ಶನಿವಾರ, ಜನವರಿ 15, 2022

ಬರ (ಕವಿತೆ) - ರಾಜು ನಂಜಪ್ಪ.

ಬರೆಯಲು ಬರವು ಬಂದಿದೆ 
ಅಕ್ಷರಗಳ ಬರ 
ಭಾವನೆ ಒಣಹುಲ್ಲಾಗಿದೆ 
ಮಳೆ ಎಂದು ಬರುವುದೋ 
ಅಥವಾ ಕಣ್ಣೀರಿನಿಂದಲೇ 
ಈ ಕಾಗದ ಒದ್ದೆಯಾಗುವುದೋ 
ಬರೆದ ಅಕ್ಷರಗಳು 
ಕಣ್ಣೀರಿಂದ ತೊಪ್ಪೆಯಾದವು 
ಉಳಿದದ್ದು ಒದ್ದೆಯಾದ ಕಾಗದ 
ಬರಿಯ ಕಾಗದ 
ಒಣಭೂಮಿಯಂತೆ 
ನನ್ನ ಮನಸಿನಂತೆ 
ಛೇ,.. 
ಯಾವಾಗ ಈ ಮನಸು 
ಅರಳುವುದೋ ಗೊತ್ತಿಲ್ಲ :
ಅಕ್ಷರಗಳೇ ಇಲ್ಲಾ ಅಥವಾ ಸತ್ತಿವೆ 
ಕೇವಲ ಅಕ್ಷರಗಳಲ್ಲ 
ಅಕ್ಕರೆಯ ನೆನಪುಗಳಿಲ್ಲ 
ಸತ್ತ ಮನಸು 
ಖಾಲಿ ಕಾಗದವಾಯ್ತು
ಏನೂ ಬರೆಯಲು ಮನಸ್ಸಿಲ್ಲ 
ಕಡೆಗೂ ಅಕ್ಷರಗಳ ಬರ ನೀಗಲಿಲ್ಲ !!
✒️ರಾಜು ನಂಜಪ್ಪ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...