ಶನಿವಾರ, ಸೆಪ್ಟೆಂಬರ್ 14, 2024

ಮನಸ್ಸು ಮರಗಕುಂತೈತಿ ...

ಮನಸ್ಸು ಮರಗಕುಂತೈತಿ....

ಮನಸ್ಸು ಎಲ್ಲೋ ಹೊಂಟೈತಿ 
ನನ್ನ ಹಿಡಿತಕ್ಕ ಸಿಗದಂಗಾಗೈತಿ
ದೇಹ - ಮನಸ್ಸು ಹೊಂದಿಕೊಂಳ್ಳದಂಗಾಗೈತಿ 
ಯಾಕೋ ಗೊತ್ತಿಲ್ಲ ಮನಸ್ಸು ನನ್ನನ್ನೇ ಮರೆಸಾಕತೈತಿ...

ಎಲ್ಲಿಗೋಂಟೈತೊ ಮನಸ್ಸು ತಿಳಿದಂಗಾಗೈತಿ 
ತಿಳಿದವರ ಹಿಂದೆ ತಿಳುವಳಿಕೆಗಾಗಿ ಹೊಂಟೈತಿ 
ಏನಾದರೂ ತಿಳಿದರ ಇನ್ನೊಬ್ಬರಿಗೂ ತಿಳಿಸು ಅಂತೈತಿ 
ಯಾಕೋ ಗೊತ್ತಿಲ್ಲ ಮನಸ್ಸು ನನ್ನನ್ನೇ ಮರೆಸಾಕತೈತಿ....

ನನ್ನ ಮನಸ್ಸು ಎಲ್ಲರೂ ಒಂದೇತರ ಎಂದು ತಿಳಿದೈತಿ 
ಮೋಸ ಮಾಡುವವರು ಯಾರೆಂದು ತಿಳಿದಂಗಾಗೈತಿ
ಮನಸ್ಸು ಇನ್ನೊಬ್ಬರ ಕೈಯಲ್ಲಿ ಸಿಕ್ಕಾಕಿಕೊಂಡಂಗಾಗೈತಿ 
ಯಾಕೋ ಗೊತ್ತಿಲ್ಲ ಮನಸ್ಸು ನನ್ನನ್ನೇ ಮರೆಸಾಕತೈತಿ....

ಯಾಕೋ ಗೊತ್ತಿಲ್ಲ ಮನಸ್ಸು ಬೇಜಾರಾಗಿ ಹೊಂಟೈತಿ
ಇನ್ನೊಬ್ಬರ ಕೆಟ್ಟ ದೃಷ್ಟಿ ನನ್ನ ಮೇಲೆ ಬಿದ್ದಂಗಾಗೈತಿ 
ಮನಸ್ಸು ಮರುಗಿ ಮೂಲೆಯಲ್ಲಿ ಕುಳಿತಂಗಾಗೈತಿ 
ಯಾಕೋ ಗೊತ್ತಿಲ್ಲ ಮನಸ್ಸು ನನ್ನನ್ನೇ ಮರೆಸಾಕತೈತಿ....

ಮನಸ್ಸು ಮರಗಕುಂತೈತಿ
ಬಿಟ್ಟೋದವರನ್ನ ಮತ್ತೊಮ್ಮೆ ಕರೆತರು ಅಂತೈತಿ 
ಕನಸುಗಳನ್ನ ಕೈಕಟ್ಟಿ ಕುಂದ್ರಿಸೈತಿ 
ಯಾಕೋ ಗೊತ್ತಿಲ್ಲ ಮನಸ್ಸು ನನ್ನನ್ನೇ ಮರೆಸಾಕತೈತಿ...
ರಚನೆ:ಬಸವರಾಜ್.ಎಚ್.ಹೊಗರನಾಳ ಯುವ ಕವಿಗಳು ಹಾಗೂ ಪತ್ರಕರ್ತರು ಧಾರವಾಡ 
ಮೊ.ನಂ:- 8951228607

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...