ಬದುಕಬಹುದೇ ಭಾವ ತೊರೆದು..
ಜೀವವಿರುವ ಪ್ರತಿಯೊಂದು
ಜೀವಿಗೂ, ಎದೆಯಲೊಂದು
ಭಾವಬಿಂದು, ಒಮ್ಮೊಮ್ಮೆ
ನಿರ್ಜಿವವು ಸುರಿಸುವುದು ಕಣ್ಣಬಿಂದು...
ಹರಿವ ನದಿಗೂ , ನಿಂತ ಕಡಲಿಗೂ
ಭಾವ ಒಂದೆ ಬೆರೆಯುವುದು,
ಸುಳಿವ ಗಾಳಿಗೂ,ನಗುವ ತಳಿರಿಗೂ
ಭಾವ ಒಂದೆ ಸೋಕುವುದು...
ಕತ್ತಲೆಯ ಕನಸಿಗೂ, ನಿತ್ಯದ ಬದುಕಿಗೂ,
ಭಾವ ಒಂದೆ ನೆಮ್ಮದಿಯ ಬೆದಕುವುದು,
ಮನಸಿಗೂ ಮಸಣಕೂ ಭಾವ ಒಂದೆ,
ಜೀವಾತ್ಮಗಳ ಬೆರೆಸುವುದು...
ನಿತ್ಯ ಜೀವ ಹೊತ್ತ ನಾನು
ಬದುಕಬಹುದೇ ಭಾವ ತೊರೆದು,
ಮಿತ್ಯದ ಬದುಕು ಸತ್ತ ಮೇಲೇಯೂ
ಬದುಕುವುದೇ ಭಾವನೆಗಳ ಸುರಿದು...
ಬಿ ಎಂ ಮಹಾಂತೇಶ್
ಕೂಡ್ಲಿಗಿ, ವಿಜಯನಗರ.ಜಿ.
9731418615
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ