ಸಾಗುತಿರಬೇಕು ಬಾಳ ಹಾದಿಯ ಪಯಣ
ನುಣುಚಿಕೊಳ್ಳಲು ಇರದು ಯಾವ ಕಾರಣ
ಯಾರಿರಲಿ ಇಲ್ಲದಿರಲಿ ನಿನ್ನ ಜೊತೆಯಲಿ
ಉರುಳಲೇ ಬೇಕು ಬದುಕ ಬಂಡಿಯ ಗಾಲಿ
ಇರುವ ಹಾದಿಯದು ಒಂದೇ ಬಾಳ ಪಯಣಕೆ
ಚಲಿಸಲೇಬೇಕು ಅವರವರ ಅನುಕೂಲಕೆ
ಜೀವಕ್ಕೊ ಜೀವನಕ್ಕೊ ಹೋರಾಡಲೇಬೇಕು
ಬದುಕ ಹೊತ್ತಿಗೆಯ ಪುಟ ತಿರುಗಿಸಲೇಬೇಕು
ಬರೆವಾತನೇ ಬಲ್ಲ ಬಾಳ ಪುಟದ ಲೆಕ್ಕವನು
ಬಾರದಿದ್ದರೂ ಕಲಿಯಲೇ ಬೇಕು ಈ ಗಣಿತವನು
ಅಂಜದೆ ಸಾಗುತಿರು ತಿರುವುಗಳೆಷ್ಟೇ ಇದ್ದರೂ
ಪಂಜಿನ ಧೈರ್ಯವಿರಲಿ ನೀ ಕತ್ತಲೆಯೊಳಗಿದ್ದರೂ
- ಮಧುಮಾಲತಿ ರುದ್ರೇಶ್, ಬೇಲೂರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ