ಭವದ ಬೆಂಕಿಯ ಕೆನ್ನಾಲಿಗೆಯಲಿ ಸುಟ್ಟು
ಪುರ್ರನೆ ಹಾರಿದ
ಬೂದಿ ಹಕ್ಕಿಯಾಗಿ
ದಿಗಂತದ ಮೈ ಸವರಿ
ಮಳೆಯಂತೆ ಸುರಿಯಬೇಕು.
ಭೂ ಒಡಲತುಂಬ
ಹಸಿರನುಸಿರು.
ಬೆಳ್ಳಿ ಬೆಟ್ಟದ ಮೂಡಲಿ
ಕಣ್ಣ ತೆರೆದ ಬೆಳಕು
ನಗೆ ಚಿಮ್ಮಿ
ಹಠಾತನೆ ಮೂಡಿದ ಕಾಮನಬಿಲ್ಲು.
ಇರುವ ಸಾಲಿನ ಕಿರಿಯ ನಾನು
ಬಿಲ್ಲಿಗೆ ಬಾಣ ಹೂಡುವ ಬಗೆಗೆ
ನನ್ನ ನಡೆ ಹಾಸಿ
ನದಿಯಾಗಿ ತೊರೆಬ್ಬಿಸಿ ಸಮುದ್ರದೊಡಲು
ಸೇರುವ ಕನಸು.
ಚಂದ್ರಮ ಹೆತ್ತ
ಬೆಳದಿಂಗಳ ಪರದೆಯಲಿ ಬೆಳ್ಳಿಚುಕ್ಕಿಯಾಗುವಾಸೆ.
ಮಣ್ಣ ಕಣದಲಿ ಗುಲಾಬಿ ನಗು
ಚಿಗುರೊಡೆದು
ಜಗದ ಹಸಿವು ನೀಗುವಾಸೆ.
ಹಸಿರ ಚಿಗುರ ತೇರನೇರಿ ಬಂತು ಮರಿದುಂಬಿ ಚಿಗುರು ಮೀಸೆ
ಎಲ್ಲೆಲ್ಲೂ ನೀರವ ಮೌನ ಗಗನ ಸಿಡಿಲು ಗುಡುಗುವಾಸೆ.
ಹೆತ್ತೊಡಲು ಭೂತಾಯಿಗೆ
ಚಿದಂಬರ ತೊಡಿಸುವಾಸೆ.
- ವೆಂಕಟೇಶ್ ಬಡಿಗೇರ
ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತರು
ಕಮಲಾಪುರ ಅಂಚೆ
ಹೊಸಪೇಟೆ ತಾಲ್ಲೂಕು, ವಿಜಯನಗರ ಜಿಲ್ಲೆ.
ಮೊಬೈಲ್ ಸಂಖ್ಯೆ 9448330535
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ