ಬುಧವಾರ, ಜೂನ್ 23, 2021

ಕತ್ತಲು ಮನೆ (ಕವಿತೆ) - ಶಿವಾನಂದ ಕಲಬುರಗಿ.

" ಕತ್ತಲು ಮನೆ"

ಬಿಸಿಲು ಬಿಸಿಲೆಂದು ಬಸವಳಿದು ಎಸಿಯಲ್ಲಿ ಮಲಗಿದರೂ
ಕೊನೆಗೊಂದು ದಿನ
ಗಾಳಿಯೇ ಇಲ್ಲದ ಕುಣಿಯಲ್ಲಿ
ಮಲಗಬೇಕು ಮನುಜ//೧//

ಕಾರು ಬೈಕು ವಿಮಾನದಲ್ಲಿ
ಪ್ರಯಾಣ ಮಾಡಿದರೂ
ಕೊನೆಗೊಂದು ದಿನ
ಗಾಲಿನೇ ಇಲ್ಲದ ಚೆಟ್ಟದ ಮೇಲೆ
ಕೊನೆಯ ಪಯಣ ಮಾಡಬೇಕು ಮನುಜ//೨//

ಬಿಯರ್  ಬಿಸ್ಲರಿ ಸುರಪಾನ ಮಧುಪಾನ ಕುಡಿದರೂ
ಕೊನೆಗೊಂದು ದಿನ
ಗುಟುಕು ನೀರಿಗೂ ಗತಿಯಿಲ್ಲದೆ
ಹೋಗಬೇಕು ಮನುಜ//೩//

ಹೆಣ್ಣು ಮಣ್ಣು ಹೊನ್ನು
ಅನುಭವಿಸಿದರೂ
ಕೊನೆಗೊಂದು ದಿನ
ಹೆಣ್ಣಿನ ಮಡಿಲಲ್ಲಿ ಮಣ್ಣಲ್ಲಿ ಮಣ್ಣಾಗಿ ಹೊನ್ನು ಕಾಣದೇ ಹೋಗಬೇಕು ಮನುಷ್ಯ //೪//

ತನಗೂ ತನ್ನವರಿಗೆ ಎಂದು
ಹಗಲಿರುಳು ಎಡೆಬಿಡದೆ ದುಡಿದರು 
ಕೊನೆಗೊಂದು ದಿನ ಮಡದಿ ಮಕ್ಕಳು ಬಂಧು ಬಳಗ ಬಿಟ್ಟು
ಮಡಿದು ಹೋಗಬೇಕು ಮನುಜ//೫//

- ಶಿವಾನಂದ ಕಲಬುರಗಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...