ಗುರುವಾರ, ಜನವರಿ 27, 2022

ಅಮ್ಮ (ಕವಿತೆ) - ಮಣಿಕಂಠ ಗೌಡ

ಅಮ್ಮ......
ಅಮ್ಮ ನಿನ್ನ ಕುರಿತು ನಾ ಏನ ಹೇಳಲಿ 
ಅಕ್ಷರಗಳೇ ಸಾಲದು ನನಗಿಲ್ಲಿ..... !!

ಸೃಷ್ಟಿಯಲ್ಲಿ ಮೊದಲಿಗೆ ಜನಿಸಿದೆ ನೀನು 
ದೇವರಿಗಿಂತ ಮಿಗಿಲು ನೀನು.... !!

ನನ್ನ ಭಾವನೆಗಳ ನಾ ಹೇಳದೇನೆ ಅರಿತವಳು ನೀ 
ನನ್ನ ಕೈ ಬೆರಳ ಹಿಡಿದು ನಡೆಸಿದವಳು ನೀ 
ನನ್ನ ಕಂದ ಅಂದಾಗ ನೀ 
ನಾ ಅರಿತೇ ಮೊದಲಿಗೆ ನಿನ್ನ ದನಿ 
ನೀ ಇಲ್ಲದೆ ಈ ಜೀವ ಭೂಮಿಗೆ ಬರಲಾರದು 
ಮಹಾ ತ್ಯಾಗಕ್ಕೆ ಆಗಿರುವೆ ನಾನು ಋಣಿ... !!

ನಾ ಕಣ್ಣ ತೆರೆದಾಗ 
ಮೊದಲು ನಿನ್ನ ಕಂಡಾಗ 
ಮೊದಲ ಖುಷಿ ನನಗೆ ನಿನ್ನ ನೋಡಿದಾಗ 
ತುತ್ತ ನಿಟ್ಟು ಮುತ್ತ ನಿಟ್ಟು ಮಗುವಿನ ನಗುವಲಿ ನಿನ್ನ ನೋವ ಮರೆಯುವೆ 
ನಿನ್ನ ಋಣ ತೀರಿಸಲು ಪ್ರತಿ ಜನ್ಮದಲ್ಲೂ ನಿನ್ನ ಮಗುವಾಗಿ ನಾ ಹುಟ್ಟುವೆ...... !!

ನೆರಳು ನೀಡುವ ವೃಕ್ಷವು ನೀನು 
ನಿನ್ನಡಿಯಲಿ ಬೆಳೆದ ಚಿಗುರು ನಾನು 
ಮಾತು ಕಲಿಸಿದ ಮೊದಲ ಗುರು ನೀನು 
ವರ್ಣಿಸಿದರು ಮುಗಿಯದ ಮಾತು ನೀನು..... !!

ಮುದ್ದು ಮನಸಿನ ಮಗು ನಗಲು ಕಾರಣ ನೀನಾದೆ 
ಅಳುತಿದೆ ಕಾರಣ ನೀನಿಲ್ಲದೆ 
ನೆರಳ ನೀಡಿದೆ ನಿನ್ನ ಸೆರಗಿನ ಮರೆಯಲ್ಲಿ 
ಅಮ್ಮ ಮತ್ತೆ ಮಗುವಾಗುವೇ ನಿನ್ನ ಮಡಿಲಲ್ಲಿ...... !!
- ಮಣಿಕಂಠ ಗೌಡ 
ಶಿರಸಿ (ಉ. ಕ )
9482079553



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...