ನೂರೆಂಟು ರಂಗುರಂಗಿನ ಲೋಕವಿದುˌˌˌ
ಪ್ರತಿಯೊಂದು ಮನಕು ವಿಧವಿಧ ಬಣ್ಣವದುˌˌ
ಒಂದೊಂದು ಬಣ್ಣವೂ ಒಂದೊಂದು ಸಂಕೇತವುˌˌ
ಅವರವರ ಮನಸಿನ ಭಾವಬಿಂಬಿತವುˌˌ
ಕಣ್ಕುಕ್ಕುವ ರಂಗುರಂಗಿನ ಪ್ರಪಂಚದಲಿˌˌˌ
ತಿಳಿ ನೀನು ಮಾಸಿದ ಬಣ್ಣಕೆ ಬೆಲೆ ಇಲ್ಲವಿಲ್ಲಿˌˌ
ಮನುಜನ ಮನವು ಓಡುತಿಹುದು ವೇಗದಿˌˌˌ
ˌಹೊಳೆವ ಬಣ್ಣದ ಹಿಂದೆ ಅವಸರದಿˌˌˌ
ಬಣ್ಣ ಬದಲಿಸುವ ಗೋಸುಂಬೆ ಗಳಂತೆ ˌˌˌ
ಮನಕೆ ಮೆತ್ತಿದ ಬಣ್ಣವೂ ಕ್ಷಣಿಕವಂತೆ ˌˌˌ
ಬಯಲಾಗದಿರಲೆಂದು ಮನುಜ ತನ್ನ ನಿಜಬಣ್ಣˌˌˌ
ಬದಲಾಗುವ ಅನುಕ್ಷಣವು ತೆರೆಯದೇ ಒಳಗಣ್ಣˌˌˌˌ
ಲೋಕದ ನಂಟು ತೀರಿದ ಮೇಲೆ ಎಲ್ಲರೂ ˌˌˌ
ಬಣ್ಣ ಕಳಚಿ ಓಡಬೇಕು ನಿಲ್ಲಿಸಿ ಉಸಿರುˌˌˌ
ಇರುವಲ್ಪ ಸಮಯದಲಿ ಶುಭ್ರಬಿಳಿ ಬಣ್ಣವಾಗಿರುˌˌˌ
ಕರೆ ಬರುವವರೆಗೂ ಕೊಳೆಯಂಟದಂತಿರುˌˌˌ
- ಮಧುಮಾಲತಿ ರುದ್ರೇಶ್, ಬೇಲೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ತುಂಬಾ ಚೆನ್ನಾಗಿದೆ...
ಪ್ರತ್ಯುತ್ತರಅಳಿಸಿಶುಭಾಶಯಗಳು...!!!!