ಹುಟ್ಟು ಸಾವು ಬದುಕಿನೆರಡು ಮುಖಗಳು
ಎಲ್ಲರೂ ದೇವನಾಡಿಸುವ ಪಾತ್ರಧಾರಿಗಳು
ಬದುಕ ನಾಲ್ಕು ದಿನದ ಪಯಣದಲಿ
ನಸು ನಗುತ ಸಾಗೋಣ ಜೊತೆಯಲಿ
ಸ್ವಾರ್ಥದ ಕೂಪದಲಿ ಬೇಯದಿರಲಿ ಮನ
ದೇವನೊಲಿಯುವಂತೆ ಸಾಗಿಸೋಣ ಜೀವನ
ಹುಟ್ಟಿನ ಖಚಿತದಷ್ಟೇ ಸಾವು ಅನಿವಾರ್ಯ
ಮಾಡೋಣ ಮರಣದಾಚೆಗೂ ಹೆಸರುಳಿಯುವ ಕಾರ್ಯ
ಬದುಕಪುಟದಲಿ ಜನನ ಮರಣಗಳು
ದೇವ ಬರೆದ ಅಳಿಸಲಾಗದ ಅಕ್ಷರಗಳು
ದಕ್ಕಿದಷ್ಟೇ ಆಸ್ವಾದಿಸೋಣ ಬಾಳ ಬುತ್ತಿಯನು
ಜನನದಷ್ಟೇ ಸಾರ್ಥಕ್ಯಗೊಳಿಸೋಣ ಮರಣವನು
ಮಧುಮಾಲತಿ ರುದ್ರೇಶ್ ಬೇಲೂರು ✍️✍️