ಶನಿವಾರ, ಜೂನ್ 7, 2025

ವಿಶೇಷ ಲೇಖನ...

ವಿಶೇಷ ಲೇಖನ

ವಿಷಯ : ವ್ಯಕ್ತಿ ಪರಿಚಯ 
ಶೀರ್ಷಿಕೆ : ನನ್ನ ದೇವತೆ
ವ್ಯಕ್ತಿ : ಅಮ್ಮ (ಹೆಸರು ರತ್ಮಮ್ಮ )
   
ನನ್ನ ಅಮ್ಮ ನನಗೆ ತುಂಬಾ ಆತ್ಮೀಯ ವ್ಯಕ್ತಿ.
ನನಗೆ ಮಾತ್ರ ಅಲ್ಲ ಬಹುತೇಕ ಎಲ್ಲರಿಗೂ ಹೆಚ್ಚು ಆತ್ಮೀಯ ಆಗಿರುತ್ತಾರೆ.
ನಾನು ಭೂಮಿಗೆ ಬರುವ ಮುನ್ನವೇ ಅವಳೊಂದಿಗೆ ಆತ್ಮೀಯತೆ ಬೆಸೆದಿದೆ.
ನನ್ನ ಅಮ್ಮ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಚೋಕನಹಳ್ಳಿ ಎಂಬ ಪುಟ್ಟಹಳ್ಳಿಯಲ್ಲಿ ಎಂಟು ಮಕ್ಕಳಲ್ಲಿ ಆರನೇಯವರಾಗಿ ಜನಿಸಿದ್ದಾರೆ.
ನನ್ನ ಅಮ್ಮ ಎಂಟನೇ ತರಗತಿ ಮಾತ್ರ ಓದಿರುವುದು. ಆದರೂ ಪ್ರತಿಭಾವಂತೆ.
ರಂಗುರಂಗಿನ ಚಿತ್ತಾರದ ರಂಗೋಲಿ ಬಿಡಿಸುತ್ತಾಳೆ. ಹಬ್ಬ, ಮದುವೆ ಸಮಾರಂಭದಲ್ಲಿ ಸಕ್ರಿಯವಾಗಿ ಹಾಡುತ್ತಾರೆ.
ನಾನು ನನ್ನ ಅಮ್ಮನಿಗೆ ಚಕ್ಕುಲಿ ಚತುರೆ ಅಂತ ತಮಾಷೆ ಮಾಡುವೆ. ನನ್ನ ಅಮ್ಮ ಮಾಡುವ ಚಕ್ಕುಲಿ ಅಂದ್ರೆ ಎಲ್ಲರಿಗೂ ಪ್ರಿಯ. ಬೇಲೂರ್ ತಾಲೂಕಿನ ನಾರಾಯಣಪುರ ಗ್ರಾಮದ ಲೋಕೇಶರೊಂದಿಗೆ (ಅಂದ್ರೆ ನಮ್ಮ ಅಪ್ಪ )ಮದುವೆ ಆಗುತ್ತದೆ.
ನನ್ನ ಅಮ್ಮ ಅತ್ತಿಗೆ ನಾದಿನಿ ಒರಗಿಗಿತ್ತಿ ಯಾವ ಸಂಬಂದಿಕರೊಡನೆ ಒಮ್ಮೆಯು ಜಗಳ ಮಾಡಿಕೊಂಡಿಲ್ಲ. ಎಲ್ಲರನ್ನು ಬೇದವಿಲ್ಲದೆ ಒಂದೇ ರೀತಿ ಕಾಣುತ್ತಾರೆ. ಊರಿನ ಮತ್ತು ಸಂಬಂಧಿಕರ ಮದುವೆ ಸಮಾರಂಭದಲ್ಲಿ ಶಾಸ್ತ್ರ ಮಾಡುವುವರಲ್ಲಿ ನಿಪುಣೆ.ನನ್ನ ಅಪ್ಪನಿಗೆ ಅಮ್ಮನ ಮೇಲೆ ತುಂಬಾ ಪ್ರೀತಿ, ಆದ್ರೆ ಅವರು ಹೇಳಿದ್ದು ಕೇಳದಿದ್ದರೆ ಸ್ವಲ್ಪ ರೇಗಿ ಹುಸಿ ಮುನಿಸಿಕೊಳ್ಳುತ್ತಿದ್ದರು. ಆದ್ರೂ ನಮ್ಮ ಅಮ್ಮ ತಕ್ಷಣ ಪ್ರತ್ಯುತ್ತರ ಕೊಟ್ಟರು, ಸ್ವಲ್ಪ ಸಮಯದ ಬಳಿಕ ಅವರೇ ಮಾತನಾಡಿಸಿ ಜೊತೆಯಲ್ಲಿ ಊಟ ಮಾಡಿ ರಾಜಿ ಆಗುತ್ತಿದ್ದರು.
   ಸ್ವಾಭಿಮಾನದ ಪ್ರತೀಕ ಒಂದು ಹೊತ್ತು ಉಪವಾಸ ಇದ್ದರು ಯಾರನ್ನು ಕೇಳಲ್ಲ. ಆದರೆ ಬೇರೆಯವರಿಗೆ ಕೊಡುವುದೆಂದರೆ ತುಂಬಾ ಖುಷಿ. ಅತ್ತೆ ಸಿದ್ದಮ್ಮನನ್ನು ಜೊತೆಯಲ್ಲಿಟ್ಟುಕೊಂಡು ಜೋಪಾನ ಮಾಡಿದ್ದಾರೆ.
ಕಣ್ಣು ಕಾಣದ ಮೈದುನ ಶಾಂತಪ್ಪರನ್ನು ತನ್ನ ಸ್ವಂತ ಸಹೋದರನಂತೆ ನೋಡಿಕೊಳ್ಳುತ್ತಿದ್ದಾರೆ.
 ಇನ್ನೂ ಬೀಗರು ನನ್ನ ಅತ್ತೆಯೊಂದಿಗೆ ಗೆಳತಿಯಂತೆ ಬೆರೆಯುತ್ತಾರೆ. ಮೊಮ್ಮಕ್ಕಳಿಗೂ ಅವರಿಗೂ, ಅವಿನಾಭಾವ ಸಂಬಂಧ. 
ಎಲ್ಲರೊಂದಿಗೆ ಹೊಂದಿಕೊಳ್ಳುವ ಗುಣ, ಧೈರ್ಯ,ಸಹಕಾರ ಗುಣ ಅವರನ್ನು ನೋಡಿ ಕಲಿತಿರುವೆ. ಅಮ್ಮ ಆಗಿನ ಕಾಲದವರಾದರೂ ಎಲ್ಲವನ್ನು ವೈಚಾರಿಕವಾಗಿ 
ಆಲೋಚಿಸುತ್ತಾರೆ.ಉದಾಹರಣೆ: ರಾಹು ಕಾಲ, ಗುಳಿ ಕಾಲ ಯಾವುದನ್ನು ಲೆಕ್ಕ ಹಾಕುವುದಿಲ್ಲ. )

 ಅಪರಿಚಿತರನ್ನು ಬೇಗ ಪರಿಚಯ ಮಾಡಿಕೊಳ್ಳುತ್ತಾರೆ. ಎಲ್ಲರನ್ನು ಸಮಾನವಾಗಿ ಕಾಣುತ್ತಾರೆ, ಆತ್ಮೀಯವಾಗಿ ಬೆರೆಯುತ್ತಾರೆ. ಅಮ್ಮ ಹೆಚ್ಚು ಓದಿಲ್ಲದಿದ್ದರು ಒಳಗೆ ಹೊರಗೆ ದಣಿವರಿಯದೆ ದುಡಿದು ನನಗೆ ಉನ್ನತ ವಿದ್ಯಭ್ಯಾಸ ಕೊಡಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಉತ್ತಮ ಸಂಸ್ಕಾರ ಬಿತ್ತಿ ಬೆಳೆಸಿದ್ದಾರೆ.ಅಮ್ಮನ ಬಗ್ಗೆ ಎಷ್ಟು ಬರೆದರು ಮುಗಿಯುವುದಿಲ್ಲ. ಇವರ ಮಗಳಾಗಿ ಹುಟ್ಟಿರುವುದು ನನ್ನ ಪುಣ್ಯ.

✍️ಭವ್ಯ ಸುಧಾಕರ ಜಗಮನೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...