ಶನಿವಾರ, ಮಾರ್ಚ್ 18, 2023

ಹೋಗೋಣ.. ಸಿದ್ಧವೈತಿ ದಿಬ್ಬಣ (ಕವಿತೆ) - ಬಿ ಎಂ ಮಹಾಂತೇಶ.

ಮನಿಯ ಅಂಗಳದಾಗ
ಸಣ್ಣನೆ ಬೆಂಕಿ ಉರಿದೈತಿ...
ತಣ್ಣನೆ ಬೀಸುವ ಗಾಳಿಗೆ
ತಮಟೆಯು ಮೈಯ ಕಾಸೈತಿ...

ನೀನಿಲ್ಲದ ಸುದ್ದಿಯು
ಎಲ್ಲೆಲ್ಲೂ ಹಬೈತಿ...
ಬಂಧು ಬಳಗವೆಲ್ಲ ಬಂದು
ನಿನ್ನ ಸುತ್ತ ಕುಳಿತೈತಿ...

ನೀ ಗಳಿಸಿದೆಲ್ಲವುದು
ಗೊಗರೆದು ಅಳುತೈತಿ...
ನಿನಗಿಡುವ ಎಡಿಯು
ತಿನ್ನಲು ಕಾಗಿ ಕಾದು ಕುಳಿತೈತಿ...

ಎಲ್ಲಾ ಮುಗಿದಮ್ಯಾಲ
ಇಲ್ಲಿ ನಿನ್ನದೇನೈತಿ...
ಹೊಂಡು ಬಾ
ದಿಬ್ಬಣ ಸಿದ್ದವೈತಿ...

- ಬಿ. ಎಂ. ಮಹಾಂತೇಶ
ವಿಜಯನಗರ..
9731418615

ಸರಿಯಲಿ (ಕವಿತೆ) - ಸಬ್ಬನಹಳ್ಳಿ ಶಶಿಧರ.

ಮನ ಹೊಕ್ಕಿ ಕುಳಿತಿರುವ
ಕಾರ್ಮೋಡ ಸರಿಯಲಿ
ನವಿರಾದ ಸವಿ ಭಾವ
ಹೊರ ಹೊಮ್ಮಿ ನಗಲಿ

ಸಿಟ್ಟು ಸೆಡವು ಕೋಪ ತಾಪ
ಏಕೆ ಬೇಕು ಮನದಲಿ
ಸ್ನೇಹ ಪ್ರೀತಿ ತ್ಯಾಗ ಕರುಣೆ
ಒಡಲ ತುಂಬಿ ತಣಿಸಲಿ

ನಗುತ ನಗಿಸಿ ನೋಡಿ ಒಮ್ಮೆ
ನಿಮ್ಮ ಮನವೆ ಕುಣಿವುದು
ಕೋಪದಲ್ಲಿ ನಿಮ್ಮ ಮುಖ
ವ್ಯಾಘ್ರನಂತೆ ಕಾಣ್ವುದು

ಅಂದ ಚಂದ ಎಲ್ಲ ನಮ್ಮ
ನಗುವಿನಲ್ಲೆ ಇರುವುದು
ನಮ್ಮಲಿರುವ ದುಡುಕುತನ 
ಸುಖ ಶಾಂತಿ ತೊರೆವುದು

ನಗುವಿನಲ್ಲಿ ಸರಿಸಿ ಬಿಡಿ
ಎದೆಯೊಳಗಿನ ಕಸವ
ಎಲ್ಲರಲ್ಲು ಬೆರೆತು ನೋಡಿ
ಮರೆಸುವುದೆದೆ ನೋವ.
- ಸಬ್ಬನಹಳ್ಳಿ ಶಶಿಧರ.


ಶುಕ್ರವಾರ, ಮಾರ್ಚ್ 17, 2023

ಪ್ರಕಟಣೆ : ಪ್ರಬಂಧ ಸ್ಪರ್ಧೆಗೆ ಪ್ರಬಂಧಗಳ ಆಹ್ವಾನ.


ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ (ರಿ) ಹಾಸನ, ಹಾಸನ ಜಿಲ್ಲಾ ಘಟಕದ ವತಿಯಿಂದ ಯುಗಾದಿ ಹಬ್ಬದ ಅಂಗವಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿರುತ್ತದೆ. ಆಸಕ್ತರು ಮೂರು ಪುಟಗಳಿಗೆ ಮೀರದಂತೆ
ಅಪ್ರಕಟಿತ ಸ್ವರಚಿತ ಪ್ರಬಂಧವನ್ನು ದಿನಾಂಕ-20-03-2023ರ ಸಂಜೆ 8-00 ಗಂಟೆಯ ಒಳಗೆ ತಲುಪುವಂತೆ, ತಮ್ಮ ಕಿರುಪರಿಚಯ ಒಂದು ಪುಟ, ವಿಳಾಸ,ಸಂಪರ್ಕ ಸಂಖ್ಯೆ, ಸ್ಪುಟವಾದ ಭಾವಚಿತ್ರದೊಂದಿಗೆ  ಈ ವಾಟ್ಸಾಪ್ ಸಂಖ್ಯೆಗೆ ಕಳುಹಿಸಲು ಕೋರಿದೆ.

ಮೊದಲು ಬಂದ 30 ಲೇಖನಗಳನ್ನು ಮಾತ್ರವೇ ಸ್ಪರ್ಧೆಗೆ ಮತ್ತು ಕೃತಿಗೆ ಪರಿಗಣಿಸಲಾಗುವುದು.

ಬಹುಮಾನಿತ ಹಾಗು
ಅತ್ಯುತ್ತಮವೆನಿಸಿದ ಲೇಖನಗಳನ್ನು ಕೃತಿಯ ರೂಪದಲ್ಲಿ ಹೊರತರಲಾಗುತ್ತಿದೆ.

*ವಿಷಯ :"ಪರಿಸರ ಸಂರಕ್ಷಣೆಯಲ್ಲಿ ನಮ್ಮ ಪಾತ್ರ " ಕುರಿತು* 
8 ನೇ ತರಗತಿಯಿಂದ ಪದವಿವರೆಗಿನ ವಿದ್ಯಾರ್ಥಿಗಳಿಗೆ.

ಪ್ರಬಂಧವನ್ನು ತಪ್ಪಿಲ್ಲದಂತೆ ಟೈಪ್ ಮಾಡಿರಬೇಕು.
ಕಳುಹಿಸಬೇಕಾದ ಹಾಗೂ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ವಾಟ್ಸಾಪ್ ಸಂಖ್ಯೆ - 9972125656 
9880417527
ಅಥವಾ ಮಿಂಚಂಚೆ: spandanasirihsn@gmail.com 

ಕೃತಿ ಬೇಕಾದಲ್ಲಿ ಮುಂಚಿತವಾಗಿಯೆ ತಿಳಿಸಬೇಕಾಗಿರುತ್ತದೆ.
ಬಹುಮಾನಿತರಿಗೆ ಮತ್ತು ಹತ್ತು ಅತ್ಯುತ್ತಮ ಲೇಖಕರಿಗೆ "ಸ್ಪಂದನ ಸಿರಿ ಸಂಸ್ಕೃತಿ ಸಮ್ಮೇಳದ" ಕೃತಿಬಿಡುಗಡೆ ಕಾರ್ಯಕ್ರಮದಲ್ಲಿ ಅಭಿನಂದನ ಪತ್ರದೊಂದಿಗೆ ಸನ್ಮಾನಿಸಿ ಗೌರವಿಸಲಾಗುತ್ತದೆ.

ಸಮಿತಿಯ ತೀರ್ಮಾನವೆ ಅಂತಿಮವಾಗಿರುತ್ತದೆ.

ಧನ್ಯವಾದಗಳೊಂದಿಗೆ 
ಶ್ರೀ ವರುಣ್ ರಾಜ್ ಜಿ,ರಾಜ್ಯ ಪ್ರಧಾನ ಕಾರ್ಯದರ್ಶಿ,
ಆಶಾಕಿರಣ್,
ಜಿಲ್ಲಾಧ್ಯಕ್ಷರು,
ಹಾಸನ

ಕಾಮಪುರಾಣಕ್ಕೆ ಭಗವದ್ಗೀತೆಯ ಲೇಬಲ್ಲು (ಕವಿತೆ) - ಗೌತಮ್, ಕೀರಣಗೆರೆ.

ಇಣುಕುತ್ತಿವೆ ಕಣ್ಣುಗಳು
ಎದುರಿಗಿರುವ ಮೊಲೆಗಳತ್ತ,

ಬಾಯಲ್ಲಿ
ಪರನಾರೆ ಸಹೋದರಿ.
ಹೊರಗೆ, ಕಾಮಂ ಪಾಪಂ!
ಒಳಗೆ, ಮನವೆಲ್ಲ ಕಾಮಂ.

ದೇವಿಯ ನಡು ನೋಡಿ
ಗರ್ಭ ಗುಡಿಯೊಳಗೆ ಪೂಜಾರಿಯ
ವೀರ್ಯ ಸ್ಖಲನ.
ವಿಭೂತಿಯ ಪ್ಯಾಕೆಟ್ಟಿನೊಳಗೆ
ವಿವಿಧ ಫ್ಲೇವರಿನ ಕಾಂಡೊಮ್ಗಳು.

ಭಕ್ತಿ- ಭಾವ, ಸನ್ಯಾಸತ್ವದ
ಕುರಿತು ಪ್ರವಚನ.
ಮುಗಿದಮೇಲೆ  ಓಡುತ್ತಾರೆ, 
ಕಾಯುತ್ತಿರುವ ಕಾಲ್ ಗರ್ಲ್ ನತ್ತ.

ಬೆಳಗಾದರೆ ದೇವರ ಪೂಜೆ.
ರಾತ್ರಿ ಬೆತ್ತಲೆ ಪೂಜೆ.

ಕಾಮಪುರಾಣಕ್ಕೆ
ಭಗವದ್ಗೀತೆಯ ಲೇಬಲ್ಲು,
ಕಾವಿಯಾದರೇನು? 
ಕಾಮಿಯಾದರೇನು?
** ಅದು ಯಾವಾಗಲು
ಸ್ಟ್ಯಾಂಡೆಬಲ್.

-ಗೌತಮ್
ಕೀರಣಗೆರೆ, ರಾಮನಗರ.
9902549766


ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...