ಬದುಕೆಂದರೆ..?
'ಬದುಕೆಂದರೆ..?
ಅಂದದ ಹೊದಿಕೆಯಲ್ಲ,
ಹರಿದ ಚಿಂದಿಗಳನ್ನಾಯ್ದು
ಒಂದುಗೂಡಿಸಿ ಕಲಾತ್ಮಕವಾಗಿ
ಅಮ್ಮ ಹೊಲಿದ ಚಂದದ ಕೌದಿ..!
ಬಿಸಿಲ ಬೇಗೆಗೆ ತಂಪು,
ಕೊರೆವ ಚಳಿಗೆ ; ಸುರಿವ
ಮಳೆಗೆ ಸೊಂಪು..!
ತಿಳಿದು ನೋಡಲದು
ಹರಿದ ಚಿಂದಿಗಳ ಗುಂಪು..!
ಹಬ್ಬ-ಹರಿದಿನಗಳ
ನೆಪಗಳಲ್ಲಾದರೂ
ವರುಷದಲ್ಲಿ ನಾಲ್ಕು
ಬಾರಿಯಾದರೂ
ತೊಳೆದು ಹಾಕಿದರೆ
ಬದುಕು ಸೊಗಸು ;
ಇಲ್ಲವೇ ಹಳಸು..!
- ಡಾ.ಯಲ್ಲಮ್ಮ ಕೆ.
ತಾವರಗೇರಾ
( ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ