ಗೆಜ್ಜೆಯ ಕಟ್ಟೋಣ ನಾವು
ಹೆಜ್ಜೆಯ ಹಾಕೋಣ
ಹೆಜ್ಜೆಯ ಹಾಕುತ
ಸದ್ದನು ಮಾಡುತ
ದೇಶವ ಕಟ್ಟೋಣ
ನಾವು ದೇಶವ ಕಟ್ಟೋಣ
ಜ್ಞಾನವ ಹಂಚೋಣ ನಾವು
ಸಂವಿಧಾನ ಓದೋಣ
ಸಂವಿಧಾನ ಓದುತ
ಜ್ಞಾನವ ಬೆಳೆಸುತ
ದೇಶವ ಕಟ್ಟೋಣ
ನಾವು ದೇಶವ ಕಟ್ಟೋಣ
ಮತಭೇದ ಅಳಿಸೋಣ ನಾವು
ಏಕತೆ ಸಾರೋಣ
ಏಕತೆ ಸಾರುತ
ಭ್ರಾತೃತ್ವ ಬೆಳೆಸುತ
ದೇಶವ ಕಟ್ಟೋಣ
ನಾವು ದೇಶವ ಕಟ್ಟೋಣ
ಒಗ್ಗಟ್ಟನ್ನು ಮೂಡಿಸೋಣ ನಾವು
ಜಾತಿಯತೆ ಅಳಿಸೋಣ
ಜಾತಿಯತೆ ಅಳಿಸುತ
ಒಗ್ಗಟ್ಟನ್ನು ಜಪಿಸುತ
ದೇಶವ ಕಟ್ಟೋಣ
ನಾವು ದೇಶವ ಕಟ್ಟೋಣ
ಅನೀತಿಯ ಓಡಿಸೋಣ ನಾವು
ನೀತಿಯ ಬಿತ್ತೋಣ
ನೀತಿಯ ಬಿತ್ತುತ
ಪ್ರೀತಿಯ ಹರಡುತ
ದೇಶವ ಕಟ್ಟೋಣ
ನಾವು ದೇಶವ ಕಟ್ಟೋಣ.
- ನಾಝೀಮಾ ಹಾಸನ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ