ಶನಿವಾರ, ಜನವರಿ 1, 2022

ಅವಳಿಲ್ಲದ ಬದುಕು ಸೂತ್ರವಿಲ್ಲದ ಗಾಳಿಪಟ (ಕವಿತೆ) - ಕೆ. ಬಿ. ಮಧು.

ಸೂತ್ರವಿಲ್ಲದ ಗಾಳಿಪಟ.
ಆಕಾಶದಲ್ಲಿ ನಿಲ್ಲದ ಆರ್ಭಟ.
ಅವಳಿಲ್ಲದ ಬದುಕು ಸಂಕಟ.

ಹಗಲಿರುಳು ಕಾಣದ ಭೂಪಟ.
ಗಿಡಮರಗಳಿಲ್ಲದ ಬೆಟ್ಟ-ಗುಡ್ಡಗಳ ನೋಟ.
ಚಂದನದ ತಾರೆ ಇಲ್ಲದ ಬದುಕಿನ ಆಟ.

 ಕಳಸ ವಿಲ್ಲದ ಗುಡಿ ಗೋಪುರದ ನೋಟ.
ಸಾರಥಿ ಇಲ್ಲದ ರಥದ ಓಟ.
ಹೂವುಗಳೇ ಅರಳದ ದುಂಬಿಯ ಸಂಕಟ.

ಮರಳುಗಾಡಿನಲ್ಲಿ ಗಾಳಿಯ ಆರ್ಭಟ.
ತಡೆಯೋಕೆ ಗುಡ್ಡ-ಬೆಟ್ಟಗಳೇ ಇಲ್ಲದ ಭೂಪಟ.
ಅವಳಿಲ್ಲದ ಬದುಕು ಸೂತ್ರವಿಲ್ಲದ ಗಾಳಿಪಟ.
- ಕೆ. ಬಿ. ಮಧು
ಕೊತ್ತತ್ತಿ ಗ್ರಾಮ
ಮಂಡ್ಯ ತಾಲೂಕು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...