ಶುಕ್ರವಾರ, ಮಾರ್ಚ್ 17, 2023

ಚಿತ್ತ ಶುದ್ದಿ (ಕವಿತೆ) - ಶಾರದ ದೇವರಾಜ್ ಎ, ಮಲ್ಲಾಪುರ.

ಮನ  ಶುದ್ಧಿ ಆಗದ ಹೊರತು
 ಮೈ  ಶುದ್ಧಿ ಆದರೇನು ಫಲ?
 ತೋರಿಕೆ ಭಕ್ತಿಯ ಮಾರ್ಗವಿದ್ದೆಡೆ
 ನಿಜ ಭಕ್ತಿಯ ಮಾರ್ಗವಿಲ್ಲದಿರಲೇನು ಫಲ?l

 ಜಳಕಕೊಲಿವನೇ? ಜಗದೀಶನು
 ಮನದ ಮಲಿನವ  ತೊಳೆಯಿರೆಂದನುl
 ಮಂದಿಗಳ  ಜರಿಯುತ ತುಳಿಯುತ ಹೀಯಾಳಿಸುತ
 ಜಗದೀಶನ ಸ್ಮರಿಸಲು,  ತಾನು  ಒಲಿವನೆl

 ನೋಡುವನಿವನು  ಭಕ್ತರ ಭಕುತಿಯ ಆಲಿಸುವನಿವನು ಮನದ ನಿರ್ಮಲತೆಯ ಕೆಣಕುವನು ಇವರ ಭಕ್ತಿಯ ನಿಷ್ಠೆಯ ಕೊಡುವನು ದೃಢ ಭಕ್ತಿಯ ಪರೀಕ್ಷೆಯl

 ಸಾಕಷ್ಟು ಒಡ್ಡುವನು ಭಕ್ತರ ಬದುಕಿಗೆ ನಿಲುಕಿದಷ್ಟು ನೀಡುವನು ಇಷ್ಟರ ಮನಸಿಗೆ ತೋಚಿದಷ್ಟು ತೊಳೆ ದು ,ತೋಳ್ಗಳಲಿ
ಆಲಂಗಿಸುವನು, ನಿಜಭಕ್ತರ ಬದುಕಿನಲಿl

 - ಶಾರದ ದೇವರಾಜ್ ಎ, ಮಲ್ಲಾಪುರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...