ಗುರುವಾರ, ಜನವರಿ 27, 2022

ತಿಳಿ ಮನವೇ ತುಳಿಯುವ ಮುನ್ನ (ಕವಿತೆ) - ಶಿವಾ ಮದಭಾಂವಿ

ಓ ಮುಗ್ಧಮನದ ಮುಗ್ಧ ಜೀವವೇ
 ನಿನ್ನಲ್ಲೊಂದು ನನ್ನ ಮನವಿ 
ಹೇಳುತ್ತೇನೆಂದು ಬೇಸರಿಸಬೇಡ 

 ಮುಗ್ಧತೆಯ ಮಾರ ಹೊರಟಿಹರಿಲ್ಲಿ
 ಹೊಗಳಿ ಹೊಗಳಿ ಹೊನ್ನ ಶೂಲಕ್ಕೆ ಏರಿಸುವ 
 ಮೋಸ ಮಾಡುವ ಮೂರ್ಖರು 


 ಶ್ರೀಗಂಧ ಯಾವಾಗಲೂ ಶ್ರೀಗಂಧವೇ
 ಮಾರು ಹೋಗಬೇಡ ಅವರ 
ಗೋಸುಂಬೆ ಮಾತಿಗೆ
 ಮರುಳಾಗಬೇಡ ತಿಳಿಮನವೇ


 ಆಗಿರುವೆ ನೀ ಕೇಂದ್ರಬಿಂದು 
ಮೂರ್ಖರು ಬರುವರು 
ನಯನದಿ ಹಿಂಬಾಲಿಸಿ 
 ಹಗಲಲಿ ಬಾವಿಗೆ ತಳ್ಳಿ 
ಕೇಕೆ ಹಾಕುವ ಕಿರಾತಕರು 

 ಎಚ್ಚೆತ್ತುಕೊ ಓ ಜೀವವೇ 
 ನಿನ್ನ ಯಶಸ್ಸಿನ ದಾರಿ ಸಮೀಪವಿದೆ 
 ಬೇರಾರು ನೀಡರು ಯಶಸ್ಸು 
ದೈವವೇ ನಿನ್ನ ಜೊತೆ ಇರುವಾಗ 
ಹೋಗದಿರು ಮಾರು 

 ಮರುಳಾಗಿ ಮೋಸಹೋಗಿ 
ಮನ ಮರಗಿಸುವ ಮುನ್ನ
 ಎಚ್ಚೆತ್ತುಕೊ ಬೇರೇನು ಹೇಳಲಿ 
ಮುಗ್ಧತೆಗೆ ಹಾಕು ಕಡಿವಾಣ 

 ದಾರಿ ಮಾಡಿಕೊಡದಿರು ನೀನಾಗಿ 
ಮರುಳ ಮಾತಿಗೆ ಸೋಲಬೇಡ 
ಸೋಲಿಸು ಹೊಂಚುಹಾಕುತ್ತಿರುವ 
ಸಂಚುಕೋರರನ್ನ ಡಾಂಭಿಕರನ್ನ   
- ಶಿವಾ ಮದಭಾಂವಿ


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...