ಶುಕ್ರವಾರ, ಮಾರ್ಚ್ 17, 2023

ಹಣವಿಲ್ಲದಿರೆ ಮೊಗದಲಿ ಮುಗ್ಧತೆ ಮೂಡುವುದಯ್ಯ (ಗದ್ಯಗವಿತೆ) - ಬಸವರಾಜ್.ಎಚ್.ಹೊಗರನಾಳ.

ಹಣವೊಂದಿದ್ದರೆ ಜಗದೊಳಗ ನಿನ್ನನ್ನು ಎತ್ತಿ ಮೆರೆಸುವರಯ್ಯ
ಹಣವೊಂದಿದ್ದರೆ ಸಂಬಂಧಗಳೆಲ್ಲ ಮರಳಿ ಜನಿಸುವವಯ್ಯ
ಹಣವೊಂದಿದ್ದರೆ ನಿನ್ನನ್ನು ಜನರು ತಡೆಬಿಡದೆ ನಿನ್ನಿಂದೆ ಸುತ್ತುವರಯ್ಯ
ಹಣವಿಲ್ಲದಿರೆ ಮೊಗದಲಿ ಮುಗ್ಧತೆ ಮೂಡುವುದಯ್ಯ

ಹಣವೊಂದಿದ್ದರೆ ಸ್ಮಶಾನದಲ್ಲಿರುವ ಹೆಣವು ಎದ್ದು ಬರುವುದಯ್ಯ
ಹಣವೊಂದಿದ್ದರೆ ನೀರಿನ ಮೇಲೆ ಮನೆ ಕಟ್ಟಿ ವಾಸಿಸುವರಯ್ಯ
ಹಣವೊಂದಿದ್ದರೆ ಭೂಮಿ ಬಿಟ್ಟು ಬೇರೊಂದು ಗ್ರಹಕ್ಕೆ ಪ್ರಯಾಣ ಮಾಡುವವರಯ್ಯ
ಹಣವಿಲ್ಲದಿರೆ ಮೊಗದಲಿ ಮುಗ್ಧತೆ ಮೂಡುವುದಯ್ಯ

ಹಣವೊಂದಿದ್ದರೆ ಜಗತ್ತನ್ನೇ ತನ್ನ ಹತೋಟಿಗೆ ತೆಗೆದುಕೊಳ್ಳುವರಯ್ಯ
ಹಣವೊಂದಿದ್ದರೆ ಹಲವಾರು ಜನರ ಪ್ರಾಣ ತೆಗಿಯುವರಯ್ಯ
ಹಣವೊಂದಿದ್ದರೆ ಆಕಾಶದೇತ್ತರಕ್ಕೆ ಹಾರಿ ಹೋಗುವರಯ್ಯ
ಹಣವಿಲ್ಲದಿರೆ ಮೊಗದಲಿ ಮುಗ್ಧತೆ ಮೂಡುವುದಯ್ಯ

ಹಣವೊಂದಿದ್ದರೆ ನಮ್ಮಂತಯೇ ಮಾತನಾಡಿ ನಮ್ಮನ್ನ ಹೋಗಳುವರಯ್ಯ 
ಹಣವೊಂದಿದ್ದರೆ ಅಪರಿಚಿತರು ಕೂಡ ಪರಿಚಯಸ್ತಾರಾಗುವರಯ್ಯ
ಹಣವೊಂದಿದ್ದರೆ ಬಡ ಜನರನ್ನ ಕಾಲಕೆಳಗೆ ತುಳಿಯುವರಯ್ಯ
ಹಣವಿಲ್ಲದಿರೆ ಮೊಗದಲಿ ಮುಗ್ಧತೆ ಮೂಡುವುದಯ್ಯ

ಹಣವೊಂದಿದ್ದರೆ ಪ್ರೀತಿ, ಸ್ನೇಹ ಹೇಳದೆಯೇ ಹುಟ್ಟುವುದಯ್ಯ
ಹಣವೊಂದಿದ್ದರೆ ನಿನ್ನನ್ನು ಹಲವಾರು ಜನರು ಸಲೆಬ್ರೇಟಿಯಂತೆ ಕಾಣುವರಯ್ಯ
ಹಣದ ಮೋಹಕ್ಕೆ ಬಿದ್ದವರು ಹೆತ್ತವರನ್ನು ಅನಾಥ ಆಶ್ರಮಗಳಿಗೆ ಕಳಿಸುವವರಯ್ಯ
ಹಣವಿಲ್ಲದಿರೆ ಮೊಗದಲಿ ಮುಗ್ಧತೆ ಮೂಡುವುದಯ್ಯ.
- ಬಸವರಾಜ್.ಎಚ್.ಹೊಗರನಾಳ, ಪತ್ರಿಕೋದ್ಯಮ ವಿದ್ಯಾರ್ಥಿ ಧಾರವಾಡ 
ಮೊ.ನಂ:8951228607.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...