ಸೋಮವಾರ, ಸೆಪ್ಟೆಂಬರ್ 20, 2021

ನಾನೂ ಕಾರಣ (ಕವಿತೆ) - ಶ್ರೀ ಸೂರ್ಯಕಾಂತ ಕಾಂಬಳೆ.

ನಾನೂ ಕಾರಣ

ಎಲೆ ಹೆಣ್ಣೆ ನಿನ್ನಂದಕೆ ನಾನು... ಕಾರಣ
ನಿನ್ನಿಂದ ನಿನ್ನಂದ ಹೆಚ್ಚುತ್ತಿದೆ ಎನ್ನುವುದು ನಿನ್ನ ಭ್ರಮೆ
ತಲೆಯನ್ನು ಹಿಡಿದು ನಿನ್ನ ಪಾದದವರೆಗು ನಾ ಕಾರಣ
ಕೇಳು ನೀ ಅದೇನೆಂದು ?

ನಿನ್ನ ತಲೆಯ ಅಂದಕೆ ಗುಲಾಬಿ ಮಲ್ಲಿಗೆ ಕಾರಣ
ಹಣೆಯ ಅಂದಕೆ ಕುಂಕುಮ ಕಾರಣ
ಕಿವಿಯ ಅಂದಕೆ ಓಲೆಗಳು ಕಾರಣ
ಮೂಗಿನ ಅಂದಕೆ ಮೂಗುತಿ ಕಾರಣ

ನಿನ್ನ ಕೈಗಳ ಅಂದಕೆ ಬಳೆಗಳು ಕಾರಣ
ನಿನ್ನ ಕೈಯಲ್ಲಿರುವ ಮೊಬೈಲ್ ಕೂಡ ನಿನ್ನಂದಕೆ ಕಾರಣ
ನಿನ್ನಂದಕೆ ನಿನ್ನ ಉಡುಪುಗಳು ಕಾರಣ

ನಿನ್ನ ಪಾದಗಳ ಅಂದಕೆ ಕಾಲುಂಗುರ ಕಾರಣ
ಪಾದದ ಕೆಳಗಿರುವ ಚಪ್ಪಲಿಗಳು ನಿನ್ನಂದಕೆ ಕಾರಣ
ಎಲೆ ಹೆಣ್ಣೆ ನಿನ್ನಿಂದ ನಿನ್ನಂದ ಹೆಚ್ಚುತ್ತಿಲ್ಲ 
ನಮ್ಮಿಂದ ನಿನ್ನಂದ ಹೆಚ್ಚುತ್ತಿದೆ 
                     - ಸೂರ್ಯಕಾಂತ ಕಾಂಬಳೆ


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಬಲೂನು (ಕವಿತೆ) - ಶ್ರೀ ಇಂಗಳಗಿ ದಾವಲಮಲೀಕ.

ಬಲೂನು

ಹರಕು ಗುಡಿಸಲಲ್ಲಿ ಅರಳಿದ ಹೂ ನಾನು
ಅಪ್ಪ ಗೋಡೆಯ ಮೇಲೆ ನೇತಾಡುತ್ತಿದ್ದಾನೆ
ಅಮ್ಮ ತುರುಬು ಕಟ್ಟಿ ಮನೆಯ ಮುಂದೆ
ತಳಿ ಹಾಕುತ್ತಿದ್ದಾಳೆ ಅಪ್ಪನಿಲ್ಲ ಅಮ್ಮನಿದ್ದಾಳೆ

ಯಾರೋ ಬರುವರು ಯಾರೋ ಹೋಗುವರು
ಅವರು ಬಂದಾಗ ಅಮ್ಮ ದುಡ್ಡು ಕೊಡುವಳು
ನಾನು ಅಂಗಡಿಗೆ ಹೋಗಿ ಬಲೂನು ತರಲು
ಅವರು ಒಳಗೆ ಹೋಗುವರು ಯಾರವರು?

ತಲೆ ನೇವರಿಸುವರು ಮತ್ತೆ ದುಡ್ಡು ಕೊಡುವರು
ಅಮ್ಮ ಒಳಗಿನಿಂದ ಬಟ್ಟೆ ಸರಿಮಾಡಿಕೊಂಡು
ನನ್ನ ನೋಡಿ ನಗುವಳು  ನಕ್ಕೆ ಸುಮ್ಮನಾದಳು
ಅವರು ಹೋದರು ಸನ್ನೆ ಮಾಡಿದರು ಅಮ್ಮನಿಗೆ

ಅಂಗಡಿಯಾತನಿಗೆ ದುಡ್ಡು ಕೊಟ್ಟೆ ಅವನು ಒಂದು
ಬಲೂನು ಊದಿ ಕೊಟ್ಟ ನಗುತ್ತ ನಾನು ನಕ್ಕೆ
ಅಕ್ಕಪಕ್ಕದ ಎಲ್ಲರೂ ನಕ್ಕರು ಬಲೂನು ನೋಡಿ
ನನಗೆ ಖುಷಿ ಕೈಯಿಂದ ಆಡಿಸುತ್ತ ನಡೆದೆ ಮನೆಗೆ

ಅವರು ಹೋದರು ಬೀದಿಯಲ್ಲಿ ಸಿಕ್ಕು ನೋಡಿ ನಕ್ಕು
ತಲೆ ನೇವರಿಸಿದರು ನಕ್ಕು ಬಿಟ್ಟೆ ಅವರ ನೋಡಿ
ಅಮ್ಮ ಒಳಗಿನಿಂದ ಬಂದು ನನ್ನ ಕೈಯ ಬಲೂನು
ನೋಡಿ ಕುಸಿದು ಬಿದ್ದು ಅತ್ತಳು ನಾನು ನಗಲಿಲ್ಲ.

ಕೂದಲು ಕೆದರಿತ್ತು ಹಣೆ ಬೊಟ್ಟು ಅಳಿಸಿತ್ತು
ಹಾಸಿಗೆ ನಗುತಿತ್ತು ಹೂ ಬಾಡಿ ಹೋಗಿತ್ತು
ಕೈಕಾಲು ಅದುರುತಿತ್ತು ಅಮ್ಮ ನಡುಗಿಬಿಟ್ಟಳು
ನಾನು ಸುಮ್ಮನಿದ್ದೆ ಅಮ್ಮ ಅಳುತ್ತಿದ್ದಳು ಏಕೆ?

- ಶ್ರೀ ಇಂಗಳಗಿ ದಾವಲಮಲೀಕ, ಶಿಕ್ಷಕ ಸಾಹಿತಿಗಳು ಹತ್ತಿಮತ್ತೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಭಾನುವಾರ, ಸೆಪ್ಟೆಂಬರ್ 19, 2021

ಪೂಜಿತ (ಕವಿತೆ) - ಧ್ಯಾಮ್ ರಾಜ್.ವಾಯ್ಹ್. ಸಿಂದೋಗಿ.

ಪೂಜಿತ

ದುಡ್ಡು ದುಡ್ಡು ಅಂತಾ ದುಡ್ಡಿಂದ ಓಡತಿ
ದಡ್ಡ ನಾ ದಡ್ಡ ಅಂತಾ ದಡ್ಡತನ ಸಾರುತಿ
ಗಿರಿ ಏರಿ ಗುರಿ ಭೇದಿಸಿ ನಗುತಿ
ಮೆರೆಯುವ ಜ್ಞಾನ ನೀಡಿದ ಗುರು ಮರತಿ//

ನಿಜ ಅಲ್ಲವೆ ಎಲ್ಲರಲ್ಲಿಯೂ ಇರದು ಶ್ರೇಷ್ಠತೆ
ಆದರೆ ಮರೆಯಲ್ಲ ಗುರು ಕಲಿಸುವಾಗ ಸಮಾನತೆ
ವಿಚಾರ ವಿನಿಮಯ ಮಾಡುವ ಎಲ್ಲರ ಜೊತೆ
ಅದ್ಭುತ ಅಮೋಘ ಪೂಜಿತ ಗುರು ನಡತೆ//

ಮನಕೆ ಸಿಗದು ನೆಮ್ಮದಿಯ ಶಾಂತಿ
ಕಾರಣ ಬಚ್ಚಿಟ್ಟ ಹಣ ತರುವದು ಚಿಂತಿ
ನೋವು ಉಚಿತ ಆಸೆ ಮಾಡಲು ಕ್ರಾಂತಿ
ಸಾವು ಖಚಿತ ಇದು ಸತ್ಯದ ಭ್ರಾಂತಿ//

ಅರಿ ಗುರು ಭವನ ಬೆಳದಿಂಗಳಂತೆ
ಅವರಿಂದ ಬದುಕಿದಿ ನಿನ್ನ ಕನಿಸಿನಂತೆ
ಸಾಧನೆ ನಾಡಲಿ ಹರಡಲು ತಂಗಾಳಿಯಂತೆ
ಬೆನ್ನು ತಟ್ಟಿದ ಗುರು ಮನದಲಿ ನಗಲಿ ಕುಸುಮದಂತೆ//

ಗೌರವಿಸು ಸಮಾಜದ ನ್ಯಾಯ ನೀತಿ
ಬಾಳಲು ಕಲಿಸಿದ ಗುರುವಿನ ರೀತಿ
ನೆರೆ ಹೊರಗೆ ಹಂಚು ಧರ್ಮದ ಪ್ರೀತಿ
ಆಗಲು ಮನ ಮನೆ ಬೆಳಗೋ ಜ್ಯೋತಿ//
- ಧ್ಯಾಮ್ ರಾಜ್.ವಾಯ್ಹ್. ಸಿಂದೋಗಿ. ಸಾ!!ಭೈರಾಪೂರ, ತಾ!ಜಿ!ಕೊಪ್ಪಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಮೊಬೈಲ್ ಗೋಳು ಜೀವನ ಹಾಳು (ಕವಿತೆ) - ಮೊಹಮ್ಮದ್ ಅಜರುದ್ದಿನ್ , ಯುವ ಸಾಹಿತಿಗಳು.

ಮೊಬೈಲ್ ಗೋಳು ಜೀವನ ಹಾಳು  

ಮೊಬೈಲ್ ನೋಡಿದರೆ ಸಾಕು 
ಮನದಲ್ಲಿ ಹುಟ್ಟುವುದು ಆಸೆ ನೂರಾರು
ಮೊಬೈಲ್ ಇಂದ ನಮ್ಮ ಜೀವನ ಹಾಳು 
ಈ ಯುಗದಲ್ಲಿ ಇದೆ ಎಲ್ಲರ ಗೋಳು ||

ವಾಟ್ಸಾಪ್ ಫೇಸ್ಬುಕ್ ಎನ್ನುವ 
ಹೊಸ ಆಸೆಯ ಅಪ್ಲಿಕೇಶನ್ಗಳು  
ನೋಡುತ್ತ ನೋಡುತ್ತ ಮನವ ಗೆಲ್ಲುತ್ತಾ 
ನಮ್ಮ ಲೋಕವನ್ನೇ ಮರೆಸುವುದು ||

ನೋಡಿದ ಕೂಡಲೇ ಇಷ್ಟವಾಗುವ 
ನೂರಾರು ಹೊಸ ಹೊಸ ಆಟ  
ಅವುಗಳನ್ನು ಇನ್ಸ್ಟಾಲ್ ಮಾಡಿ ಆಡಿದರೆ  
ನಾವು ಸೇರುವೆವು ಮೊಬೈಲ್ ನ ಮಠ ||

ಮಕ್ಕಳಿಗೆ ಇದೊಂದು ಹೊಸ ಆಟ 
ಇದನ್ನು ನೋಡುತ್ತಾ ಕಲಿಯುತ್ತಿಲ್ಲ ಪಾಠ
ಅವರಿಂದ ಇದನ್ನು ಬಿಡಿಸಬೇಕು ಎಂಬ ನಿಮ್ಮ ಹಠ 
ಕೊನೆಗೂ ಬಿಡಲ್ಲ ಅವರು ಮೊಬೈಲ್ನ ಚಟ ||

ಮೊಬೈಲ್ ಮಾರಿಯನ್ನು ನಾವು ತೊಲಗಿಸೋಣ
ಓದು-ಬರಹವನ್ನು ಪ್ರೀತಿಯಿಂದ ಕಲಿಯೋಣ  
ಸಾಧನೆಯ ಹೊಸ ಹಾದಿಯನ್ನು ಹಿಡಿಯೋಣ  
ಮೊಬೈಲ್ ನಿಂದ ಜೀವನ ಹಾಳು ಎಂದು ಸಾರೋಣ ||


- ಮೊಹಮ್ಮದ್ ಅಜರುದ್ದಿನ್ 
ಯುವ ಸಾಹಿತಿ 
ಅಕ್ಕಿಹೆಬ್ಬಾಳು ಗ್ರಾಮ 
ಕೃಷ್ಣರಾಜಪೇಟೆ ತಾಲ್ಲೂಕು 
ಮಂಡ್ಯ ಜಿಲ್ಲೆ-571605.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...