ಶುಕ್ರವಾರ, ಮಾರ್ಚ್ 17, 2023

ಮುನಿಸೆತಕೆ ಮಡದಿ (ಕವಿತೆ) - ಶಿವಾ ಮದಭಾಂವಿ.

ಮುನಿಸು ತರವೇ ಮುದ್ದು ಒಡತಿ
ತವರು ಮನೆಗೆ  ಹೋಗಿ ಯಾಕ ಕುಳತಿ 
ನನಗೆ ಕ್ಷಣ ಕ್ಷಣವು ನಿನ್ನ ಚಿಂತಿ
ಬಿಡು ನೀ ಬಿಗುಮಾನದ ಭ್ರಾಂತಿ

ಕಣ್ಮುಂದೆ ಕನಸುಗಳ ಕಂತೆ
ಬಾರೆ ಮಾಡೋಣ ನನಸುಗಳ ಸಂತೆ
ನಿನ್ನ ಕರೆಗೆ ಕಾಯುತ ಕುಳಿತಿರುವೇ ಸತಿ 
ನಿನ್ನ ಧ್ವನಿ ಕೇಳದೆ ಕಿವಿಗಳಿಗಿಲ್ಲ ಶಾಂತಿ
 

ಕನಸಲ್ಲೂ ಕಂಡಿರಲಿಲ್ಲ ನಾ ನಿನ್ನಲ್ಲಿ ಇಂತಹ ಕ್ರಾಂತಿ 
ನನಗಿದು ಪಾಠವೇ ಸರಿ ಇನ್ನಾದರೂ ಬಿಡು ನೀ ಭ್ರಾಂತಿ
ಕೇಳೆನ್ನ ಒಡತಿ ಬಾಳೆ0ಬ ನೊಗಕೆ ನಾವಾಗೋಣ ಜೋಡೆತ್ತು
ಹಾಕೋಣ ಬಾ ನೂರಾರು ಜನ್ಮಗಳ ಉದ್ದಗಲಗಳ ಸುತ್ತು 

   - ಶಿವಾ ಮದಭಾಂವಿ, ಗೋಕಾಕ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...