ದೀಪ
(ನಮ್ಮ ದೇವರ ಮನೆಯಲ್ಲಿ ಹಚ್ಚಿದ್ದ ನಂದಾ ದೀಪದ ಬೆಳಕನ್ನು ಕಂಡಾಗ ಅರಳಿದ ಪುಟ್ಟ ಕವನ)
ನಂದಾ ದೀಪದ ಹೊಂಬೆಳಕೆ,
ನಿನ್ನ ಇರುವಿಕೆಯ ತೋರಿದ್ದು ಸಾಕೆ!
ಹೇಳಬೇಕೆಂದಿರುವೆ ಏನು ?
ಬರಲೇ ಹತ್ತಿರಕೆ ನಾನು.
ಲೀನಳಾದೆ ನಿನ್ನಲ್ಲಿ,
ಮರೆತೇ ನನ್ನನ್ನು ನಾನಿಲ್ಲಿ.
ನಿನ್ನ ನಗುವಿನ ರಹಸ್ಯವೇನು ?
ಹೇಳಿ ಪುಣ್ಯ ಕಟ್ಟಿಕೋ ನೀನು.
ಇರಲು ಬಯಸುವೆ ನಾ ನಿನ್ನಂತೆ,
ತಾನು ಉರಿದು ಬೆಳಕು ಕೊಡುವಂತೆ.
- ಶಿವಕುಮಾರಿ.ಆರ್ ಕನ್ನಡ ಶಿಕ್ಷಕಿ ದೊಮ್ಮಲೂರು, ಬೆಂಗಳೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448241450 ಸಂಪಾದಕರು ವಿ ಮ ಸಾ ಪತ್ರಿಕೆ )
❤️
ಪ್ರತ್ಯುತ್ತರಅಳಿಸಿ