ನೆಲೆಯ ಕಲ್ಪಿಸಿಹುದು ಕರುನಾಡಿನ ನೆಲ,
ದಾಹ ತೀರಿಸುತಲಿಹುದು ಕರುನಾಡಿನ ಜಲ,
ಹಸಿವ ನೀಗಿಸಿ ತುಂಬುತಿಹಳು ತೋಳ್ಬಲ,
ಕನ್ನಡದ ಕಂಪು ಪಸರಿಸಿದೆ ಜಗದಗಲ...
ಅಚ್ಚ ಹಸಿರಿನ ಸಿರಿಯ ಕಂಪು,
ಜನಪದ ಸೊಗಡಿನ ಇಂಪು,
ಕವಿ-ಸಾಹಿತಿ-ಬರಹಗಾರರ ಸಾಹಿತ್ಯದ ಛಾಪು,
ಹಳೆಯ ನೆನಪು-ಹೊಸದರ ಬಿಳುಪು-ಕನ್ನಡದ ಹೊಸಬಗೆಯ ಹೊಳಪು...
ಧಾರ್ಮಿಕ-ಸಾಂಸ್ಕೃತಿಕ-ಶೈಕ್ಷಣಿಕ ವೈಭವದ ಸೆಲೆ,
ನಾಟ್ಯ-ಸಂಗೀತ,ಕಲೆ-ಶಿಲ್ಪಕಲೆ,
ಯಕ್ಷಗಾನ-ಗಾಯನ-
ಅನ್ನದಾನಗಳಿಗೆ ಕಟ್ಟಲಾಗದು ಬೆಲೆ...
ಅಮ್ಮ ಎಂದು ಮೊದಲು ತೊದಲು ನುಡಿದ ಕನ್ನಡ,
ದೇಹದ ಪ್ರತೀ ಕಣ-ಕಣದಲ್ಲೂ ಕನ್ನಡ,
ಕನ್ನಡಕ್ಕಾಗಿ ಎಲ್ಲರೂ ಒಂದಾಗಿ,
ಕನ್ನಡದ ಮಾತುಗಳು ಹೊರಬರಲಿ ಸುಶ್ರಾವ್ಯ ಹಾಡುಗಳಾಗಿ...
- ಶಾಂತಾರಾಮ, ಶಿರಸಿ. ಉತ್ತರ ಕನ್ನಡ.
7676106237
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ