ನಿನ್ನ ನಗುಮೊಗ ಮನಕೆ ನೆಮ್ಮದಿ
ಗುಣದಿ ಎಲ್ಲರ ಮನ ಸೆಳೆದೆ
ಎಂದೂ ಮರೆಯದ ಮಾಣಿಕ್ಯನಾದೆ
ಬೆಲೆಕಟ್ಟಲಾಗದ ರತ್ನವಾದೆ
ಬಾಲ್ಯದಲೇ ತೋರಿದೆ ನಟನಾ ಚಾತುರ್ಯ
ನಿನ್ನ ಮಾತುಗಳಲ್ಲಿತ್ತು ಅದೇನೋ ಮಾಧುರ್ಯ
ಗಂಧದಗುಡಿಯಲಿ ಅಜೇಯನಾದ ಮೌರ್ಯ
ಅಂಜಲೀಪುತ್ರನಾಗಿ ತೋರಿದೆ ರಣವಿಕ್ರಮ ಶೌರ್ಯ
ಮುತ್ತುರಾಜರಿಗೆ ಮುತ್ತಿನ ಕುವರನು
ತ್ರಿವಳಿಗಳಿಗೆ ಪ್ರೀತಿಪಾತ್ರನು
ಸರಳತೆಯ ಹಸನ್ಮುಖ ವಿನಮ್ರಭಾವ
ನುಡಿದಂತೆ ನಡೆದ ಮಹಾನುಭಾವ
ಕನ್ನಡಿಗರ ಹೆಮ್ಮೆಯ ಕುವರನಾಗಿ
ಆಕಾಶದಲ್ಲಿ ಬೆಳಗುವ ನಕ್ಷತ್ರವಾದೆ
ಎಲ್ಲರ ಬಾಳಿಗೆ ಸ್ಫೂರ್ತಿಯಾದೆ ನೀನು
ಭೂಮಿಗೆ ಬಂದು ಹೋದ ಭಗವಂತನಾದೆ
ಅನಾಥಾಶ್ರಮಗಳಿಗೆ ಅನ್ನದಾತನಾದೆ
ಮಕ್ಕಳಿಗೆ ವಿದ್ಯಾಪೋಷಕನಾದೆ
ಸೋತವರಿಗೆ ಸ್ಫೂರ್ತಿ ತುಂಬಿದೆ
ಗೋವುಗಳಿಗೆ ಆಶ್ರಯದಾತನಾದೆ
ವರುಷಗಳುರುಳಿದರೂ ಮಾಸದ ನಗುವಿದೆ
ಜನಮಾನಸದಲ್ಲಿ ಅಜರಾಮರನಾದೆ
ಜೊತೆಗಿರದ ಜೀವ ಎಂದಿಗಿಂತ ಜೀವಂತ
ನೇತ್ರದಾನದಿ ಬೆಳಕಾದ ಈ ಪುನೀತ
- ಆಶಾ ಎಲ್ ಎಸ್, ಶಿವಮೊಗ್ಗ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ