ನವಮಾಸಗಳ ನೋವು ಅಮ್ಮನದಾದರೂ
ಒಳಗೊಳಗೆ ಅತ್ತಿದ್ದು ಅಪ್ಪ...
ತೊದಲ ನುಡಿ ಅಮ್ಮ ಎಂದರೂ
ಬಿಗಿದಿಟ್ಟ ಉಸಿರು ಬಿಟ್ಟಿದ್ದು ಅಪ್ಪ...
ಕೈ ತುತ್ತು ಉಣಿಸಿದ್ದು ಅಮ್ಮನಾದರೂ
ಬೆವರಿಳಿಸಿ ಗಳಿಸಿದ್ದು ಅಪ್ಪ...
ಕೇಳಿದೆಲ್ಲಾ ಕೊಟ್ಟಿದ್ದು ಅಮ್ಮನಾದರೂ
ಹಿಂದೆ ಕಾಣದ ಕೆಸರು ಕೈಗಳು ಅಪ್ಪ...
ಅಂಗಳದಿ ಆಡಿ ಬೆಳೆಸಿದ್ದು ಅಮ್ಮನಾದರೂ
ಹೆಗಲ ಮೇಲೆ ಹೊತ್ತು ಜಗ ತೋರಿದ್ದು ಅಪ್ಪ....
ನೋವು ಹೇಳಿ ಮುಂದೆ ಅತ್ತಿದ್ದು ಅಮ್ಮನಾದರೂ
ಮುಸುಕಿನಲ್ಲಿ ಕಂಬನಿ ಸುರಿಸಿದ್ದು ಅಪ್ಪ...
ತಾಯಿಯೇ ಮೊದಲ ಗುರುವಾದರೂ
ಹೆಜ್ಜೆಗೆ ದಾರಿಯಾದದ್ದು ಅಪ್ಪ...
ಸುವ್ವಾಲಿ ಹಾಡಿ ಮಲಗಿಸಿದ್ದು ಅಮ್ಮನಾದರೂ
ಪ್ರೀತಿ ವ್ಯಕ್ತಪಡಿಸದೆ ಮೂಕನಿದ್ದದ್ದು ಅಪ್ಪ...
ಪ್ರೀತ್ಸೋ ಕಣ್ಣು ಅಮ್ಮನದಾದರೂ
ಆ ಕಣ್ಣು ಕಾಪಾಡುವ ರೆಪ್ಪೆ ಅಪ್ಪ...
ತಾಯಿಯನ್ನು ದೇವರೆಂದರೂ
ಆ ದೇವರಿಗೆ ಒಡೆಯನಾದವನು ಅಪ್ಪ...
- ಕಾಜಲ ಎ. ಹೆಗಡೆ, ನವಲಿಹಾಳ (ಚಿಕ್ಕೋಡಿ).
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ