ಮನ ಹೊಕ್ಕಿ ಕುಳಿತಿರುವ
ಕಾರ್ಮೋಡ ಸರಿಯಲಿ
ನವಿರಾದ ಸವಿ ಭಾವ
ಹೊರ ಹೊಮ್ಮಿ ನಗಲಿ
ಸಿಟ್ಟು ಸೆಡವು ಕೋಪ ತಾಪ
ಏಕೆ ಬೇಕು ಮನದಲಿ
ಸ್ನೇಹ ಪ್ರೀತಿ ತ್ಯಾಗ ಕರುಣೆ
ಒಡಲ ತುಂಬಿ ತಣಿಸಲಿ
ನಗುತ ನಗಿಸಿ ನೋಡಿ ಒಮ್ಮೆ
ನಿಮ್ಮ ಮನವೆ ಕುಣಿವುದು
ಕೋಪದಲ್ಲಿ ನಿಮ್ಮ ಮುಖ
ವ್ಯಾಘ್ರನಂತೆ ಕಾಣ್ವುದು
ಅಂದ ಚಂದ ಎಲ್ಲ ನಮ್ಮ
ನಗುವಿನಲ್ಲೆ ಇರುವುದು
ನಮ್ಮಲಿರುವ ದುಡುಕುತನ
ಸುಖ ಶಾಂತಿ ತೊರೆವುದು
ನಗುವಿನಲ್ಲಿ ಸರಿಸಿ ಬಿಡಿ
ಎದೆಯೊಳಗಿನ ಕಸವ
ಎಲ್ಲರಲ್ಲು ಬೆರೆತು ನೋಡಿ
ಮರೆಸುವುದೆದೆ ನೋವ.
- ಸಬ್ಬನಹಳ್ಳಿ ಶಶಿಧರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ