೧. ನೆನಪು
ಪ್ರತಿ ಬಾರಿ ಎಲ್ಲರೆದುರು
ಸೋತು ನೊಂದಿದೆ ಈ ಮನವು ಇಂದು
ಮನಸ್ಸಿಗೆ ಕಿವಿಗೊಡುವವರು ಬೇಕೆಂಬ ಬಯಕೆ ಸದಾನಂದ
ಚಿಂತಿಸಬೇಡ ಕಂದಮ್ಮ ಮಲಗು ನಾ ಇರುವೆ ಸದಾ ಎಂದು
ಹೇಳಿತು ಮರೆತ ನೆನಪು
ನಕ್ಷತ್ರದ ಬೆಳಕಲ್ಲಿ ತಾ ಬಂದು.
೨. ಪ್ರೀತಿ
ಕಣ್ಣು ಗುರುತಿಸಿದ ಪ್ರೀತಿ
ಮನಸ್ಸಿಗೆ ಪಯಣಿಸುವ ವೇಳೆ ಹೇಳಿತು
ಮೌನ ಮುರಿದು ಕೇಳಿ ಬಿಡಲ ಅವನಿಗೆ ?
ಜಗವ ಅರಿವಿಲ್ಲದ ಹುಚ್ಚು ಪ್ರೀತಿಯ ಮುಗ್ದಳು ಬೇಕಾ ?
ಅಥವಾ
ಅಪ್ಪನ ಕನಸ ಅರಿತು ಜಗವ ಗೆಲ್ಲುವ ಮಗಳು ಬೇಕಾ ?.
೩. ಆಸೆ
ಕಳೆದುಕೊಳ್ಳುವ ಭಯ ಕೊಟ್ಟವನಿಗಿಂತ
ಪಡೆದವನಿಗೆ ಹೆಚ್ಚು
ಕಳೆದು ಹೋದ ಮೇಲು
ಸಿಗುತ್ತೆಂಬ ಆಸೆ
ಇದ್ದವರಿಗೆ ಹೇಳುವರು ಹುಚ್ಚು.
೪. ಮನಸು
ಅರಿತು ಅರೆಯದ ಯುವಕರ ಮನಸು
ಸಾಮಾಜಿಕ ಜಾಲತಾಣಗಳಲ್ಲಿ ತೋರಿದೆ ಮುನಿಸು
ಇನ್ನಾದರೂ ಕನಸುಗಳ ಹಾದಿಗೆ ಗುರಿಇಟ್ಟು
ದೇಶದ ಬೆಳವಣಿಗೆಗೆ ಕೈಜೋಡಿಸಿ ಪಣತೊಟ್ಟು
೫. ಮುಪ್ಪು
ಮುಪ್ಪಿನಲ್ಲಿ ಅರಿವಾದ ಬದುಕಿನ ಸತ್ಯ
ತನ್ನಮಕ್ಕಳು ಬರುವರೆಂಬ ಆಸೆಯೂ ನಿತ್ಯ
ಕೊನೆವರೆಗೂ ನಾನಿರುವೆ ಹೇಳಿತು ನೆನಪೊಂದು
ಮಡಿಲಲಿ ಮಲಿಗಿ ಮರೆಯಾದ
ಕನಸೊಂದು.
- ಉನ್ನತ ಡಿ.ಆರ್, ತುಮಕೂರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ