ ತುಳಸಿದಾಸ ಬಿ ಎಸ್, ಶಿಕ್ಷಕರು ಸಿಂಧನೂರು ಜಿ.ರಾಯಚೂರು.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...