ಯುಗಾಂತ
ಅನಾದಿಕಾಲದಿಂದಲೂ ಆದಿಶಕ್ತಿ ಎಂದರು ಅಂಚಿಗೆ ಸರಿಸಿದರು,
ಗಂಗೆ ಎಂದರು ಮಲಿನ ಮಾಡಿದರು
ಪ್ರಕೃತಿ ಎಂದರು ನಾಶಮಾಡಿದರು
ಮಾನವ ಮೂಲ ಎಂದರು
ಸೀರೆ ಎಳೆದರು ಅಡವಿಗೆ ಅಟ್ಟಿದರು
ನಾರಿ ಎಂದು ಗರ್ಭದಲ್ಲಿ ಕೊಂದರು
ಹಸುಳೆ ಎನ್ನದೇ ಅತ್ಯಾಚಾರ ಮಾಡಿಹರು
ಬಟ್ಟೆಯ ನೆಪವೊಡ್ಡಿ ಬೆತ್ತಲುಗೊಳಿಸಿಹರು
ಮುಟ್ಟೆಂದು ಅಟ್ಟಿದರು ಹೊರಗೆ
ಮುಟ್ಟಿನ ಒಲೆಯಲ್ಲಿ ನೀ ಬಂದೆ ಹೊರಗೆ
ನನ್ನ ಮರ್ಮಸ್ಥಾನ ನಿನ್ನ ಜನ್ಮಸ್ಥಾನ
ನನ್ನ ರಕ್ತದ ಮಾಂಸದ ಮುದ್ದೆ ನೀನು
ನೀನು ಹುಟ್ಟಿದ ಕೂಡಲೇ ಮಾ ಡಿಸಿದೆ ಸ್ತನ್ಯಪಾನ ನಾನು
ಅದನ್ನೇ ಬಯಸಿರುವೆ ನೀನು
ಉಚಿತವಲ್ಲ ನಿನಗೆ ಮೂಲ ನಾನು
ಒಮ್ಮೆ ನಾರಿ ತೆಗೆದುಕೊಳ್ಳುವಳು ಒಮ್ಮತದ ನಿರ್ಣಯ
ಮಾತೃತ್ವವನ್ನು ತ್ಯಜಿಸುವ ನಿರ್ಣಯ
ಇದೇ ಯುಗಾಂತ
ಅದೇ ನವಯುಗದ ವಿನಾಶ ಅದೇ ಮನುಕುಲದ ನಾಶ.
- ಹರೀಶ ಪಿಎ ಪಾಳ್ಯಕೆರೆ
8884878069
paharisha127@gmail.com
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )
ಚೆಂದವಾಗಿ ಇದೆ ಗೆಳೆಯ.. ಹೀಗೆ ಮುಂದುವರೆಸು ನಿನ್ನ ಬರವಣಿಗೆ.
ಪ್ರತ್ಯುತ್ತರಅಳಿಸಿ