ಕರುನಾಡಿನ ಹೆಮ್ಮೆಯ ಕುಡಿಗಳು
ಸದಾ ಜೋಡಿ ದಂಪತಿಗಳು
ಸದಾ ನಸುನಗುವ ತೋರಣ
ಇನ್ಫೋಸಿಷ್ ದ ಮಾಲಿಕರು
ಕುಲಕರ್ಣಿ ಮನೆತನದಲಿ ಸುಧಾ
ಮೂರ್ತಿ ಮನೆತದ ನಾರಾಯಣರು
ಒಬ್ಬರನ್ನೊಬ್ಬರು ಅರಿತವರು
ಹಾಲು ಜೇನಿನಂತೆ ಬೆರೆತವರು
ಕಷ್ಟಕೋಟಲೆಗಳ ನಡುವೆ ಎದ್ದವರು
ಹಿಂದಣ ಹೆಜ್ಜೆ ಅರಿತ ಅರಿವಿನ ಗುರು
ಶೋಷಿತ ಸಮುದಾಯಕೆ ಹಾರೈಸಿದವರು
ಅಳುವ ದನಿಗೆ ದನಿಯಾಗಿ ನಿಂತವರು
ದೇಶ-ವಿದೇಶಗಳಲಿ ಭವ್ಯ ಭಾರತ
ಚಿತ್ರಣವ ನೀಡಿ ಉದ್ಯಮಿತತ್ವ ಬೆಸೆದವರು
ಸ್ತ್ರೀ- ಸಮಾನತೆಗಾಗಿ ಪರಿಶ್ರಮಿಸಿದವರು
ಸದಾ ಮೌನಿಗಳಾಗಿ ಆಸರೆಯಾದವರು
ಭಾರತೀಯ ಸಂಸ್ಕೃತಿ ಅರಿತವರು
ಸಾಹಿತ್ಯ ರಚನೆಗೆ ತೊಡಗಿದವರು
ಬಿಳಿ-ಕರಿಯ ಸಮನ್ವಯಗೊಳಿಸಿದ
ನಾಡ ಅಸ್ಮಿತೆಯ ಹೆಮ್ಮೆಯ ಜೀವಿಗಳು.
- ವೀರಂತರೆಡ್ಡಿ ಜಂಪಾ
ಸಹ-ಶಿಕ್ಷಕರು ಸರಕಾರಿ ಪದವಿ-ಪೂರ್ವಕಾಲೇಜು (ಬಾಲಕರ) ಪ್ರೌಢಶಾಲಾ ವಿಭಾಗ ಹುಮನಾಬಾದ.ಜಿ.ಬೀದರ ೫೮೫೩೩೦
ದೂ.ಸಂ.೯೪೪೮೪೪೦೬೩೩.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ