ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ (ರಿ) ಹಾಸನ, ಹಾಸನ ಜಿಲ್ಲಾ ಘಟಕದ ವತಿಯಿಂದ ಯುಗಾದಿ ಹಬ್ಬದ ಅಂಗವಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿರುತ್ತದೆ. ಆಸಕ್ತರು ಮೂರು ಪುಟಗಳಿಗೆ ಮೀರದಂತೆ
ಅಪ್ರಕಟಿತ ಸ್ವರಚಿತ ಪ್ರಬಂಧವನ್ನು ದಿನಾಂಕ-20-03-2023ರ ಸಂಜೆ 8-00 ಗಂಟೆಯ ಒಳಗೆ ತಲುಪುವಂತೆ, ತಮ್ಮ ಕಿರುಪರಿಚಯ ಒಂದು ಪುಟ, ವಿಳಾಸ,ಸಂಪರ್ಕ ಸಂಖ್ಯೆ, ಸ್ಪುಟವಾದ ಭಾವಚಿತ್ರದೊಂದಿಗೆ ಈ ವಾಟ್ಸಾಪ್ ಸಂಖ್ಯೆಗೆ ಕಳುಹಿಸಲು ಕೋರಿದೆ.
ಮೊದಲು ಬಂದ 30 ಲೇಖನಗಳನ್ನು ಮಾತ್ರವೇ ಸ್ಪರ್ಧೆಗೆ ಮತ್ತು ಕೃತಿಗೆ ಪರಿಗಣಿಸಲಾಗುವುದು.
ಬಹುಮಾನಿತ ಹಾಗು
ಅತ್ಯುತ್ತಮವೆನಿಸಿದ ಲೇಖನಗಳನ್ನು ಕೃತಿಯ ರೂಪದಲ್ಲಿ ಹೊರತರಲಾಗುತ್ತಿದೆ.
*ವಿಷಯ :"ಪರಿಸರ ಸಂರಕ್ಷಣೆಯಲ್ಲಿ ನಮ್ಮ ಪಾತ್ರ " ಕುರಿತು*
8 ನೇ ತರಗತಿಯಿಂದ ಪದವಿವರೆಗಿನ ವಿದ್ಯಾರ್ಥಿಗಳಿಗೆ.
ಪ್ರಬಂಧವನ್ನು ತಪ್ಪಿಲ್ಲದಂತೆ ಟೈಪ್ ಮಾಡಿರಬೇಕು.
ಕಳುಹಿಸಬೇಕಾದ ಹಾಗೂ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ವಾಟ್ಸಾಪ್ ಸಂಖ್ಯೆ - 9972125656
9880417527
ಅಥವಾ ಮಿಂಚಂಚೆ: spandanasirihsn@gmail.com
ಕೃತಿ ಬೇಕಾದಲ್ಲಿ ಮುಂಚಿತವಾಗಿಯೆ ತಿಳಿಸಬೇಕಾಗಿರುತ್ತದೆ.
ಬಹುಮಾನಿತರಿಗೆ ಮತ್ತು ಹತ್ತು ಅತ್ಯುತ್ತಮ ಲೇಖಕರಿಗೆ "ಸ್ಪಂದನ ಸಿರಿ ಸಂಸ್ಕೃತಿ ಸಮ್ಮೇಳದ" ಕೃತಿಬಿಡುಗಡೆ ಕಾರ್ಯಕ್ರಮದಲ್ಲಿ ಅಭಿನಂದನ ಪತ್ರದೊಂದಿಗೆ ಸನ್ಮಾನಿಸಿ ಗೌರವಿಸಲಾಗುತ್ತದೆ.
ಸಮಿತಿಯ ತೀರ್ಮಾನವೆ ಅಂತಿಮವಾಗಿರುತ್ತದೆ.
ಧನ್ಯವಾದಗಳೊಂದಿಗೆ
ಶ್ರೀ ವರುಣ್ ರಾಜ್ ಜಿ,ರಾಜ್ಯ ಪ್ರಧಾನ ಕಾರ್ಯದರ್ಶಿ,
ಆಶಾಕಿರಣ್,
ಜಿಲ್ಲಾಧ್ಯಕ್ಷರು,
ಹಾಸನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ