ನಮ್ಮ ಭಾರತದ ಪ್ರಾಚೀನತೆಯನ್ನು ನಾವೆಲ್ಲರೂ ಇಂದು ಎಷ್ಟರಮಟ್ಟಿಗೆ ತಿಳಿದುಕೊಂಡಿದ್ದೇವೆ. ಸಾಹಿತ್ಯ ಪುರಾಣಗಳ ಪ್ರಕಾರ ನಮ್ಮ ದೇಶಕ್ಕೆ ಹಲವಾರು ಹೆಸರು ಹಿಂದುಸ್ತಾನ. ಜಂಬುದೀಪ. ಭಾರತ ಇವೆಲ್ಲವುಗಳನ್ನು ಗಮನಿಸಿದಾಗ ಒಂದಲ್ಲ ಒಂದು ಅರ್ಥವನ್ನು ಕೊಡುತ್ತಾ ಹೋಗುತ್ತವೆ.
ಭಾರತ ಎಂದರೆ ಬಾ ಎಂದರೆ ಬೆಳಕು ರತ ಎಂದರೆ ಪ್ರೀತಿ ಪ್ರೀತಿಯ ಬೆಳಕೆ ನಮ್ಮ ಹೆಮ್ಮೆಯ ಭಾರತ ನಮ್ಮ ಸಂಸ್ಕೃತಿ ಸಂಪ್ರದಾಯ ಆಚರಣೆ ನಮ್ಮನ್ನು ಮತ್ತಷ್ಟು ಪ್ರಬುದ್ಧರನ್ನಾಗಿ ಮಾಡುತ್ತವೆ. ಅವುಗಳ ಆಚರಣೆ ಇಂದಿನ ಪೀಳಿಗೆಯಲ್ಲಿ ಮರೆಮಾಚಿ ದಂತಾಗಿದೆ. ಭಾರತ ಹಲವಾರು ರಾಜ್ಯ ಪ್ರಾಂತ್ಯ ಅಲೆಮಾರಿ ಬುಡಕಟ್ಟು ನಿವಾಸಿಗಳ ಬಿಡು ಕದಂಬ ಬಾಹುವಿನ ಮಜಲುಗಳು ಜಗತ್ತಿನ ಎಲ್ಲ ಶ್ರೇಷ್ಠ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲುವ ನನ್ನ ಹೆಮ್ಮೆಯ ದೇಶ ಯಾವುದೇ ಸಂದರ್ಭದಲ್ಲಿ ತಲೆ ತಗ್ಗಿಸಿದೆ ಸದಾ ಮುನ್ನುಗ್ಗಿ ನನ್ನ ದೇಶ ಇದೆ ಎಂದು ಹೇಳುವ ಮತ್ತು ದೇಶಕ್ಕಾಗಿ ನಾವು ಇದ್ದೇವೆ ಎಂದು ಟೊಂಕಕಟ್ಟಿ ನಿಲ್ಲುವ ಯುವಕರು ಬೇಕು.
ಜಗತ್ತಿನ ನಾನಾ ದೇಶಗಳು ಕತ್ತಲೆಯ ಸ್ಥಿತಿಯಲ್ಲಿದ್ದಾಗ ಭಾರತವು ಬೆಳಕಿನ ಉತ್ತುಂಗ ಶಿಖರದಲಿತ್ತು. ಕಾರಣ ಇಲ್ಲಿ ಜನಿಸಿರುವ ಯೋಗಿ ಮಹರ್ಷಿಗಳು ಅವರ ತತ್ವ ಆದರ್ಶಗಳು ನಮ್ಮಲ್ಲಿಯೇ ಉದಯಿಸಿದ ಹಲವಾರು ವೈಜ್ಞಾನಿಕ ಪದ್ಧತಿಗಳು ಅತ್ಯಂತ ಪ್ರಾಚೀನತೆಯನ್ನು ಕಂಡುಕೊಳ್ಳಬಹುದು. ಸಸ್ಯಶಾಸ್ತ್ರ ವೈದ್ಯಶಾಸ್ತ್ರ ವಿಜ್ಞಾನ ಮತ್ತು ವೈಮಾನಿಕ ಶಾಸ್ತ್ರ ಇವೆಲ್ಲವುಗಳು ಜನಿಸಿದ್ದು ನಮ್ಮ ಹೆಮ್ಮೆಯ ಭಾರತದಲ್ಲಿ ಅತ್ಯಂತ ಅಗಾಧವಾದ ಶಕ್ತಿಯನ್ನು ಹೊಂದಿರುವ ಭಾರತೀಯರು ನಮ್ಮಲ್ಲಿದ್ದಾರೆ. ನಾವು ನಮ್ಮ ಪ್ರಾಚೀನತೆಯನ್ನು ಅರಿತುಕೊಳ್ಳಬೇಕು. ಇಂದಿನ ಯುವಜನತೆ ಒಬ್ಬ ಒಳ್ಳೆಯ ನಾಗರಿಕನಾಗಿ ಬೇಕಾದರೆ ಮೊದಲು ಅವನಿಗೆ ತನ್ನ ದೇಶದ ಸಂಪೂರ್ಣ ಅರಿವನ್ನು ದೇಶದ ಮೇಲೆ ವ್ಯಕ್ತಿಯು ಮೊದಲು ಸಹನಾ ಶಕ್ತಿಯನ್ನು ಪಡೆದುಕೊಳ್ಳಬೇಕು. ಯಾವುದಕ್ಕೂ ಕಡಿಮೆ ಇಲ್ಲದ ದೇಶ ನಮ್ಮದು ನಮ್ಮ ಕನಸಿನ ಭಾರತ ಹೇಗಿರಬೇಕು. ಪ್ರತಿಯೊಬ್ಬ ನಾಗರಿಕನ ದೇಶದ ರಕ್ಷಣೆ ದೇಶದ ತತ್ವಾದರ್ಶಗಳ ಬಗ್ಗೆ ಹೆಚ್ಚಿನ ಪ್ರೀತಿ ಒಲವು ನಮ್ಮ ಇಂದಿನ ಯುವಜನತೆಯಲ್ಲಿ ನೋಡಬೇಕು.
ಜವಾಹರ್ಲಾಲ್ ನೆಹರು ಅವರು ಹೇಳಿದಂತೆ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಸದೃಡವಾದ ದೇಹದಲ್ಲಿ ಸದೃಡವಾದ ಮನಸ್ಸು ಇರಲಿ. ಇಂದಿನ ದಿನಮಾನಗಳಲ್ಲಿ ಯುವಕರು ನಮ್ಮದೇನು ಪಾತ್ರವಿಲ್ಲ ಎನ್ನುವ ಸ್ಥಿತಿಯಲ್ಲಿ ಬಂದು ಬಂಧಿತರಾಗಿದ್ದಾರೆ. ಸಮಾಜಘಾತುಕ ಚಟುವಟಿಕೆಯಲ್ಲಿ ತೊಡಗಿ ಭಯೋತ್ಪಾದನೆ ಭ್ರಷ್ಟಾಚಾರ ಮತ್ತೆ ಕೋಮುವಾದ ಇಂತಹ ಮಾರ್ಮಿಕ ವಿಚಾರಗಳತ್ತ ಮೊರೆ ಹೋಗುತ್ತಿದ್ದಾರೆ. ಸವಿಧಾನದ ವಿರೋಧ ಚಟುವಟಿಕೆಗಳಲ್ಲಿ ಭಾಗಿಯಾಗಿ ತನ್ನನ್ನೇ ತಾನು ಮರೆತು ಕೆಟ್ಟ ಕೆಲಸಗಳಿಗೆ ಕುಮ್ಮಕ್ಕು ನೀಡುವ ಮನಸ್ಸು ಇವರಲ್ಲಿ ಮನೆಮಾತಾಗಿದೆ.
ಪಾಶ್ಚಾತ್ಯರ ಸಂಸ್ಕೃತಿಯನ್ನು ಗೌರವಿಸೋಣ. ಆದರೆ ಎಂದೆಂದಿಗೂ ಸ್ವೀಕರಿಸಬೇಡಿ ನಮ್ಮದೇ ಆದ ನಾನಾ ತರಂಗದ ಭಾವಗಳು ನಮ್ಮಲ್ಲಿಯೇ ಇರುವಾಗ ಬೇರೆಬೇರೆ ನಾಡು-ನುಡಿಯ ಸಂಸ್ಕೃತಿ ನೋಡು ಅವರ ಆಚಾರ-ವಿಚಾರಗಳ ಆಗರ ನಿನ್ನ ಸಂಪ್ರದಾಯಗಳ ಆಚರಣೆ ಉಡುಗೆ ತೊಡುಗೆಯ ಪದ್ಧತಿ ಒಂದು ನಾಡಿನಿಂದ ಇನ್ನೊಂದು ನಾಡಿಗೆ ತೀರಾ ವಿಭಿನ್ನ ಭವ್ಯ ಭಾರತದ ವೀರಪುತ್ರರು ನಾವು ದೇಶವನ್ನು ಪ್ರೀತಿಸೋಣ ಮತ್ತು ಗೌರವಿಸೋಣ ಇತರರಿಗೂ ಇದರ ಮೇಲೆ ಒಲವು ಮೂಡುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ.
ಉತ್ತರದ ಹಿಮಾಲಯ ಪರ್ವತವೇ ವಿದೇಶಿಗರ ಆಕ್ರಮಣದಿಂದ ನಮ್ಮನ್ನೇ ಕಾಯುತ್ತಿರುವಾಗ ಸರ್ವ ನದಿಗಳಿಗೆ ಜನನಿ ಯಾಗಿ ಸದಾಕಾಲ ನಮ್ಮನೆ ಗಂಗಾ ಪುಣ್ಯರನ್ನಾಗಿ ಮಾಡಿ ಫಲವತ್ತತೆಯ ಭೂಮಿಯನ್ನು ದೇಶದ ಬೆನ್ನೆಲುಬು ರೈತನಿಗೆ ಕೊಟ್ಟು ಹಚ್ಚೆ ಹಸಿರಿನಲ್ಲಿ ಮೆಕ್ಕಲು ಮಣ್ಣಿನಲ್ಲಿ ಚಂದಾಗಿ ಪಸಲು ಬೆಳೆದು ಬರಲಿ ಅದು ನಮಗೆ ದೇವರು ಕೊಟ್ಟಂತಹ ಉಡುಗೊರೆಯೂ. ಚಿತ್ರವಿಚಿತ್ರವಾದ ವಾತಾವರಣ ಎಲ್ಲೂ ನೋಡಿದರೆ ಹಚ್ಚಹಸಿರಿನಿಂದ ಕೂಡಿದ ವನಗಳು ಉದ್ಯಾನವನಗಳು ಜೈವಿಕ ವನ್ಯಧಾಮಗಳು ಪಕ್ಷಿಧಾಮಗಳು ಹಲವಾರು ವಿಭಿನ್ನವಾದ ಸಂರಕ್ಷಣೆಯ ತಾನ ನಾವು ನೋಡಲು ನಮ್ಮ ಕಣ್ಣಿಗೆ ಅದು ರಸದೌತನ ನಮ್ಮ ಹೆಮ್ಮೆಯ ಭಾರತ ಅಂದಿಗೂ ಇಂದಿಗೂ ಎಂದೆಂದಿಗೂ ಅಜರಾಮರ.
"ದೇಶ ನಮಗೇನು ಮಾಡಿದೆ ಅನ್ನುವುದಕ್ಕಿಂತ ದೇಶಕ್ಕಾಗಿ ನಾನೇನು ಮಾಡಿದೆ" ಎನ್ನುವ ಉಕ್ತಿಯನ್ನು ನಾವೆಲ್ಲರೂ ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ತಾಯಿ ಭಾರತಾಂಬೆಯ ವರ ಪುತ್ರರು ನಾವು ಗಡಿಯಲ್ಲಿ ನೊಂದು-ಬೆಂದು ನಮ್ಮನ್ನು ಕಾಯುವ ವೀರ ಯೋಧರು ಅವರನ್ನು ದಿನಾಲು ಸ್ಮರಿಸಿ ಬಿಡಿ ಎಲೆಮರೆಯ ಕಾಯಿಯಂತೆ ಅವರ ಸೇವೆ ಅವರ ಸೇವೆ ಉಜ್ವಲವಾಗಿ ವಿಜಯಪತಾಕೆ ಹಾರಿಸಲೆಂದು ಹರಸಿ ಬಿಡಿ. ದೇಶದೊಳಗೆ ಇದ್ದವರು ನಾವು ಯುದ್ಧ ದೊಳಗೆ ಬಿದ್ದು ಹೋರಾಡಿ ಗೆದ್ದವರು ನಾವು ನಮ್ಮವರನ್ನು ನಾವು ಗೌರವಿಸದಿದ್ದರೆ ನಾವು ಮಾಡಿದ ತಪ್ಪು ಅಷ್ಟಿಷ್ಟಲ್ಲ. ಯುವಜನತೆಯಲ್ಲಿ ಭಾರತದ ಪ್ರಾಚೀನತೆಯನ್ನು ಅರಿತುಕೊಂಡಾಗ ನಮ್ಮ ಭಾರತ ಸರ್ವಕಾಲಕ್ಕೂ ಸರ್ವಶ್ರೇಷ್ಠರ ಸಾಲಿನಲ್ಲಿ ಗೆಲ್ಲುವುದು ಖಚಿತವೆಂದು ನಾವೆಲ್ಲರೂ ತಿಳಿದುಕೊಳ್ಳಬೇಕು.
"ಇಂದಿನ ಮಗು ವಿಜ್ಞಾನ ಮತ್ತು ತಂತ್ರಜ್ಞಾನದ ಮಗುವಾಗಿದೆ ಮಗುವಿನ ಕೈಯಲ್ಲಿ ಹೆತ್ತ ತಾಯಿ ಅಂದು ಕೊಡುತ್ತಿದ್ದಳು ಚಿನ್ನಿದಾಂಡು ಇಂದಿನ ತಾಯಿ ಕೊಡುತ್ತಾಳೆ ಸ್ಮಾರ್ಟ್ ಫೋನ್ ಅನ್ನು" ತಪ್ಪಲ್ಲ ಆದರೆ ಆ ಮಗು ಬೆಳವಣಿಗೆ ಹೊಂದುತ್ತ ತನಗರಿವಿಲ್ಲದಂತೆ ವಿಕಾಸವಾಗುತ್ತಾ ಹೊಸ ಹೊಸ ಚಿಂತನೆಗಳತ್ತ ಮನಸ್ಸು ಹರಿದು ಹೋಗುವಾಗ ನಿಯಂತ್ರಣ ಮಾಡುವುದು ಅಷ್ಟು ಸುಲಭವಲ್ಲ "ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿದ ಕಥೆಯನ್ನು ಕೇಳಿದ್ದೀರಾ ಇದು ಅದಕ್ಕಿಂತ ಕ್ಲಿಷ್ಟವಾದ ಕೆಲಸ" ದೇಶ ನಮಗೂ ಕೊಟ್ಟಿದ್ದು ಅಷ್ಟಿಷ್ಟಲ್ಲ. ನಮಗೂ ಒಂದು ಹೆಸರು ಅತ್ಯಂತ ಪ್ರಾಚೀನವಾದ ಗುರುತು ಪುರಾವೆಗಳು ಅವುಗಳನ್ನು ನಾವು ಯುವಜನತೆಗೆ ತಿಳಿಹೇಳಲು ಸದಾ ಮುನ್ನುಗ್ಗಬೇಕು.
ಹಲವಾರು ರಾಜ್ಯ ಮನೆತನಗಳು ಸಾಮ್ರಾಜ್ಯವನ್ನು ಸ್ಥಾಪಿಸಬೇಕೆಂಬ ಸದಾ ರಣರಂಗದಲ್ಲಿ ಯುದ್ಧಗಳು ಸಾವು-ನೋವುಗಳು ಒಂದೆಡೆ ನಾನು ಗೆದ್ದೆ ಎಲ್ಲಾ ಸಾಮ್ರಾಜ್ಯದ ಎಲೆ ಮೇರೆಗಳು ನನಗೆ ಸೇರಿದವು ಎನ್ನುವ ಸಂಭ್ರಮಾಚರಣೆಯಲ್ಲಿ ಇನ್ನೊಂದು ಕಡೆ ನನ್ನವರನ್ನು ಕಳೆದುಕೊಂಡೆ ರಣರಂಗದಲ್ಲಿ ಸೋತು ಹೇಡಿಯಾದ.
"ಉತ್ತರನ ಪೌರುಷ ಒಲೆಯ ಮುಂದೆ ಎನ್ನುವ ಕಥೆಯನ್ನು ಕೇಳಬೇಕು ನಾವೆಲ್ಲರೂ" ನಮ್ಮ ಜನತೆ ಯಾವಾಗಲೂ ಸರ್ವ ಸಮಯದಲ್ಲೂ ಪ್ರಗತಿ ಪಥದಲ್ಲಿ ಸಾಗಬೇಕು.
ನಮ್ಮ ದೇಶ ಸರ್ವಧರ್ಮಗಳ ನಾಡು. ಹಲವಾರು ಸಂಸ್ಕೃತಿಯ ಸಮ್ಮಿಲನಗಳ ಬಿಡು. ಭಾವ ಬೇಧವನ್ನು ಮರೆತು ಭಾವೈಕ್ಯತೆಯನ್ನು ಮೆರೆದ ಏಕೈಕ ರಾಷ್ಟ್ರ ನಮ್ಮದು. ಸಂಪೂರ್ಣವಾಗಿ ನಾವು ಇಂದು ಭಾರತೀಯರು ಸಹೋದರತ್ವವನ್ನು ವಿದೇಶಕ್ಕೆ ಸಾರಿದವರು ನಾವು ಎಂದು ನಮ್ಮಲ್ಲಿಯೇ ಕೆಲವು ವಿಷಾದನೀಯ ಎಂಬಂತೆ ಸಮಾಜಘಾತುಕರು ಹುಟ್ಟಿಕೊಳ್ಳುತ್ತಿದ್ದಾರೆ. ಯುವಜನತೆಯಲ್ಲಿ ಇದರ ಬಗ್ಗೆ ಪರಿಕಲ್ಪನೆಯನ್ನು ಮೂಡಿಸಬೇಕು. ನಮ್ಮಲ್ಲಿ ಇರುವ ಖ್ಯಾತ ಚಿಂತಕರು ವಿದ್ವಾಂಸರು ತಾರ್ಕಿಕ ಮನೋವಿಶ್ಲೇಷಣಾ ಕಾರರು ಅವರು ನುಡಿದ ನುಡಿಗಳನ್ನು ಇಂದಿನ ಪ್ರಜೆಗಳಾದ ನಾವು ಅರಿತುಕೊಳ್ಳಬೇಕು.
ರಾಷ್ಟ್ರಪಿತ, ಮಹಾತ್ಮ, ಅರೆಬೆತ್ತಲೆಯ ಪಕೀರ ಹಲವಾರು ನಾಮಾಂಕಿತನಿಂದ ಕೂಡಿದ ಮಹಾತ್ಮ ಗಾಂಧೀಜಿಯವರು ಕಂಡ ಕನಸು ರಾಮರಾಜ್ಯ ರಾಮರಾಜ್ಯ ಎಂದರೆ ಹೇಗಿರಬೇಕು " ಒಂದು ದೇಶ ಅನೇಕ ಸಂಪನ್ಮೂಲಗಳಿಂದ ಕೂಡಿದೆ ಎಂದರೆ ಅದು ಅಗಾಧವಾದ ದುಡಿಯುವ ಕೈ ವರ್ಗವನ್ನು ಹೊಂದಿರುವುದು ಸೂಕ್ತ ಗಾಂಧೀಜಿ ಹೇಳಿದ್ದೆ ಇದನ್ನು ರಾಜ್ಯ ನಿರ್ದೇಶಕ ತತ್ವಗಳಲ್ಲಿ ಗಾಂಧಿವಾದಿ ತತ್ವಗಳು ಇವೆ ಒಂದು ರಾಜ್ಯದ ಕಲ್ಪನೆ ಅಲ್ಲಿನ ಜನರ ಸಕಲ ಸಮಸ್ಯೆಗಳನ್ನು ಬಗೆಹರಿಸಿ ಸದಾ ಜನರ ಕಷ್ಟಕಾರ್ಪಣ್ಯಗಳನ್ನು ಕೇಳುವ ರಾಜನೊಬ್ಬ ನಿರಬೇಕು. ಯಾವುದೇ ಸಮಾಜಘಾತುಕ ಚಟುವಟಿಕೆಗಳಿಗೆ ಆಸ್ಪದವನ್ನು ನೀಡಬಾರದು. ಅದೇ ನಮ್ಮ ರಾಮರಾಜ್ಯ ಮತ್ತು ಅದು ಕಲ್ಯಾಣ ರಾಜ್ಯವು ಹೌದು.
" ಮಧ್ಯರಾತ್ರಿಯಲ್ಲಿ ಒಬ್ಬಳು ಹೆಣ್ಣು ಮಗಳು ದಾರಿಯಲ್ಲಿ ಓಡಾಡುವ ಅಂದು ನಿಜವಾಗಿ ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ ಸಿಕ್ಕಂತೆ ಎಂದು ಗಾಂಧೀಜಿ ನುಡಿದ ಭಾವುಕ ನುಡಿಗಳು"
ಆದರೆ ಇಂದು ನಮ್ಮ ದೇಶವಲ್ಲ ನಮ್ಮ ರಾಜ್ಯವಲ್ಲ ನಮ್ಮ ಜಿಲ್ಲೆ ಅಲ್ಲ ನಮ್ಮ ಸಮಾಜದಲ್ಲಿ ಹಾಡಹಗಲೇ ಬಾಲಕಿಯ ಮೇಲೆ ಮಹಿಳೆಯ ಮೇಲೆ ವೃದ್ಧೆಯ ಮೇಲೆ ಅತ್ಯಾಚಾರ ಪ್ರಕರಣಗಳು ನಮ್ಮ ಕಣ್ಣಿಗೆ ಕಾಣುವ ನೈಜ್ಯ ದುರ್ಘಟನೆಗಳು ಮಾಯವಾಗಿದೆ. ರಾಮರಾಜ್ಯದ ಕನಸು ಅದನ್ನು ನನಸು ಮಾಡುವ ಪ್ರಯತ್ನ ಇಂದಿನ ಯುವಜನತೆ ಕೈಯಲ್ಲಿ ಇದೆ.
" ಒಂದು ಮನೆಯ ನಂದಾದೀಪ ದಾರಿದೀಪ ವೆಂದು ಯುವಕನಿಗೆ ಹೋಲಿಕೆ ಮಾಡುವ ನಮ್ಮ ಸಂಪ್ರದಾಯವು ಹೌದು ಹಾಗೆ ಒಂದು ದೇಶ ತನ್ನದೇಯಾದ ಐತಿಹಾಸಿಕ ನೆಲೆಗಟ್ಟನ್ನು ಮತ್ತು ಭದ್ರ ಬುನಾದಿಯನ್ನು ಹಾಕಿಕೊಳ್ಳುವ ನೆಲೆಯಲ್ಲಿ ಸಾಗುತ್ತಿರುವಾಗ ಇಂದಿನ ಯುವಜನತೆಯ ಪಾತ್ರ ಅಷ್ಟೇ ಮುಖ್ಯ."
ಸಮೃದ್ಧಿಯ ಭಾವವನ್ನು ಇಟ್ಟುಕೊಂಡು ಮನುಕುಲದ ಏಳಿಗೆಯನ್ನು ಬಯಸೋಣ. ನಮ್ಮ ದೇಶ ಹೆಮ್ಮೆಯ ದೇಶ ಎಂದು ಸಾರೋಣ ಸರ್ವರ ಏಳಿಗೆಯಲ್ಲೇ ನಮ್ಮ ಏಳಿಗೆಯನ್ನು ಕಾಣೋಣ. ಭಾರತಾಂಬೆಯ ವಿಜಯಪತಾಕೆ ಸಾಗಲಿ ಮುಂದೆ ಮುಂದೆ ಯುವಜನತೆಯಲ್ಲಿ ದೇಶದ ಪ್ರಬುದ್ಧವಾದ ಪರಿಕಲ್ಪನೆ ಮೊದಲು ಮೊದಲುಗೊಂಡು ಅದು ಪರಿಪರಿಯಾಗಿ ಇಂದಿನ ಯುವ ಪೀಳಿಗೆಯಲ್ಲಿಯೂ ಚಿಗುರು ಹೊಡೆಯಬೇಕು. ಮಕ್ಕಳಿಗೆ ಮನೆಯಲ್ಲಿಯೇ ದೇಶದ ಪ್ರೀತಿ ಅಗಾಧವಾದ ಮನೋಭಾವ ಗಾಢವಾದ ಭಾವನಾತ್ಮಕ ವಿಚಾರ ಮೌಲ್ಯಗಳನ್ನು ಹೇಳುವುದು ನಮ್ಮ-ನಿಮ್ಮೆಲ್ಲರ ಜವಾಬ್ದಾರಿ.
ಈಗ ಸಾಗುತ್ತಿರುವ ಭಾರತ ಅಭಿವೃದ್ಧಿಶೀಲ ಭಾರತ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ತನ್ನದೇಯಾದ ಹೊಸ ಸಂಶೋಧನೆಗಳ ಮುಖಾಂತರ ವಿಶ್ವವೇ ನಮ್ಮತ್ತ ತಿರುಗಿ ನೋಡುವ ಸಾಧನೆಗೈದವರು ನಮ್ಮವರು ಅತ್ಯಂತ ಬಲಿಷ್ಠವಾದ ರಕ್ಷಣೆಯ ಗುಂಪು, ಚಾಣಾಕ್ಷತೆಯ ಯುವ ವಿಜ್ಞಾನಿಗಳ ಪರಿಶ್ರಮ, ದೇಶಪ್ರೇಮ ಬೆಳೆಸುವ ಹಲವಾರು ಬರಹಗಾರರು, ಪ್ರೇರೇಪಣೆ ಮಾಡುವ ಭಾಷಣಕಾರರು ,ನಾವು ಯಾವುದಕ್ಕೂ ಕಡಿಮೆ ಇಲ್ಲ ಎನ್ನುವ ಮಿಂಚಿನ ರಾಜಕಾರಣಿಗಳು ಸ್ವ-ಉದ್ಯೋಗಿಗಳು ಹಲವಾರು ದಾರ್ಶನಿಕರು ಮನೋ ವಿಶ್ಲೇಷಣಾತ್ಮಕ ಚಿಂತಕರು ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಕವಿಗಳು ಇವರೆಲ್ಲ ನಮ್ಮವರೇ ಅಲ್ಲವೇ ಅವರನ್ನೊಮ್ಮೆ ಓದಿ ನಮ್ಮ ಯುವಜನತೆ ಇಂದಿನ ಭಾರತದ ಸ್ಥಿತಿಯನ್ನು ಕಂಡುಕೊಳ್ಳಬಹುದು.
" ನಾವೇಕೆ ಆಲಸಿಗಳಾಗುತ್ತವೆ. ನಮ್ಮ ಮನೆಯ ಪಕ್ಕದವರು ಆಲಸಿಗಳೇ ಹೀಗೆ ಒಂದು ಸಮಾಜ ಆಲಸಿ ಸಮಾಜವಾದರೂ ದೇಶ ಹೇಗೆ ಬದಲಾದಿತು " ಇದನ್ನು ಸ್ಪಷ್ಟವಾಗಿ ಇಂದಿನ ಯುವಪೀಳಿಗೆ ಅರಿತುಕೊಳ್ಳಬೇಕು. ನಮ್ಮ ದೇಶದಲ್ಲೇ ನಾವು ಪರಕೀಯರಂತೆ ಇರಬಾರದು ನಮ್ಮ ಶ್ರೇಷ್ಠ ಗ್ರಂಥ ಸವಿಧಾನ ನಮಗೆ ಹಕ್ಕುಗಳನ್ನು ಕೊಟ್ಟಿದೆ ಅವುಗಳನ್ನು ಬಳಸಿಕೊಳ್ಳಿ ದೇಶವನ್ನು ಸದೃಢವಾಗಿ ಒಳ್ಳೆಯ ಮಾರ್ಗ ಪಥದಲ್ಲಿ ಸಾಗುವಂತೆ ನಾವು-ನೀವೆಲ್ಲರೂ ಕಂಕಣಬದ್ಧರಾಗಿ ಮಾಡಬೇಕಾಗಿದೆ. ನಮ್ಮ ಮುಂದಿನ ಪೀಳಿಗೆಗೆ ಈ ರಾಷ್ಟ್ರದ ಬಗ್ಗೆ ದೇಶಾಭಿಮಾನ ಮತ್ತು ನಮ್ಮ ದೇಶ ಎನ್ನುವ ಆತ್ಮಾಭಿಮಾನವನ್ನು ಮೂಡಿಸುವ ಕಾರ್ಯ ನಮ್ಮಿಂದ ಸದಾ ನಡೆಯುತ್ತಿರಬೇಕು.
" ಒಬ್ಬ ಒಳ್ಳೆಯ ಭಾರತೀಯ ನಾಗಬೇಕೆಂದರೆ ಮೊದಲು ನೀನು ಒಬ್ಬ ಒಳ್ಳೆಯ ಸಮಾಜಮುಖಿ ಮತ್ತು ಹಸನ್ಮುಖಿ ವ್ಯಕ್ತಿಯಾಗಿರಬೇಕು. " ಹಲವಾರು ಜನರ ಆಸೆ ಆಕಾಂಕ್ಷೆಗಳು ಬೇರೆ ಬೇರೆಯಾಗಿರುತ್ತದೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ನಾಡು-ನುಡಿಯ ಕಲ್ಪನೆ ತೀರಾ ವಿಭಿನ್ನ.
" ಪರಿವರ್ತನೆ ಜಗದ ನಿಯಮ "
ಈ ಮಾತನ್ನು ನಾವು ಸದಾ ನಮ್ಮಲ್ಲಿ ರೂಢಿಗತ ಮಾಡಿಕೊಂಡು ನಮ್ಮವರಿಗೂ ಅದನ್ನು ಮನಮುಟ್ಟುವಂತೆ ಹೇಳಬೇಕು. ದೇಶವನ್ನು ರಕ್ಷಿಸಿಕೊಳ್ಳೋಣ. ಗೌರವಿಸೋಣ.
ನನ್ನ ದೇಶವನ್ನು ಕಟ್ಟುವಲ್ಲಿ ಯುವ ಜನತೆಗೆ ನನ್ನದೊಂದು ಕಿವಿಮಾತು.
" ಸಾಗುವ ದಾರಿ ದೂರ ಆದರೆ ನಾನು ಅಲ್ಲಿಗೆ ಹೋಗಲೇಬೇಕು. ಎನ್ನುವ ಚಲ ಹೋಗಿ ಹೋಗುತ್ತೇನೆ. ಎನ್ನುವ ಆತ್ಮವಿಶ್ವಾಸ "
ಇದು ಸದಾ ನಮ್ಮೊಂದಿಗಿದ್ದರೆ ನಾವು ನಮ್ಮ ಹೊಸ ಕನಸಿನ ಭಾರತವನ್ನು ಕಟ್ಟುವ ಮಾತಿನಲ್ಲಿ ಸಂದೇಹ ಮತ್ತು ಸಂಶಯವೂ ಇಲ್ಲ.
- ಪ್ರಕಾಶ ಕೊಪ್ಪದ (ಅಚ್ಚರಿಯ ಪಯಣಿಗ)
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ