ಶುಕ್ರವಾರ, ಡಿಸೆಂಬರ್ 9, 2022

ಮನಸ್ಸು ಅರಳಲಿ (ಕವಿತೆ) - ಕೆ.ಮು.ಕೃ., ಮಾಲೂರು.

ಮನಸ್ಸು ಅರಳಲಿ
ಜನರಲ್ಲಿ ಪ್ರೀತಿ ಮೂಡಲಿ
ಜಗವೆಲ್ಲ ಸುಖದಲ್ಲಿರಲಿ
ವಿಶ್ವವೇ ಒಂದು ಕುಟುಂಬ-
- ವಾಗಲಿ

ಹೂ ಹರಡಿದಂತೆ ಮನಸ್ಸಿನ
ಭಾವನೆಗಳರಳಲಿ
ಗಾಳಿಯಲ್ಲಿ ಹೂವಿನ
ಸುವಾಸನೆ ಬೀರುವಂತೆ
ಜನರ ಭಾವನೆಗಳು ಬೀರಲಿ

ಮೈ ಮರೆತು ಸಂಗೀತವನ್ನು
ಸಹೃದಯರು ಕೇಳುತ
ಲೋಕದ ಜನರೆಲ್ಲ
ಸಂಗೀತಕ್ಕೆ ಬೆಲೆ ಕೊಡುವ
ಹೃದಯವಂತ ಜನರಾಗಲಿ

ಯಾವುದರಲ್ಲೂ ಮೇಲುಕೀಳು
ಭಾವನೆಗಳು ಎಲ್ಲೂ ಬಾರದೆ
ಕ್ರೋದವನು ಬಿಟ್ಟು ಬದುಕುತ
ಎಲ್ಲರಲ್ಲಿ ಒಂದಾಗಿ ಬಾಳಲಿ.
    
- ಕೆ.ಮು.ಕೃ., ಮಾಲೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...