ನೆಲದೊಡಲ ರೂಪವಿದು
ಕೆಂಪರಿವೆ ತೊಟ್ಟಿಲು
ಆಕಾಶಕೆ ಹಮ್ಮುಗೆಯ
ಹೆಣೆಯುತಿವೆ ಬೆರಳು
ಮನೆ ತುಂಬ ಬಿಸಿಹಬೆ
ಮಂಜು ಮೆತ್ತಿದ ಗಿರಿ
ಪರಿಮಳವು ಎಲ್ಲೆಲ್ಲು
ಗಂಧ ಮೆತ್ತಿದ ಮೈಯಿ
ಹಿಡಿದ ಬೆರಳ ಪ್ರೀತಿಗೆ
ಹಸಿರಾಯಿತು ಕಣ್ಣಿ
ಕೆನ್ನೆ ಮೇಲಣ ನಗು
ಅಂಗೈ ಬೆನ್ನಲಿ ಕುಳಿ
ದೇವನೇ ಪವಡಿಸಿದಂತೆ
ಮಗು ಮಲಗುವ ಚೆಂದ
ತೂಗಿ ತೂಗಿ ನಮಗೇ ಜೋಂಪು
ನಿದಿರೆಗೆ ಜಾರಿದಂತೆ ಕಂದ
~ ಅರಬಗಟ್ಟೆ ಅಣ್ಣಪ್ಪ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ