ಶುಕ್ರವಾರ, ಜನವರಿ 13, 2023

ಸ್ವಾಮೀಜಿಯವರ ಕನಸಿನ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ.

"ಎದ್ದೇಳಿ, ಕಾರ್ಯೋನ್ಮುಖರಾಗಿ, ಈ ಜೀವನವಾದರೂ ಎಷ್ಟು ಕಾಲ? ನೀವು ಈ ಜಗತ್ತಿಗೆ ಬಂದ ಮೇಲೆ ಏನಾದರೂ ಗುರುತನ್ನು ಬಿಟ್ಟು ಹೋಗಿ. ಅದಿಲ್ಲದಿದ್ದರೆ ನಿಮಗೂ ಮರ,ಕಲ್ಲುಗಳಿಗೂ ಏನು ವ್ಯತ್ಯಾಸ? ಅವು ಅಸ್ತಿತ್ವಕ್ಕೆ ಬರುತ್ತವೆ, ನಶಿಸಿ ನಿರ್ನಾಮವಾಗುತ್ತವೆ" ಎಂದು ತಿಳಿಸಿದ  ನಾಡು ಕಂಡ  ಸನ್ಯಾಸಿ ಸ್ವಾಮಿ ವಿವೇಕಾನಂದರು.

  ಸ್ವಾಮೀಜಿ ಅವರ ಚಿಂತನೆಯಲ್ಲಿ ಭಾರತ ಎಂದರೆ ಅದು ವಿಶ್ವಕ್ಕೆ ಗುರುವಾಗಿರಬೇಕು ಎಂಬ ಒಂದೇ ಗುರಿಯನ್ನು ಇಟ್ಟುಕೊಂಡವರು. ಅದು ಕೂಡ ನಮ್ಮ ದೇಶದಲ್ಲಿ ಇರುವ ಯುವಶಕ್ತಿಯಿಂದ ಮಾತ್ರವೇ ಸಾಧ್ಯ ಎಂದು ಸಾರಿ ಹೇಳಿದವರು ಸ್ವಾಮೀಜಿಯವರು.
 
    1863 ರ ಜನವರಿ 12ರಂದು ಪಶ್ಚಿಮ ಬಂಗಾಳದ ಕಲ್ಕತ್ತಾ ನಗರದ ದಂಪತಿಗಳಾದ ವಿಶ್ವನಾಥದತ್ತ ಹಾಗೂ ಭುವನೇಶ್ವರಿದೇವಿಯವರ ಮಗನಾಗಿ ಜನಿಸಿದರು. ನರೇಂದ್ರನಾಥದತ್ತ ನಿಂದ ಸ್ವಾಮಿ ವಿವೇಕಾನಂದರಾಗಿ, ಭಾರತವನ್ನು ಸಂಪೂರ್ಣವಾಗಿ ಪರ್ಯಟನೆಯನ್ನು ಮಾಡಿ ಡಿಸೆಂಬರ್ 25 ರಂದು ಕನ್ಯಾಕುಮಾರಿಯ ಬಂಡೆಯ ಮೇಲೆ ಮೂರು ದಿನ ಧ್ಯಾನ ಮಾಡಿದಾಗ ಅವರಿಗೆ ತಮ್ಮ ಜೀವನದ ಗುರಿ ಸ್ಪಷ್ಟವಾಯಿತು. ನಂತರ ಅವರು ನನ್ನ ಭಾರತ ವಿಶ್ವಗುರು ಸ್ಥಾನವನ್ನು ಅಲಂಕರಿಸಬೇಕು. ಜಗತ್ತಿನ ಎಲ್ಲಾ ರಾಷ್ಟ್ರಗಳಿಗೂ ಗುರು ನನ್ನ ಭಾರತವಾಗಿರಬೇಕು ಎನ್ನುವ ಮಹಾದಾಸೆಯನ್ನು ಹೊಂದಿದ್ದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು.

     ಸ್ವಾಮೀಜಿಯವರ ವಿಶ್ವಗುರು ಭಾರತ ಎಂದರೆ,
*ರಾಷ್ಟ್ರದ ಕೆಲಸಕ್ಕಾಗಿ, ನಿಷ್ಕಲ್ಮಶ ಮನಸ್ಸಿನಿಂದ ಎಲ್ಲಾ ಯುವಕರು ಕೈಜೋಡಿಸಬೇಕು.
*ದೇಶದ ಎಲ್ಲಾ ಪ್ರಜೆಗಳು ಮೊದಲು ಅಕ್ಷರಸ್ತರಾಗಬೇಕು, ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸಬೇಕು.
*ರಾಷ್ಟ್ರವು ಜಾತಿ ವ್ಯವಸ್ಥೆಯಿಂದ ಮುಕ್ತವಾಗಿರಬೇಕು.
*ದೇಶವನ್ನು ಲಂಚ ಮುಕ್ತ ದೇಶವನ್ನಾಗಿಸಬೇಕು.
*ಭಾರತ ದೇಶದ ಎಲ್ಲಾ ನಾಗರಿಕರು ಬಡತನದ ನಿರ್ಮೂಲನೆಯನ್ನು ಮಾಡಬೇಕು.
*ಯಾರು ಹಸಿವಿನಿಂದಾಗಿ ಬಳಲಿ ಸಾಯಬಾರದು.
*ಎಲ್ಲರೂ ತಮ್ಮ ಜೀವನದಲ್ಲಿ ಧರ್ಮ, ಸಂಸ್ಕೃತಿಯನ್ನು ಮೊದಲು ಗೌರವಿಸಿ ಅದನ್ನು ಅಳವಡಿಸಿಕೊಳ್ಳಬೇಕು. *ತಂದೆ-ತಾಯಿಗೆ,ಗುರು-ಹಿರಿಯರಿಗೆ ಗೌರವ ಕೊಡಬೇಕು.
*ಜನರಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಬೇಕು.
      ಇವೆಲ್ಲವೂ ಕೇವಲ ಯುವಶಕ್ತಿಯಿಂದ ಮಾತ್ರವೇ ಸಾಧ್ಯ ಎನ್ನುವ ದೃಢ ನಂಬಿಕೆ ಇಟ್ಟವರು ಸ್ವಾಮೀಜಿಯವರು.

     ಸಿಡಿಲಸಂತರಾದ ಸ್ವಾಮಿ ವಿವೇಕಾನಂದರ ೧೬೦ನೇ ಜನ್ಮದಿನೋತ್ಸವವಂತು ಬಂದಿದೆ. ಹಾಗೇ ಅವರು ತಾಯಿ ಭಾರತಾಂಬೆಯನ್ನು ಕುರಿತು ಕಂಡಂತಹ ವಿಶ್ವಗುರು ಭಾರತದ ಕನಸು ಕೂಡ ನನಸಾಗುತ್ತಿದೆ. ಹೇಗೆಂದರೆ ನಾವು ಒಂದಿಷ್ಟು ಪ್ರಚಲಿತ ಘಟನೆಗಳನ್ನೇ ಗಮನಿಸಿದರೆ ಅರಿವಾಗುತ್ತದೆ. ಅವುಗಳಲ್ಲಿ ಕೆಲವೊಂದರ ಬಗೆಗೆ ಗಮನಹರಿಸುವುದಾದರೆ, 
*ಕೊರೋನ ಕಾಯಿಲೆಯಿಂದ ವಿಶ್ವವೆ ತತ್ತರಿಸಿಹೋಗಿದ್ದನ್ನು ನಾವು ನೋಡಿದ್ದೇವೆ. ವಿಶ್ವಕ್ಕೆ ನರಕಯಾತನೆಯನ್ನು ಸೃಷ್ಟಿಸಿದ ಕೋರೋನ ಕಾಯಿಲೆಗೆ ನಮ್ಮ ಭಾರತದ ವಿಜ್ಞಾನಿಗಳು ಕೇವಲ ಒಂದು ವರ್ಷದ ಒಳಗೆ ಔಷಧಿಯನ್ನು ಕಂಡುಹಿಡಿದು ಇಡೀ ವಿಶ್ವಕ್ಕೆ ಅದನ್ನು ಸರಬರಾಜು ಮಾಡಿ ನಮ್ಮ ಭಾರತ ಸಹಾಯ ಹಸ್ತವನ್ನು ನೀಡಿದೆ.
*ಶ್ರೀಲಂಕಾದಲ್ಲಿ ಸೃಷ್ಟಿಯಾಗಿದ್ದಂತಹ ಆರ್ಥಿಕ ಪರಿಸ್ಥಿತಿಯ ಬಿಕ್ಕಟಿನ ಸಂದರ್ಭದಲ್ಲಿ ಅಲ್ಲಿನ ಜನರು ಹಸಿವಿನಿಂದ ಬಳಲುತ್ತಿದ್ದ ಸಮಯದಲ್ಲಿ ನಮ್ಮ ಹೆಮ್ಮೆಯ ಭಾರತ ಆಹಾರ ಪೂರೈಕೆ ಮಾಡಿ ಸಹಾಯ ಹಸ್ತ ನೀಡಿದೆ.
*ಅಷ್ಟೇ ಅಲ್ಲ ಷೇರು ಮಾರುಕಟ್ಟೆಯಲ್ಲಿಯೂ ಸಹ ಭಾರತ ಪ್ರಥಮ ಸ್ಥಾನವನ್ನು ಗಳಿಸುತ್ತಾ,ಆರ್ಥಿಕ ಚೇತರಿಕೆ ಸಾಧಿಸುತ್ತಿದೆ.
*ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ನಮಗೆಲ್ಲ ತಿಳಿದಿವೆ. ಆ ಸಂಘರ್ಷದ ಕೊನೆಯಲ್ಲಿ ನಮ್ಮ ಹೆಮ್ಮೆಯ ಭಾರತವನ್ನು ಸಂಧಿ ಮಾಡಿಸಿಕೊಡಲು ರಷ್ಯಾ ಅಂಗಲಾಚುತ್ತದೆ.
*ದೇಶದ ಅತ್ಯುನ್ನತ ಹುದ್ದೆಯಾದ,ಪ್ರಥಮ ಪ್ರಜೆಯಾದ ರಾಷ್ಟ್ರಪತಿ ಹುದ್ದೆಗೆ ಒಬ್ಬ ಸಾಮಾನ್ಯ ಬುಡಕಟ್ಟು ಜನಾಂಗದ ಮಹಿಳೆಯನ್ನು ಆಯ್ಕೆ ಮಾಡಿರುವುದು ಹೆಮ್ಮೆಯ ಸಂಗತಿಯೇ ಸರಿ.
*ಇನ್ನು ನಮ್ಮ ಸೈನ್ಯದ ವಿಚಾರಕ್ಕೆ ಬರುವುದಾದರೆ, 2019ರಲ್ಲಿ ನಡೆದಂತಹ ಪುಲ್ವಾಮ ದಾಳಿಯ ಪ್ರತಿಕಾರವಾಗಿ ನಮ್ಮ ಭಾರತ "ಏರ್ ಸ್ಟ್ರೈಕ್"ಅನ್ನು ಮಾಡಿ ಪಾಕಿಸ್ತಾನಕ್ಕೆ ನುಗ್ಗಿ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ್ದಾರೆ.
*"ಆಪರೇಷನ್ ಆಲ್ ಔಟ್" ಎಂಬ ಹೆಸರಿನಲ್ಲಿ 2022 ರಲ್ಲಿ ಕಾಶ್ಮೀರದಲ್ಲಿ 172 ಉಗ್ರರನ್ನು ಸಂಹಾರ ಮಾಡಿದ್ದಾರೆ ನಮ್ಮ ಹೆಮ್ಮೆಯ ಬಲಿಷ್ಠ ಯೋಧರು.
*ಇನ್ನು ಇದೇ ಮೊದಲ ಬಾರಿಗೆ ನಮ್ಮಈ ಗಣರಾಜ್ಯೋತ್ಸವದಲ್ಲಿ ಬಿ.ಎಸ್.ಎಫ್ ಒಂಟೆ ತುಕಡಿಯಲ್ಲಿ ಭಾಗಿಯಾಗಲಿದ್ದಾರೆ ನಮ್ಮ ಹೆಮ್ಮೆಯ ವೀರ ನಾರಿಯರು.
*ಪ್ರಚಲಿತ ದಿನಗಳಲ್ಲಿ ನಮ್ಮ ಸೈನ್ಯಕ್ಕೆ ಮುಕ್ತ ಸ್ವಾತಂತ್ರ್ಯ ದೊರೆತಿದೆ.
* ಜಗತ್ತಿನಲ್ಲೇ ಬಲಿಷ್ಠ ರಕ್ಷಣಾ ಪಡೆಗಳು ಸಾಲಿನಲ್ಲಿ ಭಾರತವು ನಾಲ್ಕನೇ ಸ್ಥಾನಗಳಿಸಿದೆ.
*ರಾಷ್ಟ್ರ ಪ್ರಧಾನ ಸೇವಕರದಂತಹ ನರೇಂದ್ರ ಮೋದಿಜಿ ಅವರು ತಮ್ಮ ಮಾತೆಯ ಮರಣದ ಸಂದರ್ಭದಲ್ಲಿಯೂ ಸಹ ಕೇವಲ ಐದು ಗಂಟೆಗಳ ಒಳಗಾಗಿ ಎಲ್ಲ ವಿಧಿ ವಿಧಾನಗಳನ್ನು ಮುಗಿಸಿ, ರಾಷ್ಟ್ರದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಶ್ರೇಷ್ಠ ನಾಯಕ ಪಶ್ಚಿಮ ಬಂಗಾಳದಲ್ಲಿ "ಒಂದೇ ಭಾರತ್ ಎಕ್ಸ್ಪ್ರೆಸ್" ರೈಲಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿರುವುದು ಅವರ ಕರ್ತವ್ಯ ಪ್ರಜ್ಞೆಗೆ ಹಿಡಿದ ಕೈಗನ್ನಡಿ.
       ಈ ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿದರೆ, ಹಾಗೂ ಇಂತಹ ರಾಷ್ಟ್ರಸೇವಕರು ಇನ್ನು ಹೆಚ್ಚು ಆಡಳಿತದಲ್ಲಿ ಮುಂದುವರೆಯುವುದೇ ಆದಲ್ಲಿ ಸ್ವಾಮಿ ವಿವೇಕಾನಂದರು ಕಂಡಂತಹ ಕನಸು ಆದಷ್ಟು ಬೇಗನೆ ನೆರವೇರುವುದರಲ್ಲಿ ಸಂಶಯವಿಲ್ಲ.
    
   ಪ್ರಸ್ತುತ ಸ್ವಾಮೀಜಿಯವರ "ವಿಶ್ವಗುರು ಭಾರತ" ನಮ್ಮ ಕಣ್ಣ ಮುಂದೆ ಕಾಣಬೇಕಾದರೆ ನಾವು ಮಾಡಬೇಕಾದ ಕೆಲ ಕಾರ್ಯಗಳು ಈ ಮುಂದಿನಂತಿವೆ,
* ಯುವಕರಿಗೆ,ಮಕ್ಕಳಿಗೆ ಸ್ವಾಮೀಜಿಯವರ ಜೀವನಾಧಾರಿತ ಚಲನ ಚಿತ್ರಗಳನ್ನು ತೋರಿಸುವುದು.
* ಸ್ವಾಮೀಜಿಯವರ ದಿವ್ಯ ವಾಣಿಯ ಅರ್ಥ ಮಾಡಿಕೊಳ್ಳುವುದರ ಮೂಲಕ ಜೀವನ ಚರಿತ್ರೆ ಆಧಾರಿತ ಪಠ್ಯ ಪಠ್ಯ ಪುಸ್ತಕಗಳನ್ನು ಇಡುವುದು
* ಸ್ವಾಮೀಜಿಯವರ ಇಂಚು ಇಂಚು ಜೀವನಾಧಾರಿತ ಶಾರ್ಟ್ ಯುಟ್ಯೂಬ್ ವಿಡಿಯೋಗಳು ಅಥವಾ ಚಲನಚಿತ್ರಗಳನ್ನು ಮಾಡುವ ಮೂಲಕ ಜಾಗೃತಿ ಮಾಡಿಸುವುದು
* ವಿವೇಕಾನಂದರ ಧೈರ್ಯವಾಕ್ಯಗಳನ್ನು ಟಿಕ್ ಟಾಕ್ ಮಾಡುವುದರ ಮತ್ತು ಅವುಗಳನ್ನು ವಾಟ್ಸಪ್ ಸ್ಟೇಟಸ್ ಗೆ ಹಾಕುವುದರ ಮೂಲಕ
* ವಿವೇಕ ಮಾಲೆ ಆಚರಿಸುವುದರ ಮೂಲಕ
* ಸ್ವಾಮೀಜಿಯವರ ಹೆಸರಿನಲ್ಲಿ ಹೊಸ ಆವಿಷ್ಕಾರಗಳನ್ನು ಜಾರಿಗೆ ತರುವುದರ ಮೂಲಕ.
* ಇನ್ನು ಈಗಂತೂ ಹತ್ತು ಹಲವು ಯುವ ಸಂಘಟನೆಗಳನ್ನು ಸ್ವಾಮೀಜಿಯವರನ್ನು ಆದರ್ಶ ಪುರುಷನನ್ನಾಗಿರಿಸಿಕೊಂಡು ಮಾರ್ಗದರ್ಶಕರನ್ನಾಗಿ ತೆಗೆದುಕೊಂಡು ರಾಷ್ಟ್ರದ ಅಭಿವೃದ್ದಿಯನ್ನು  ಮಾಡುತ್ತಿದ್ದಾರೆ ಅದರಲ್ಲಿ ನಮ್ಮದೊಂದು ಪುಟ್ಟ ಸಮಯವನ್ನು ನೀಡುವ ಮೂಲಕ.

      ಇದಷ್ಟೇ ಅಲ್ಲದೆ ಈಗಿನ ಯುವಕರು ರಾಷ್ಟ್ರದಲ್ಲಿ ಇರುವಂತಹ ಸಂವಿಧಾನದ ನಾಲ್ಕು ಆಧಾರ ಸ್ಥಂಭಗಳು ಎಂದು ಕರೆಯಲ್ಪಡುವ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮತ್ತು ಮಾಧ್ಯಮ ಇವುಗಳಲ್ಲಿ ಯುವಕರು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು. ಈ ಎಲ್ಲಾ ಆಧಾರ ಸ್ಥಂಭಗಳ ಹುದ್ದೆಗಳಲ್ಲಿ ಯುವಕರು ರಾರಾಜಿಸಿದರೆ, ಸ್ವಾಮೀಜಿ ಕಂಡಂತಹ ವೀರಭಾರತವನ್ನು ನಾವು ಮುಟ್ಟಲಿಕ್ಕೆ ಸಾಧ್ಯವಾಗಬಹುದು ಎಂದು ಈ ಮೂಲಕ ಭಾವಿಸಬಹುದು.
     ಯಾವಾಗಲೂ ಒಳ್ಳೆಯದನ್ನೇ ಮಾಡಿ, ನಿರಂತರವಾಗಿ ವಿಚಾರವನ್ನೇ ಆಲೋಚಿಸಿ, ದುಷ್ಟಸಂಸ್ಕಾರಗಳನ್ನು ನಿಗ್ರಹಿಸುವುದಕ್ಕೆ ಇದೊಂದೇ ಮಾರ್ಗ ಎಂದು ಸ್ವಾಮಿ ವಿವೇಕಾನಂದರು ಇಡೀ ವಿಶ್ವಕ್ಕೆ, ಧರ್ಮ-ಸಂಸ್ಕೃತಿ ಹಾಗೂ ರಾಷ್ಟ್ರವೇ ನಮ್ಮೆಲ್ಲರ ದೈವ ಎಂದು ಪ್ರಸ್ತುತ ಜಗತ್ತಿಗೆ ಅನ್ವಯವಾಗುವಂತೆ ತೋರಿಸಿಕೊಟ್ಟರು ನಮ್ಮ ಸಿಡಿಲಸಂತ.
       "ಇನ್ನಾದರೂ ಎಳಿ, ಎದ್ದೇಳಿ, ಗುರಿಮುಟ್ಟುವವರೆಗೆ ನಿಲ್ಲದಿರಿ" ಎಂಬ ಧ್ಯೇಯವಾಕ್ಯಕ್ಕೆ ಬದ್ಧರಾಗೋಣ.

ಲೇಖನ: 
ಬ್ರಿಜೇಶ್ ಕುಮಾರ್.ಬಿ.ಟಿ.
ದ್ವಿತೀಯ ಪಿಯುಸಿ.
ಚಿತ್ರದುರ್ಗ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...