ಶನಿವಾರ, ಡಿಸೆಂಬರ್ 11, 2021

ಚುಟುಕುಗಳು - ಸ್ವಾತಿ ರಾವ್.

‌೧
ನೋವಿನ‌ ಜೊತೆಗೊಂದು ನಿರಾಸೆ
ಏನು ಆಗುತ್ತಿಲ್ಲವೆಂಬ ಹತಾಶೆ
ಪ್ರತಿ ದಿನವೂ ಒಂದೊಂದು ಪರೀಕ್ಷೆ
ಎಲ್ಲದರಲ್ಲೂ ‌ಸೋಲೆಂಬ ತಮಾಷೆ
ಆದರೂ ಸುಮ್ಮನಿರಲು ಬಿಡದು‌ ನಿರೀಕ್ಷೆ
ಮರಳಿ‌ ಯತ್ನವ ಮಾಡು ಇದೇ,
ಬದುಕಿಗೆ ನೀಡುವ ಪುಟ್ಟ ಭರವಸೆ


ಉದ್ವೇಗಕ್ಕೆ ಒಳಗಾದರೆ ಮನಸ್ಸು
ಉರಿದು ಹೋಗುವುದು ನಿನ್ನ ಕನಸು
ಊಹಾಪೋಹಗಳಿಗೆ ತೋರಬೇಡ‌ ಮುನಿಸು
ಮುಂದೆ ನಡೆ ಕಾಯುತಲಿದೆ ನಿನ್ನ ಯಶಸ್ಸು

ನಿನ್ನೆಯ ನೆನಪು
ನಾಳೆಯ ಕನಸು
ಇಂದಿನ ಬದುಕು 
ಎಲ್ಲದರಲ್ಲೂ ಜೀವಿಸು

ನಗು ಮೊಗದ ಶೋಭಿತೆ
ದಿಟ್ಟ ಹೆಜ್ಜೆಯ ವನಿತೆ 
ಅವಳಲ್ಲಿದೆ ಸಭ್ಯತೆ
ನಡತೆಯಲ್ಲಿದೆ ಪರಿಶುದ್ಧತೆ
ಹೆಣ್ಣೆಂದರೆ ಪರಿಪೂರ್ಣತೆ
ಅವಳಲ್ಲಿಲ್ಲ ಯಾವ ಕೊರತೆ
  ✍️ ಸ್ವಾತಿ ರಾವ್.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಿರುಗನವಗಳು - ಅನ್ಸೀ, ಬಾಳೆಹೊನ್ನೂರು.

ಬರವಸೆಯ ಬದುಕು
ದಿನಗಳು ಕಳೆಯುತಿದೆ, ಸಮಯ ವ್ಯರ್ಥವಾಗುತಿದೆ, ಜೀವನ ಹೇಗೆ ನಡೆಸಬೇಕೆಂಬುದೆ ಮನಸಿನ ಮೇಲೆ ಪರಿಣಮಿಸುತಿದೆ, ಆದರೂ, ತಕ್ಕಡಿಯಂತೆ ಸಮನಾಗಿ ಅಲ್ಲದಿದ್ದರೂ.., ತಕ್ಕಡಿ ಪಕ್ಕ ಇಡುವ ತೂಕದ ಗುಂಡಿನಂತೆ ಕಡಿಮೆ.., ಜಾಸ್ತಿ ಆಗುತ್ತಲೇ ನಡೆಯುತ್ತಿದೆ ಜೀವನ, ಆಗಲೇ ಬಂತೊಂದು ಬೆಳಕೆಂಬ ಕಾಂತಿ.., ಈ ಬೆಳಕೆಂಬ ಕಾಂತಿ ಜೀವನದ ದಿಕ್ಕು ಬದಲಿಸಿತಲ್ಲ ಎಂಬುದೆ ಆಶ್ಚರ್ಯ.., ಇಂದಿಗೂ ಅದೊಂದು ತಿರುವು ಈ ಜೀವನವೆಂಬ ಅಲೆ ನಿಂತ ನೀರಾಗದೆ ಹರಿವ ನೀರಾಗಿಹುದು ಸಂತೋಷದ ಸಂಗತಿ.., ಆದರೂ ಮನಸಲ್ಲಿರುವ ವಿಶ್ವಾಸಕೆ ಬದುಕುವೇ ನಾ ಭರವಸೆಗಾಗಿ..


ದೂರಾದ ಮನಸ್ಸು

ನಿನ್ನಿಂದ ದೂರ ಹೋಗುವ ಬಯಕೆ ಎನ್ನ ಹೃದಯಕೆ..,
ನೋವಿನಲ್ಲೂ ಮತ್ತೆ ಬದುಕಲಾರೆ ನಾ 
ಇನ್ನುಮುಂದೆ.,
ನೀ ಕೊಟ್ಟ ನೋವಿಗೆ ಸಹಿಸಲಾದೀತೆ ಈ ಮನಸ್ಸಿಗೆ..,
ನೋವಲ್ಲೂ ಸುಖ ಕಂಡ ಈ ಹೃದಯಕೆ..,
ದೂರಾಗಲೇ ಬೇಕಿದೆ ನಿನ್ನಿಂದ ಅದು ನನ್ನ ಅರಿಕೆ...

- ಅನ್ಸೀ , ಬಾಳೆಹೊನ್ನೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನೋವು (ಕವಿತೆ) - ರಂಜಿತ್ ಕುದುಪಜೆ.

ನಗುವಿನ ಹಿಂದೆ ಮಗುವಿನಂತೆ
ಮಗುವಿನ ಮುಂದೆ ಲಾಲಿಯಂತೆ
'ಜೀವನ'ವೆಂಬ ಮೂರು ಪದವು
ಭಾವನಾತ್ಮಕತೆಯ ಮಿಡಿತವು


ಜೋಗುಳವು ಹೇಳಿಕೇಳುತಿರಲು
ಬೈಗುಳವು ಬೈದು ಮರೆಯಾಗುತಿರಲು
ಪ್ರತಿಧ್ವನಿಯ ಪ್ರಥಮವಾಗುತ
ಮನದ ಮೂಲೆಯಲಿ ದನಿಯಾಗುತ

ಮುಖವಾಡದ ಬಯಕೆಯು
ನಿಷ್ಕಲ್ಮಶ ಸೋಗಿನ ಆರೈಕೆಯು
ಜೀವವ ಬೆನ್ನಹಿಂದೆ ಹಿಂಡುತ
ಬಿಗುಮಾನ ಬಿಗಿ ಬಯಕೆಯಾಗುತ

ಸತ್ವದ ಸತ್ಯದ ಸ್ವಾದಿಷ್ಟವು
ಭ್ರಾತೃತ್ವದಲಿ ಮಿಥ್ಯದ ಮದವು
ಆತ್ಮಸಾಕ್ಷಾತ್ಕಾರ ಹುಡುಕುತ
ಭ್ರಮೆಗಳಿಗೆ ಜೋತು ಬೀಳುತ
  ✍🏻ರಂಜಿತ್ ಕುದುಪಜೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಆಧುನಿಕ ವಚನ (ಭಾವಾರ್ಥ ಸಹಿತ) - ಚಿಂತನ್

ಕಂಡಿಲ್ಲ ಎಂದೂ ದೇವರನ್ನು
ಕಂಡಿತೆ ಎಂದು ಪೂಜಿಸುವರಯ್ಯ 
ಕಂಡಿಲ್ಲ ಎಂದೂ ಪಿಶಾಚಿಯನ್ನು
ಬಡಿಯಿತೆ ಎಂದು ನಡುಗುವರಯ್ಯ 
ಕಂಡರೂ ಕಣ್ಣು ಕಟ್ಟುವ ಸತ್ಯವನ್ನು
ಕಾಣದಂತಿರುವರು ಈ ಮೂಢರು !
ಕಣ್ಣಿಲ್ಲದವನ ಕಣ್ಣನ್ನೇ ಕಿತ್ತು
ಕಾಲಿಲ್ಲದವನ ಕಾಲಿಗೆ ಒದೆದು
ಬಾಯಿಲ್ಲದವನ ನಾಲಿಗೆ ಕಿತ್ತು
ಮನಸಿಲ್ಲದವನ ಮನಸೋಲಿಸಿ ಸಾಯಿಸಿ
ಮಿಗ ಕೊಂದು ತಿಂದು ಪಾಪ ಕಳೆವರಯ್ಯ !

       ಭಾವರ್ಥ :ದೇವರನ್ನು ಇಂದಿಗೂ ಯಾರು ನೋಡಿಲ್ಲ, ಆದರೂ ಸಹ ದೇವರನ್ನು ಪೂಜಿಸುತ್ತಾರೆ. ಈ ಪೂಜೆಯನ್ನು ಮಾಡುವುದರಿಂದ ನಮ್ಮ ಕಷ್ಟಗಳು ದೂರವಾಗುತ್ತದೆ, ಮಾಡಿರುವ ಪಾಪಗಳು ಕಳೆಯುತ್ತವೆ ಎಂಬ ಕೆಟ್ಟ ಭ್ರಮೆಯಿಂದ ಫಲಾಹಾರಾದ್ರವ್ಯ ಗಳು ಪೋಲಾಗುತ್ತಿವೆ.
ಮೂಖ ಪ್ರಾಣಿಗಳು ಬಲಿಯಾಗುತ್ತಿವೆ. ಪಿಶಾಚಿಗಳನ್ನು ಸಹ ಯಾರು ನೋಡಿರಲು ಸಾಧ್ಯವಿಲ್ಲ, ನೋಡಿದರು ಮಾನಸಿಕ ದುರ್ಬಲ ಅಂತಾರಾಳದಲ್ಲಿ ಮಾತ್ರ, ನಿಜವಾಗಿಯೂ ಅಲ್ಲ.
ಮಾನಸಿಕ ದೌರ್ಬಲ್ಯದಿಂದಾಗುವ ಭ್ರಮೆಯಷ್ಟೇ. ಕಣ್ಣು ಕಾಣಿಸದ, ಕಿವಿ ಕೇಳಿಸದ, ಮಾತನಾಡಲು ಸಾಧ್ಯವಾಗದ, ನಡೆಯಲು ಸಾಧ್ಯವಾಗದ ಎಷ್ಟೋ ಬಡ ಅಮಾಯಕರಿದ್ದಾರೆ.
ನೀವು ಮೌಢ್ಯತೆಯಿಂದ, ಭ್ರಮೆಯಿಂದ ದೇವರು ಹಾಗೂ ಪಿಶಾಚಿಯ ಹೆಸರಲ್ಲಿ ಹಣವನ್ನು ವ್ಯರ್ಥ ಮಾಡದೆ ಇಂತಹವರಿಗೆ ಸಹಾಯ ಮಾಡಿದರೆ ಒಬ್ಬ ನಿಮ್ಮಿಂದ ಪ್ರಪಂಚ ನೋಡ್ತಾನೆ, ಇನ್ನೊಬ್ಬ ನಡಿತಾನೆ, ಮತ್ತೊಬ್ಬ ಮಾತಾಡ್ತಾನೆ. ಇದನ್ನು ಮಾಡದೆ ನೀವು ಸುಮ್ಮನೆ ಈ ಅರ್ಥವಿಲ್ಲದ ಆಚರಣೆಗೆ ಹಣ ವ್ಯರ್ಥ ಮಾಡಿದರೆ ನಿಜವಾಗಿಯೂ ಕಣ್ಣಿಲ್ಲದವನ ಕಣ್ಣನ್ನೇ ಕಿತ್ತುಕೊಂಡಂತೆ, ಕಾಲಿಲ್ಲದವನ ಕಾಲು ಕಸಿದುಕೊಂಡಂತೆ, ಬಾಯಿಲ್ಲದವನ ನಾಲಿಗೆ ಕಿತ್ತುಕೊಂಡಂತೆ, ದಯವಿಟ್ಟು ಅರ್ಥವಿರುವ ಕೆಲಸ ಮಾಡಿ.   
- ಚಿಂತನ್.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
                         -

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...