ಅಳುವೇ, ನಗುವೇ, ನಲಿವೇ
ನೀ ಒಲಿವತನಕ
ನಿನ್ನ ಪ್ರೇಮದ ಬೆಂಕಿಯ
ಜ್ವಾಲೆಯಲ್ಲಿ ಬೇಯಿವೆ,,,
ಕಳೆವೆ, ಕೊಳೆವೆ, ನರಳುವೆ
ನನ್ನ ಕಣಕಣದಲ್ಲೂ
ನಿನ್ನ ಪ್ರೀತಿಯ ಪಡೆವೆ,
ಕುಣಿವೆ ನೀ ಸನಿಹ ಬರಲು
ನನ್ನ ಸ್ವರ್ಗ ದೇವತೆ
ಈ ನಿಸರ್ಗದಲ್ಲಿ ಬೆರೆವೆ,,
ಅರಿವೆ, ಹಾರುವೆ, ತೇಲುವೆ
ನಿನ್ನ ಪ್ರೇಮದ ಒಲವಲಿ ನುರಿವೆ
ಈ ಜಗವನೇ ಮರೆವೇ
ನಿನ್ನ ನೆನಪಲಿ ನಾ
ಉಳಿವೆ, ಹುರಿವೆ,,,,
ಪ್ರಣಯವೆಂಬ ಹೊಣೆಯ ನಾ
ಯಾರ ಮೇಲೆ ಹೊರಿಸಲಿ,
ಪ್ರೇಮದ ಪಯಣವ
ನಾ ನಿನ್ನತ್ತ ತರುತಲಿ
ನೀ ನೆತ್ತಾ ತಿರುಗಿರುವೆ,,,
ಸೊರಗಿದರೂ, ಬಳಲಿದರೂ
ನಿನ್ನ ಬಳಿಗೆಯೇ
ಬರುವೆ ನಾ ಬರುವೆ
ನನ್ನಲ್ಲೇ ನೀ ಇರುವೆ,,,
ಮುದ್ದಿನ ಮಂದಾಕಿನಿ
ಮದ್ದಿನ್ ರೂಪನಿ
ನನ್ ಹುಣ್ಮೆ ಬೆಲ್ದಿಂಗ್ಳೂ
ನೀ
ನನ್ ಹುಣ್ಮೆ ಬೆಲ್ದಿಂಗ್ಳೂ ನೀ.......
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ