ಓ ಇಪ್ಪತ್ತು ಇಪ್ಪತ್ತೊಂದರ ಸಂವತ್ಸರ
ಇಪ್ಪತ್ತೊಂದನೇ ಶತಮಾನದ
ಇಪ್ಪತ್ತು ಇಪ್ಪತ್ತೊಂದರ
ನವ ಸಂವತ್ಸರಗಳೇ
ಮಾನವನ ಕರೆದೊಯ್ಯಲು
ಯಾಕಿಷ್ಟು ಅವಸರ
ನೀ ಬಂದೆಯೋ
ನಾವು ಬಂದವೋ ಗೊತ್ತಿಲ್ಲ
ಆದರೆ ಕಾಯಿಲೆಯಂತು ಬಂತ್ತು
ಜನರ ಜೀವನವನ್ನು ತಿಂತ್ತು
ದೀನ ನಿರ್ಗತಿಕರ
ಪಾಲಿನ ದೆವ್ವ ನೀನು
ಭ್ರಷ್ಟಾಚಾರಿಗಳ ಪಾಲಿಗೆ
ಮನೆದೈವ ನೀನು
ಹೇ ಇಪ್ಪತ್ತು ಇಪ್ಪತೊಂದರ
ನವ ಸಂವತ್ಸರಗಳೇ
ಈ ಕಂಗಾಳಿ ಮೇಲೇಕೆ ಈ ಕೋಪ
ನಿಲ್ಲಿಸು ನಿಲ್ಲಿಸು ನಿನ್ನ ಪ್ರತಾಪ
ಈಗಾಗಲೇ ಮುಗಿದಿದೆ ಇಪ್ಪತರ ಶಾಪ
ಕುಂಟುತ್ತಾ ಸಾಗಿದೆ
ಇಪ್ಪತ್ತೊಂದರ ಆರ್ಥಿಕತೆ
ಶುರುವಾಗಿದೆ ಶೇರುಪೇಟೆಯಲಿ
ಉಬ್ಬರವಿಳಿತಗಳ ಕರಡಿ ಕುಣಿತ
ನಲುಗಿದೆ ನರಕುಲ
ಹಿರಿ ಕಿರಿತಲೆಗಳು
ನಿನ್ನೆಯ ಪ್ರವಾಸಕ್ಕೆ
ಆಗಲೋ ಈಗಲೋ
ಅಸು ನೀಡಲು ಕಾದಿವೆ
ತಿನ್ನುವ ಅನ್ನಕ್ಕಿಲ್ಲ ತಂಟೆ ತಕರಾರು
ಬಿಡುಗಡೆಯಾಗಿವೆ ಅನುದಾನಗಳ ಹೇರು
ಇದನೊತ್ತೊಗಿದೆ ಕಳ್ಳರ ಖಜಾನೆಗಳ ಕಡೆಗೆ ಕಾರು
ಸರ್ಕಾರಿ ಯೋಜನೆಗಳಾಗಿವೆ ಬಡವರಿಗೆ ಬಾನ ಕಲ್ಪತರು
ಇನ್ನೆಲ್ಲಿ ಎಟಕುವುದು ಕಡೆಯ ವ್ಯಕ್ತಿಗಳಿಗೂ ಈ ಎಸರು
ದುಡಿಯುಲು ಹಾತೊರಿದಿದೆ
ಯುವ ಸಂಪತ್ತು
ಸಿಗದಾಗಿವೆ ನೌಕರಿ
ಹರಸಿದ ಕೈಗೆ ನಿರಾಸೆಯ ತುತ್ತು
ಇಷ್ಟಾದರೂ ಇನ್ನೂ ತೀರಿಲ್ಲ
ಇಪ್ಪತ್ತೊಂದರ ವಿಪತ್ತು
ಏನೇನೋ ಕಾದಿದೆಯೋ ಆಪತ್ತು
ಇನ್ನೇನು ಮೂರನೇ ಅಲೆಯ ಹೊತ್ತು
ಇದು ಏನೇನೂ ತರುವುದೋ ಹೊತ್ತು
ರೈತನೂ ಸಾಕಾಗಿದ್ದಾನೆ
ಈ ನೆಲವ ಉತ್ತು ಉತ್ತು
ಆದರು ಈ ಅವಧಿಯಲ್ಲಿ
ಜೀವಸಂಕುಲವ ಪಡೆದ ದತ್ತು
ಇವನ ಬದುಕಿಗೂ ತೆರಿಗೆಯ ಕುತ್ತು
ಪ್ರಭುತ್ವಕ್ಕೆ ಅಭಿವೃದ್ಧಿ ಆರ್ಥಿಕತೆಯ ಮತ್ತು
ಹೀಗಾದರೆ ರೈತನೂ ಸಾಯುತ್ತಾನೆ ಪ್ರಾಣವ ತೆತ್ತು
- ಮಹೇಶ್ ರಾಜಪ್ಪ ಕಡವಿನಹೊಸಹಳ್ಳಿ.(ಮರಾಕ) ಹಾಸನ ಜಿಲ್ಲೆ,ಅರಕಲಗೂಡು ತಾಲೂಕು, ಕೊಣನೂರು ಹೋಬಳಿ, ಕಡವಿನಹೊಸಹಳ್ಳಿ ಗ್ರಾಮ ಮತ್ತು ಅಂಚೆ, ಪಿನ್ ೫೭೩ ೧೩೦ ಮೊಬೈಲ್ ಸಂಖ್ಯೆ:೮೭೨೨೧೬೪೧೬೧.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ :9448241450 ಸಂಪಾದಕರು ವಿ ಮ ಸಾ ಪತ್ರಿಕೆ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ