ಶುಕ್ರವಾರ, ಮಾರ್ಚ್ 17, 2023

ತೆಂಗಾಗಲಿ ಬಿಡಿ (ಕವಿತೆ) - ತುಳಸಿದಾಸ ಬಿ ಎಸ್.

ಇರಲಿ ಬಿಡಿ ಇದ್ದಂತೆ
ಕಾರಿರುಳ ಕಾಡಂತೆ
ಮೋರೆಯೊಳಗಿನ ಹಂದಿ
ನಾರುವಂತೆ

ಬರಲಿ ಬಿಡಿ ಬಂದಂತೆ
ನೆರೆಯೊಳಗಣ ಬೆಂಡಂತೆ
ಅರಿವ ಬಿಡಿ ಮುಖವಾಡವನು
ಪರಿ ಕಳಚಿದ ಹಾವಿನಂತೆ

ಮರೆಗೆ ಮಚ್ಚಲಿ ಬಿಡಿ
ಹರಡೊ ಗಂಧದಂತೆ
ನೇರಕ್ಕೆ ಕುದಿಯಲಿ ಬಿಡಿ
ಸುರಿಯುವ ಮಳೆಯಂತೆ

ಉರಿಯಲಿ ಬಿಡಿ ಉರಿದಂತೆ
ಮರ ಬೂದಿಯಾದಂತೆ
ಜರಿದು ಸಾಯಲಿ ಬಿಡಿ
ಹೊರಡುವ ಕರಿಯಂತೆ

ತಿರು ತಿರುಗಿ ಹಾವಿನಂತೆ
ಎಡೆ ಎತ್ತಿ ಬುಸುಗುಟ್ಟಲಿ ಬಿಡಿ
ಎತ್ತಿ ಎಸೆಯುವ ಬಿಡಿ
ಗರುಡನಂತೆ ಇಳೆಗೆ

ಗರಿಗರಿಯ ನೋಟಿನಂತೆ
ಚಲಾವಣೆಯಾಗುವ ಬಿಡಿ
ಮರಿಯಿಂದು ಮುಂದೆ
ತೆಂಗಾಗಲಿ ಬಿಡಿ.
- ತುಳಸಿದಾಸ ಬಿ ಎಸ್
ಸಹ ಶಿಕ್ಷಕರು 
ಬಾಲಕರ ಸರಕಾರಿ ಪ್ರೌಢ ಶಾಲೆ ಸಿಂಧನೂರು
ಮೊ.ಸಂ 9880114558.


2 ಕಾಮೆಂಟ್‌ಗಳು:

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...