ಬಂಗಾರದ ಹುಡಿಯೆರಚಿ
ಕಡಲ ತುದಿಯ ಕೊನೆಗೆ
ಕೆಂಬಣ್ಣದ ಬಣ್ಣವೆರಚಿ
ಅಗಸದ ಚಾವಣಿಯ ಕೆಳಗೆ!!!1!!!
ಇದು ಬರೀ ಕಡಲಲ್ಲ
ಇದು ಬರೀ ಉಪ್ಪು ನೀರಲ್ಲ
ಇದು ಬಂಗಾರದ ನೀರು
ಇದು ಸೌಂದರ್ಯದ ಬೀರು!!!2!!!
ಸೂರ್ಯ ನಕ್ಕನು
ಚಿನ್ನದ ಹುಡಿಯೆರಚಿ
ತೀರದ ಮರಳೆಲ್ಲ
ಬಂಗಾರವಾಗಿದೆ!!!3!!!
ಶರದಿ ಎಷ್ಟು ಬಾಚಿದರೂ
ಮುಗಿಯದ ನಿಧಿಯು
ಎಷ್ಟು ನೋಡಿದರೂ
ಮುಗಿಯದ ಕೊನೆಯು !!!4!!!
✍️ ರಾಜು ನಂಜಪ್ಪ
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ