ವೃದ್ಧ ದಂಪತಿ ಕುಳಿತ ಟ್ರಾಕ್ಟರದು ತೋರಿದೆ ಗಿರಿಯಂತೆ/
ಶಿವ -ಪಾವ೯ತಿಯರೇ ಜೊತೆಯಾಗಿ ಕಂಗೊಳಿಸುವಂತೆ/
ವಿವಾಹ ಧಮ೯ ಸಂಪನ್ನಗೊಳಿಸಿ ಬಾಳ ಸಂಜೆಯಲಿಹರು ಇವ೯ರೂ/
ದುಡಿಮೆಯೇ ದೈವ ಎನುವ ಛಲದವರು/
ಶರೀರ ಸಹಕರಿಸುವ ತನಕ ದುಡಿದೇ ಉಣ್ಣುವ ತವಕ/
ಹಾಳು -ಮೂಳು ವಿಚಾರಕ್ಕೆಳಿಸದೇ ಭೂತಾಯಿ ಸೇವೆ ಗೈವ ಸೇವಕ/
ಆಡಂಬರವಿಲ್ಲದ ಸರಳ ಜೀವನ ಶೈಲಿ/
ಇದ್ದಷ್ಟೂ ಸಾಲದು ಇನ್ನೂ ಬೇಕೆನುವವರು ನೋಡಿ ಕಲಿಯುವಂತಾಗಲಿ/
ಶ್ರೀಮಂತ ಕಾಯಿಲೆಗಳಿಲ್ಲದ ಆರೋಗ್ಯ ಸಿರಿತನ/
ದುಡಿದುಣ್ಣುವ ಸ್ವಾಭಿಮಾನೀ ಜೀವಕ್ಕೆಲ್ಲಿದೆ? ಬಡತನ/
ಒಡಲ ಕುಡಿಯ ಕಳೆದುಕೊಂಡರೂ ಶಿವನಿಚ್ಛೆ ಎಂದ ಹಿರಿ ಮನ/
ಇದ್ದರೂ ಸಂಕಟ, ಮೊಗದ ನಿರಿಗೆಗಳಲ್ಲಿ ತೋರದ ನಿಲಿ೯ಪ್ತತನ/
ಕಲಿತವರಂತೆ ಅಹಂ ಗೆ ಇವರ ಬಳಿ ಇಲ್ಲ ಜಾಗ/
ಅನುಸರಿಸಿಕೊಂಡು ಬಾಗಿ ಸಾಗುವ ಜಾಣ್ಮೆಯೇ ಬದುಕಿನ ಭಾಗ/
ಸಿಕ್ಕರೂ ಸಿಗಬಹುದು ಹರನೊಲುಮೆ ಜೊತೆಯಾಗೇ ಅಂತಿಮ ಯಾತ್ರೆಯ ಮುಗಿಸುವ ಯೋಗ/
- ಶ್ರೀಮತಿ ರೇಖಾ ನಾಡಿಗೇರ, ಹುಬ್ಬಳ್ಳಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ