ಬುಧವಾರ, ಅಕ್ಟೋಬರ್ 15, 2025

ಗುರು (ಕವಿತೆ) - ಹೆಚ್. ಎಸ್. ನಿಜಗುಣ.

ಜ್ಞಾನದ ದಿಗಂತದ ಬೆಳಕನು ತೋರುವ
ಗುರುವೇ ದಾರಿ ದೀವಿಗೆ;

ನೀತಿಸಂಹಿತೆಯ ಬೋಧನೆ ಮಾಡುವ
ಗುರುವೇ;ಧರ್ಮ ಸರ್ವರಿಗೆ 

ಅಜ್ಞಾನದಿಂದಲೇ ಅಕ್ಷರ ಕಲಿಸುವ
ಗುರುವೇ ಜ್ಞಾನಾರ್ಜಕನಿಗೆ;

ಮಾನವ ಕುಲಕ್ಕೆ ಮೌಲ್ಯ ಬೋಧಿಸುವ
ಗುರುವೇ ಗತಿಯ ಅರಿವಿಗೆ;

ಶ್ರದ್ಧೆಯ ತೋರುತ ಸತ್ಯದ ಸಾರುವ
ಗುರುವೇ ಹಿರಿಯ ಜನತೆಗೆ;

ವಿದ್ಯೆಯ ಕಲಿಸುವ ಬುದ್ಧಿಯ ಹೇರುವ
ಗುರುವೇ ಶೀಲದ ಶಾಲೆಗೆ;

ಚರಿತ್ರೆಯ ಕಲಿಸಿ  ಸಂಸ್ಕೃತಿ ಬೆಳೆಸುವ
ಗುರುವೇ ಪೂಜ್ಯ ಸಕಲರಿಗೆ;

ಶೀಲ ಸಂಸ್ಕಾರದ ಮಹಿಮೆಯ ಅರಿಹುವ
ಗುರುವೇ ಅನನ್ಯ ಮಾಣಿಕ್ಯ.


- ಹೆಚ್. ಎಸ್. ನಿಜಗುಣ.
ಹುಲ್ಲೇಕೆರೆ.- ತಿಪಟೂರು, ಉಪ ಪ್ರಾಂಶುಪಾಲರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...