ಶನಿವಾರ, ಡಿಸೆಂಬರ್ 10, 2022

ಅವಳೊಂದು ಅದ್ಬುತ (ಕವಿತೆ) - ನಮ್ರತ ಕುಲಕರ್ಣಿ.

ನಿನ್ನ ಕಣ್ಣ ಕಾಡಿಗೆ 
 ಕೆಣಕಿತು ನಾನ್ನ ಪಾಡಿಗೆ
ಆ ನಿನ್ನ ಮೊಗದ ಬೆಸುಗೆ
ಮರೆತರೂ ಮರೆಯದ ಚೆಲುವಿನ ನಗೆ
ಆದರೂ ಅವಳೊಂದು ಅದ್ಭುತ

ನಿನ್ನ ಗೆಜ್ಜೆಯ ನಾದ
ನನ್ನ  ಉಸಿರಿನ ರಾಗ
ಒ ಗೆಳತಿ ಇಣುಕಿ ನೋಡದಿರು ನೀ
ಮರದ ಸನ್ನೆಯ ಅಡಿಯಲ್ಲಿ
ಎದೆಬಡಿತ ಹೇಳಿತು ನೀನಿರುವೆಯಲ್ಲಿ!!
ಆದರೂ ಅವಳೊಂದು ಅದ್ಭುತ

ಆಗು ನೀ ಬಾಳಿನ ಸಂಗಾತಿ
ಬೇಡುವೆ ನಾ ಮಂಡಿಯೂರಿ ಗೆಳತಿ
ನೀನಾದರೆ ನನ್ನ ಬಾಳ ಜ್ಯೋತಿ
ಎಂದೆಂದಿಗೂ ಅಮರ ಈ ನಮ್ಮ ಪ್ರೀತಿ
ಆದರೂ ಅವಳೊಂದು ಅದ್ಭುತ.

- ನಮ್ರತ ಕುಲಕರ್ಣಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...