ಬುಧವಾರ, ಜೂನ್ 23, 2021

ನಾವೆಲ್ಲ ರೋಬೋಟ್ಗಳು (ಅನುಭವ ಕಥನ). - ಜಗದೀಶ್ ಸಜ್ಜನರ.

ನಾವೆಲ್ಲ ರೋಬೋಟ್ಗಳು 


ನನ್ನ ಹೆಸರು ಜಗದೀಶ್ ಸಜ್ಜನರ ನಾನೊಬ್ಬ ಕೋವಿಡ್ 19ದಿಂದ ಗುಣಮುಖನಾಗಿರುವ ವ್ಯಕ್ತಿ ನನಗೆ ಕೋರೋನ ಎಂಬ ಖಾಯಿಲೆ ಬಂದಾಗ ಆದ 10ಕ್ಕೂ ಹೆಚ್ಚು ಸಾವುಗಳನ್ನು ನೋಡಿ ನಾವೆಲ್ಲ ರೋಬೋಟ್ಗಳು  ಹಣ ಹೆಣ್ಣು ಹೊನ್ನಿನ ಆಸೆಗಾಗಿ ಬದುಕುವ ಮನುಷ್ಯ ಸಾಯುವಾಗ ಯಾವುದೇ ಆಸೆಯಿಲ್ಲದೆ ಕೊನೆಯುಸಿರೆಳೆಯುತ್ತಾನೆ ತಾನು ತನ್ನವರೆಲ್ಲರನ್ನು ಬಿಟ್ಟುಹೋಗಲು ಆತ ಸಿದ್ಧನಿಲ್ಲದಿದ್ದರು ಹೋಗಲೇಬೇಕು...ಆ ದೇವರು ಸೂತ್ರಧಾರಿ ನಾವೆಲ್ಲ ಪಾತ್ರಧಾರಿಗಳು...ಜೀವನವೇ ರಂಗಸ್ಥಳ..ಪಾತ್ರ ಮುಗಿದಮೇಲೆ ನಾವೆಲ್ಲ ಹೋಗಲೇಬೇಕು...ಎಂಬ ಸತ್ಯ ನನಗಾಗ ಅರಿವಾಯಿತು..ಈ ಕೊರೊನ ಹೆಮ್ಮಾರಿ ನಮ್ಮ ಮನೆಗೆ ಬರುತ್ತದೆ ಎಂದು ಕನಸು ಮನಸಲ್ಲು ಅಂದುಕೊಂಡಿರಲಿಲ್ಲ..ನಮ್ಮ ಮನೆಯ ಎಲ್ಲರಿಗೂ ಅಂಟಿದ ಈ ರೋಗ ನನ್ನ ತಂದೆಯನ್ನು ಬಿಡಲಿಲ್ಲ..

ಆ ದೇವರು ಎಷ್ಟು ಕ್ರೂರಿ ನನ್ನ ತಂದೆಯನ್ನು ಕೊರೊನ ಎಂಬ ಹೆಮ್ಮಾರಿಗೆ ಬಲಿಯಾಗಿಸಿದ. ನನಗಾಗಿ ಏನನ್ನು ಕೇಳದ ನಾನು ನನ್ನ ತಂದೆ ಐಸಿಯುನಲ್ಲಿರುವ 15 ದಿನ ಬೇಡದ ದೇವರಿಲ್ಲ ನನ್ನ ತಂದೆ ಗುಣವಾದರೆ ಸಾಕು ನನ್ನ ಪ್ರಾಣ ಹೋದರು ಪರವಾಗಿಲ್ಲ ನನ್ನ ತಂದೆ ಬದುಕಲಿ ಎಂದು ಆ ದೇವರಲ್ಲಿ ಬೇಡಿದೆ ಆ ದೇವರು ಬರಲೇ ಇಲ್ಲ ಕಾಣದ ಕಡಲಿಗೆ ಹೋದ ತಂದೆಯ ನೆನಪು ಈಗಲೂ ಕಾಡುತ್ತದೆ..

ದೇವರು ಮಾಡಿದ ರೋಬೋಟ್ ಗಳು ನಾವು ಜೀವಯಾನ ಮುಗಿದಮೇಲೆ ಏನಿದೆ ತಿಳಿಯದು...ನಮ್ಮೆಲ್ಲರ ಜೀವಯಾನ ಒಂದಲ್ಲ ಒಂದು ದಿನ ಮುಗಿಯಲೇಬೇಕು....ದ್ವೇಷ ಮತ್ಸರ ಅಸೂಯೆಗಳನ್ನು ಬಿಟ್ಟು ಪ್ರೀತಿ ಸ್ನೇಹ ಸೌಹಾರ್ದಯುತ ಜೀವನ ನಮ್ಮದಾಗಬೇಕು..

 - ಜಗದೀಶ್ ಸಜ್ಜನರ
S B ARTS and KCP SCIENCE COLLEGE
ವಿಜಯಪುರ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...