ಅಭಯಹಸ್ತದಾಯಿನಿ
ಆದಿಅಂಗಳ ಪರಮೇಶ್ವರಿ
ಸರ್ವಶಕ್ತಿದಾಯಿನಿ ಸಕಲ ಪಾಪ ನಿವಾರಿಣಿ
ಬೇಡಿ ಬಂದವರ ಭಾಗ್ಯದಾಯಿನಿ ಭುವನೇಶ್ವರಿ
ಶಾಪ ವಿಮೋಚಿನಿ ಸಕಲ ವರಪ್ರದಾಯಿನಿ
ಕಾತ್ಯಾಯಿನಿದೇವಿ ಕಷ್ಟಗಳ ಕರಗಿಸು
ನಿನ್ನ ಬೇಡಿ ಬಂದವರ ಕಣ್ಣೀರ ಒರೆಸು
ನಿನ್ನ ನಂಬಿದ ಭಕ್ತರ ಸನ್ಮಾರ್ಗದಿ ನಡೆಸು
ಸಕಲ ಲೋಕದ ಒಡತಿ
ಸರ್ವದೋಷ ನಿವಾರಿಸು
ಭಕ್ತರ ರಕ್ಷಿಸುವ ನೀ ಸರ್ವಶಕ್ತಿ
ಬಯಕೆಯ ಆಸರೆಗೆ ನೀನೆ ಮುಕ್ತಿ
ನಿನ್ನ ಒಲಿಸುವ ಮಾರ್ಗವೊಂದೇ ಭಕ್ತಿ
ತಾಯೇ ನಿನ್ನ ಸೇರುವ ಮಾರ್ಗ ತೋರಲಿ ಗೋವಿಂದಣ್ಣನೇ ಸರಿಯಾದ ವ್ಯಕ್ತಿ
ಆದಿ ಅಂಗಳ ಪರಮೇಶ್ವರಿ ಸನ್ನಿಧಾನ (ವಾಲೆತೋಪು ಚನ್ನಪಟ್ಟಣ)
ರಚನೆ : ಸಿದ್ದು ವಾಸುದೇವ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ