ಶುಕ್ರವಾರ, ಮಾರ್ಚ್ 17, 2023

ಯುಗಾದಿ ಅಂದು -ಇಂದು (ಕವಿತೆ) - ಶ್ರೀಮತಿ ರೇಖಾ ನಾಡಿಗೇರ.

ಯುಗಾದಿ ಹೊಸ ವರುಷ ಭಾರತೀಯರಿಗೆ ಪ್ರಕೃತಿಯ ಕೊಡುಗೆ/
ನವ ಪಣ೯ಗಳು ಪಲ್ಲವಿಸಿ , ಮಲ್ಲಿಗೆ ಘಮಘಮಿಸಿ ಪ್ರಕೃತಿ ತೊಡುವಳು ಹೊಸ ಉಡುಗೆ/

ತೆನೆ ತುಂಬಿ ಸೆಳೆವ ಮಾವು ಬೇವು -ಹೊಂಗೆಗಳು ಚೈತನ್ಯದ ಒಸಗೆ/
ಕೋಗಿಲೆಯ ಕುಹೂ ಕೂಜನದ ಮಧುರಾಲಾಪ ಕಿವಿಗಳಿಗೆ/

ನೋವು -ನಲಿವಿನ ಸಮ್ಮಿ‌ಶ್ರಣವೀ ಬದುಕೆಂಬ ಸಹಜ ಸಂದೇಶ/
ಬೇವು -ಬೆಲ್ಲ ಸವಿಯುವರು ಸಮನಾಗಿ ಸ್ವೀಕರಿಸಲೆನ್ನುವುದೇ ಉದ್ದೇಶ/

ವಿಜ್ಞಾನದ ಹಿಂದೋಡುತ್ತ ಕ್ರೌಯ೯ ಮೆರೆಯುತಿಹ ಮಾನವ/
ಇರುವಷ್ಟೇ ಗಿಡಬಳ್ಳಿಗಳಲ್ಲಿ ಚಿಗುರ ತರುವಳು ಪ್ರಕೃತಿ ಮರೆತು ತನ್ನ ನೋವು/

ಝಣ ಝಣ ಕಾಂಚಾಣದ ಹಿಂದೋಡದಿರು ಮನುಜ/
ನಿನ್ನಂತೇ ಇತರೆಲ್ಲ ಪ್ರಾಣಿ ಪಕ್ಷಿಗಳು ಪ್ರಕೃತಿಯ ಮಕ್ಕಳು ಅರಿ ಈ ಸತ್ಯ ಸಹಜ/

*ಜಲದ ಅಭಾವ, *ತಾಪಮಾನ ಏರಿಕೆ* ಎಂಬ ನೀನೇ ತೋಡಿಕೊಂಡ ಹಳ್ಳಗಳಲ್ಲಿ ನೀ ಬೀಳುತ್ತಿರುವೆ/
ಪ್ರಕೃತಿ ಮಾತೆ ನಾನು ಕ್ಷಮಿಸುತ್ತ ನಿನಗೆ  *ಯುಗಾದಿಯ* ಚಿತ್ರ ಬಿಡಿಸಿಹೆ/

ಓದು ಪುಟಗಳ ತೆರೆದು *ಯುಗಾದಿ* ಹಿಂದೆ ಹೇಗಿತ್ತೆಂದು/
ಕಣ್ತೆರೆದು ನೋಡಿ ಅವಲೋಕಿಸು ಇಂದೇನಾಗುತ್ತಿದೆ ಎಂದು/
- ಶ್ರೀಮತಿ ರೇಖಾ ನಾಡಿಗೇರ, ಹುಬ್ಬಳ್ಳಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...