ಶನಿವಾರ, ನವೆಂಬರ್ 5, 2022

ಅಪ್ಪು ಸ್ಮರಣೆ (ಕವಿತೆ) - ಡಾ. ಸುರೇಶ ನೆಗಳಗುಳಿ.

ದಾನಿಗಳ ಕಂಡಿಹೆವು ಜಗದಲ್ಲಿ ಬಹಳ
ಮೌನದಲಿ ಜನರ ಸುಖ ಬಯಸುವರು ವಿರಳ
ಮನದಲಿಹ ಪರರೊಲವು ಜೀವನವು ಸರಳ
ತನುವ ಸವೆಸಿದ ಪುನೀತರಾಜಗೆ ನಮನ ಬಹುಳ

ಅರಿವಿಗೇ ಬರಲಿಲ್ಲ ಬದುಕಿರುವ ಸಮಯ
ಇರಿಸಿರುವ ಆಂತರ್ಯ ಇತ್ತೆಂದು ತ್ಯಾಗ ಮಯ 
ಬಿರಿದ ಮಲ್ಲಿಗೆ ಹೂವು ವನದಲ್ಲಿ ಇದ್ದಂತೆ
ಹರಿಸಿ ಬಿಟ್ಟಿತು ಜಗದಿ ಗಂಧ ಇನ್ನಿಲ್ಲದಂತೆ

ಯಾರ ಬಳಿಯೂ ಇಲ್ಲ‌ವಿರಸ ಭಾವಗಳು
ತೋರುತಲೆ ಇರುವಂಥ ಮುಗ್ಧ ಹಾಸಗಳು
ನೇರ ನುಡಿ ಸರಳತೆಗೆ ಮುಡಿಪಾದ ದೇಹ
ಸೇರಿಹರು ಅಪ್ಪನೆಡೆ ಸ್ವರ್ಗದಲಿ ಗೇಹ

ಅನುಸರಿಸಿ ನಡೆಯೋಣ ಲೋಹಿತನಾದರ್ಶ
ತನು ಮನದಿ ಇರಿಸುತಲಿ ನಿತ್ಯವೂ ಹರ್ಷ
ಹನಿಸುತಲಿ ಒಲವನ್ನು ಸಕಲರೊಡೆ ನಿತ್ಯ
ಜನಮಾನಸದಿ ಇರಲು ನುಡಿನಮನ ಸತ್ಯ
- ಡಾ. ಸುರೇಶ ನೆಗಳಗುಳಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...